Bengaluru New 2nd Airport: ಬೆಂಗಳೂರು ವಿಮಾನ ನಿಲ್ದಾಣ: ಮಾಗಡಿಯ ಈ ಜಾಗ ಫಿಕ್ಸ್: ಕೇಂದ್ರ ತಂಡದಿಂದ ಪರಿಶೀಲನೆ!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಮಾಡಿರುವ ಮೂರು ಜಾಗಗಳನ್ನು ಬಿಟ್ಟು ಹೊಸ ಜಾಗದಲ್ಲಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾಗಡಿ ಗ್ರಾಮಾಂತರ ಪ್ರದೇಶದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಂಡದಿಂದ ಪರಿಶೀಲನೆ ಪರಿಶೀಲನೆ ನಡೆದಿದೆ. ಇಲ್ಲಿನ ಮೋಟಗಾನಹಳ್ಳಿ ಹಾಗೂ ಚಿಕ್ಕಸೋಲೂರಿನಲ್ಲಿ ಭರ್ಜರಿ ಕೆಲಸಗಳು ನಡೆದಿವೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಕೇಂದ್ರ ತಂಡವು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದೆ. ಇದೀಗ ಸದ್ದಿಲ್ಲದೆ ಮತ್ತೊಂದು ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಶುರು ಮಾಡಿಕೊಂಡಿದ್ದು, ಇಲ್ಲಿಯವರೆಗಿನ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಕರ್ನಾಟಕ ಕೈಗಾರಿಕಾ ಇಲಾಖೆ ಮತ್ತು ಎಎಐ ಕೇಂದ್ರ ತಂಡವು ಹೊಸ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡುತ್ತಿದೆ. ಈ ಮೂಲಕ ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿರುವ ಜಾಗಗಳೊಂದಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸದೊಂದು ಜಾಗ ಸೇರ್ಪಡೆಯಾಗಿದೆ.

ಎರಡು ಜಾಗ ಪರಿಶೀಲನೆ: ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಚಿಕ್ಕಸೋಲೂರು ಹಾಗೂ ಸಿಡಗದ ಹಳ್ಳಿ ಎರಡು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು. ಸ್ಥಳ ಪರಿಶೀಲನೆ ಪ್ರಕ್ರಿಯೆಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಅಧಿಕಾರಿಗಳ ತಂಡವು ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿವೆ.
ಭರ್ಜರಿ ಯೋಜನೆ: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದೇ ಭಾಗದಲ್ಲಿ ನಿರ್ಮಾಣವಾದರೂ ಆ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದೇ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿ / ಶಾರ್ಟ್ ಲಿಸ್ಟ್ ಮಾಡಿರುವ ಜಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದ್ದು. ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಇದೀಗ ಹೊಸದಾಗಿ ಶಾರ್ಟ್ ಲಿಸ್ಟ್ ಆಗಿರುವ ಪ್ರದೇಶದಲ್ಲಿ ಈಗಾಗಲೇ ಹಲವು ಪ್ರಮುಖ ಯೋಜನೆಗಳು ಇವೆ. ಇದರೊಂದಿಗೆ ವಿಮಾನ ನಿಲ್ದಾಣ ನಿರ್ಮಾಣ ಜಾಗವೂ ಅಂತಿಮವಾದರೆ ಈ ಭಾಗದಲ್ಲಿ ಭೂಮಿ ಹೊಂದಿರುವವರು ಕೋಟ್ಯಾಧಿಪತಿಗಳಾಗುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.
ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಸೋಲೂರು ಹೋಬಳಿಯಲ್ಲಿ ವರ್ತುಲ ರಸ್ತೆ, ವರ್ತುಲ ರೈಲ್ವೆ ಹಾಗೂ ಉಪನಗರ ಯೋಜನೆಗಳು ಇವೆ. ಈ ಯೋಜನೆಗಳಿಂದಲೂ ಇಲ್ಲಿ ಭೂಮಿಗೆ ಸಾಕಷ್ಟು ಡಿಮ್ಯಾಂಡ್ ಇದೆ. ಈ ರೀತಿ ಇರುವಾಗ ವಿಮಾನ ನಿಲ್ದಾಣವೂ ಫೈನಲ್ ಆಗೋದರೆ ಅದೃಷ್ಟ ಅಂತಲೇ ಹೇಳಲಾಗುತ್ತಿದೆ.
ಡಿ.ಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್: ಇನ್ನು ಮಾಗಡಿ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣದ ಪ್ಲ್ಯಾನ್ ಹಿಂದೆ ಡಿ.ಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲ್ಯಾನ್ ಇದೆ ಅಂತಲೇ ಹೇಳಲಾಗುತ್ತಿದೆ. ಸದ್ದಿಲ್ಲದೆ ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿರುವುದನ್ನು ನೋಡಿದರೆ, ಬಿಜೆಪಿ - ಜೆಡಿಎಸ್ ಮೈತ್ರಿ ಪ್ರಭಾವ ಬೀರಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications