Lovers Romance: ಬೆಂಗಳೂರಿನಲ್ಲಿ ಚಲಿಸುತ್ತಿರುವ ಬುಲೆಟ್ ಬೈಕ್ ಮೇಲೆ ಪ್ರೇಮಿಗಳ ರೊಮ್ಯಾನ್ಸ್: ವಿಡಿಯೋ ಭಾರೀ ವೈರಲ್
Lovers Romance: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮಗೇ ಅರಿವಿಲ್ಲದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ಯುವಕ, ಯುವತಿಯರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿರುವವರು ಒಂದು ಕಡೆಯಾದ್ರೆ, ಮತ್ತೊಂದೆಡೆ ಪ್ರೇಮಿಗಳು ಪಾರ್ಕ್, ನಡುರಸ್ತೆ, ವಾಹನಗಳ ಮೇಲೆ ಅಷ್ಟೇ ಅಲ್ಲದೆ, ಸಾರ್ಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲೇ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಮತ್ತೆ ಇಂತಹದ್ದೇ ಘಟನೆಯೊಂದು ನಗರದಲ್ಲಿ ಮತ್ತೆ ಮರುಕಳಿಸಿದೆ.
ನಗರದಲ್ಲಿ ಕೆಲ ಯುವಕರು ಎಲ್ಲೆ ಮೀರಿ ಕಾನೂನುಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸಿರುವ ತುಂಬಾ ದೃಶ್ಯಗಳು ಈಗಾಗಲೇ ವೈರಲ್ ಆಗಿದ್ದು, ಅಂತಹವರ ಹೆಡೆಮುರಿ ಕಟ್ಟುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಿದ್ದಾರೆ. ಅಷ್ಟಾದರೂ ಇದೀಗ ಮತ್ತೆ ಸರ್ಜಾಪುರ ರಸ್ತೆಯಲ್ಲಿ ಯುವಕನೊಬ್ಬ ಯುವತಿಯೊಬ್ಬಳನ್ನು ಬೈಕ್ ಚಲಾಯಿಸಿಕೊಂಡೇ ತಬ್ಬಿಕೊಂಡು ಕಿಸ್ ಕೊಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಚಲಿಸುತ್ತಿದ್ದ ಬೈಕ್ ಮೇಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರೇಮಿಗಳು ರೋಮ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ.
ಬುಲೆಟ್ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಹಾಡಹಗಲೇ ಹಗ್, ಕಿಸ್ ಮಾಡುತ್ತಾ ನಡುರಸ್ತೆಯಲ್ಲಿ ಯುವಕ ಬೈಕ್ ಚಲಾಯಿಸಿದ್ದಾನೆ. ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇನ್ನು ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
Hollywood on Bengaluru's road
— Karnataka Portfolio (@karnatakaportf) February 26, 2025
What is happening with the younger generation these days? Is this how they express love for each other, or do they believe that risking their lives in such a reckless manner is a way to prove their affection?
A shocking incident took place on… pic.twitter.com/3dOVtZAc7v
ಇಂತಹ ಹುಚ್ಚರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಂತಹ ಸಾಹಸಕ್ಕೆ ಮತ್ತೆ ಯಾರು ಕೈ ಹಾಕದಂತೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಆಗ್ರಹಿಸಿದ್ದಾರೆ. ಕರ್ನಾಟಕ ಪ್ರೋಟೋ ಫೊಲಿಯೋ ಎಂಬ ಪೇಜ್‍ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ಇನ್ನು ಈ ವಿಡಿಯೋ ಅಧಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪತಿ ಕಿಡ್ನಿ ಮಾರಿಸಿದ ಪತ್ನಿ: ಇತ್ತೀಚಿನ ದಿನಗಳಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಪ್ರೀತಿ ಮಾಡಿ ಮದುವೆಯಾದವರಲ್ಲಿ ಕೆಲವರು ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡಿಕೊಂಡು ಕೊಲೆ ಹಂತಕ್ಕೂ ಹೋಗಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದಕ್ಕೂ ಮಿಗಿಲಾಗಿ ಶಾಕಿಂಗ್ ಘಟನೆಯೊಂದು ಪಶ್ಛಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಪತ್ನಿಯೊಬ್ಬಳು 10,00,000 ರೂಪಾಯಿಗಾಗಿ ತನ್ನ ಗಂಡನ ಕಿಡ್ನಿಯನ್ನ ಒತ್ತಾಯದಿಂದ ಮಾರಿಸಿ, ಅದೇ ಹಣ ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಈ ಶಾಕಿಂಗ್ ಘಟನೆ ಹೌರಾ ಜಿಲ್ಲೆಯ ಸಂಕ್ರೈಲ್ನಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಇನ್ನು ಪತ್ನಿಯ ಕಾಟ ತಾಳಲಾರದೆ ಆತ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಇದರಿಂದ ತನ್ನ ಮನೆಯ ಹಣಕಾಸಿನ ಸಮಸ್ಯೆ ಪತ್ನಿ ಹೇಳದಂತೆ ಉತ್ತಮ ಸ್ಥಿತಿಗೆ ಬರಬಹುದು ಎಂದು ನಂಬಿಕೆ ಇಟ್ಟಿದ್ದ. ಆದರೆ, ಈ ಹಣದಿಂದ ಮನೆಯ ಬಡತನದ ಸಮಸ್ಯೆ ಮುಗಿದು ಮಗಳನ್ನು ಚೆನ್ನಾಗಿ ಓದಿಸಿ ಅವಳ ವಿವಾಹ ಮಾಡಬೇಕೆಂದುಕೊಂಡಿದ್ದ.
ಮತ್ತೊಂದೆಡೆ ಪತಿ ತನ್ನ ಕಿಡ್ನಿ ಮಾರಿ ಮನೆತನ ಬಡತನ ನಿರ್ಮೂಲನೆ ಆಗಬಹುದೆಂದು ಕನಸು ಕಾಣುತ್ತಿದ್ದ. ಆದರೆ ಅವನ ಪತ್ನಿ ಅದೇ ಹಣವನ್ನು ತೆಗೆದುಕೊಂಡು ಪೇಂಟ್ ಮಾರುತ್ತಿದ್ದ ರವಿ ದಾಸ್ ಎಂಬುವವನ ಜೊತೆ ಪ್ರೇಮಾಂಕುರದಲ್ಲಿ ಮುಳುಗಿ ಹೋಗಿದ್ದಳು. ಪತಿ ಕಿಡ್ನಿ ಮಾರಿ ಅದರಿಂದ ಬಂದಂತಹ 10,00,000 ರೂಪಾಯಿ ಹಣವನ್ನು ನಂಬಿಕೆಯಿಟ್ಟು ಪತ್ನಿಯ ಕೈಗೆ ಕೊಟ್ಟಿದ್ದ. ಆದರೆ, ಆಕೆ ರವಿದಾಸ್ ಜೊತೆ ಅದೇ ಹಣದೊಂದಿಗೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಕೊನೆಗೆ ಪತ್ನಿಯ ನಿಜಬಣ್ಣ ಬಯಲಾದ ಬಳಿಕ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
-
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications