'ಆಕಸ್ಮಿಕ' ಸಿನಿಮಾ ನೆನಪು ಮಾಡುವಂತ ಕೃತ್ಯ ಬೆಂಗಳೂರಿನಲ್ಲಿ!

ಬೆಂಗಳೂರು, ಆಗಸ್ಟ್ 20: ಸಿನಿಮಾದಲ್ಲಿ ಬರುವ ಪಾತ್ರಗಳು ಕಾಲ್ಪನಿಕ ಎಂದು ತೋರಿಸಲಾಗುತ್ತದೆ. ಕೆಲವು ಸಿನಿಮಾಗಳು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡೇ ಸಿನಿಮಾವಾಗಿರುತ್ತದೆ. ಆದರೆ ನೈಜ ಜೀವನದ ಕಥೆಗಳು ಕೆಲವೊಮ್ಮೆ ಸಿನಿಮಾವನ್ನು ಮೀರಿಸುವಂತೆ ನಡೆದುಬಿಟ್ಟಿರುತ್ತದೆ. ಪ್ರೀತಿಸಿದವನೇ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಲ್ಲದೇ ನಿರಂತರ ಅತ್ಯಾಚಾರಕ್ಕೂ ಕಾರಣವಾಗಿದ್ದಾನೆ.

ಯುವತಿಯರು ಮನೆಯಲ್ಲಿನ ಬಡತನವನ್ನು ಕಂಡು ಶೋಕಿ ಮಾಡುವ ಹುಡುಗರನ್ನು ನಂಬಿಬಿಡುತ್ತಾರೆ. ಅಂಗೈನಲ್ಲೇ ಅರಮನೆಯನ್ನು ತೋರಿಸಿ ಮಾತಿನಲ್ಲೇ ಮಂಟಪವನ್ನು ಕಟ್ಟುವ ಕೆಲವು ಯುವಕರು ಯುವತಿಗೆ ಹೇಗೆ ಮೋಸವನ್ನು ಮಾಡಬಹುದು ಎಂದು ಹೊಂಚು ಹಾಕಿಕೊಂಡು ಕಾಯುತ್ತಿರುತ್ತಾರೆ.

ಪ್ರೀತಿಯ ನೆಪದಲ್ಲಿ ಯುವತಿಯನ್ನು ಯಾಮಾರಿಸೋ ಕೆಲಸವನ್ನು ಮಾಡಿ ಕೆಲವು ಯುವಕರು ಮಾಡಿಬಿಡುತ್ತಾರೆ. ಹೆಣ್ಣು ಇರುವುದೇ ಪುರಷರ ಚಪಲವನ್ನು ತೀರಿಸೋಕೆ ಅನ್ನೋ ಕೀಳು ಮನೋಭಾವನೆಯನ್ನು ತುಂಬಿಕೊಂಡಿರುತ್ತಾರೆ. ತನ್ನೊಂದಿಗೆ ಇರುವ ತಾಯಿ, ಅಕ್ಕ,ತಂಗಿಯನ್ನು ಕ್ಷಣ ಮಾತ್ರ ನೆನೆಸಿಕೊಂಡುರು ಇಂಥ ಹೀನ ಕೃತ್ಯವನ್ನು ಯಾವುದೇ ಮನುಷ್ಯನು ಮಾಡಲಾರನು.

 ಆಕಸ್ಮಿಕ ಸಿನಿಮಾ ನೆನಪು ಮಾಡುವ ಕೃತ್ಯ

ಆಕಸ್ಮಿಕ ಸಿನಿಮಾ ನೆನಪು ಮಾಡುವ ಕೃತ್ಯ

ಆಕಸ್ಮಿಕ ಸಿನಿಮಾವನ್ನು ನೆನಪು ಮಾಡುವಂತ ಕೃತ್ಯವದು. ಆಕಸ್ಮಿಕ ಸಿನಿಮಾದಲ್ಲಿ ಬಡತನ ಹೊಂದಿರುವ ಮನೆಗೆ ವಜ್ರಮುನಿ ಎಂಟ್ರಿ ಕೊಡ್ತಾನೆ. ಆ ಬಳಿಕ ಮನೆಯವರನ್ನು ಪುಸಲಾಯಿಸಿ ಕೆಲಸವನ್ನು ಕೊಡಿಸುವ ನೆಪದಲ್ಲಿ ಗೀತಾಳನ್ನು ಕರೆದುಕೊಂಡು ಹೋಗಲಾಗುತ್ತದೆ. ಆದರೆ, ಆ ಯುವತಿಗೆ ಕಳನಟ ತನ್ನನ್ನು ವೇಶ್ಯಾವಾಟಿಕೆ ದಂಧೆಗೆ ನೂಕಲು ಕರೆದುಕೊಂಡು ಹೋಗುತ್ತಿದ್ದಾನನೆ ಎಂಬುದು ತಿಳಿದಿರುವುದಿಲ್ಲ. ಆದರೆ ರಾಜ್‌ಕುಮಾರ್‍‌ಗೆ ವಜ್ರಮುನಿ ಬಗ್ಗೆ ತಿಳಿದುಬಿಡುತ್ತೆ. ಹೀಗೆ ಸಿನಿಮಾ ಸಾಗುತ್ತೆ. ಆದರೆ ನೈಜ ಜೀವನದಲ್ಲೂ ಯುವತಿಗೆ ಕೆಲಸವನ್ನು ಕೊಡಿಸುವ ನೆಪದಲ್ಲಿ ಸಿಲಿಕಾನ್ ಸಿಟಿಗೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ಬಲವಂತವಾಗಿ ನೂಕಲಾಗಿದೆ.

 ಲಾಡ್ಜ್ ನಲ್ಲಿಟ್ಟು ವೇಶ್ಯವಾಟಿಕೆ ದಂಧೆ

ಲಾಡ್ಜ್ ನಲ್ಲಿಟ್ಟು ವೇಶ್ಯವಾಟಿಕೆ ದಂಧೆ

ಮಂಡ್ಯ ಮೂಲದ ಯುವತಿಯನ್ನು ಕೆಸಲ ಕೊಡಿಸುವ ನೆಪದಲ್ಲಿ ಕರೆತದು ವೇಶ್ಯಾವಾಟಿಕೆ ದಂಧೆಗೆ ನೂಕಿದ್ದಲ್ಲದೇ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿರೋದು ತಿಳಿದು ಬಂದಿದೆ. ಯುವತಿಯನ್ನು ಲಾಡ್ಜ್ ನಲ್ಲಿಟ್ಟು ವೇಶ್ಯವಾಟಿಕೆ ದಂಧೆ ನಡೆಸಿದ್ದಾರೆ‌. ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು. ಈ ವೇಳೆ ಗ್ಯಾಂಗ್ ರೇಪ್ ಮಾಡಲಾಗಿದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಯುವತಿಯನ್ನು ರೌಡಿ ಶೀಟರ್ ಜೊತೆಗೆ ಬಲವಂತವಾಗಿ ಕಳುಹಿಸಿರೋದಾಗಿಯು ಯುವತಿ ಹೇಳಿಕೆ ನೀಡಿದ್ದಾಳೆ.

 ಒಂದು ದಿನಕ್ಕೆ ಹತ್ತು ಪುರುಷರು!

ಒಂದು ದಿನಕ್ಕೆ ಹತ್ತು ಪುರುಷರು!

ಯುವತಿ ಪ್ರಿಯಕರನೇ ಬೆಂಗಳೂರಿಗೆ ಕರೆತಂದು ವೇಶ್ಯವಾಟಿಕರ ನಡೆಸ್ತಿದ್ದ ಮಂಜುಳ ಸಂಪರ್ಕಕ್ಕೆ ಬಿಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂಲದ ಯುವತಿ ಬೆಂಗಳೂರಿಗೆ ಕರೆತರಲಾಗಿತ್ತು. ಮಂಜುಳ ಯುವತಿಯನ್ನ ವೇಶ್ಯಾವಾಟಿಕೆ ಜಾಲಕ್ಕೆ ಬಲವಂತವಾಗಿ ತಳ್ಳಿದ್ದಳು. ಪಿಂಪ್ ಬ್ರಹ್ಮೇಂದ್ರ ಮೂಲಕ ಶಿವಾನಂದ ಸರ್ಕಲ್‌ನಲ್ಲಿ ಸಾಯಿ ಲಾಡ್ಜ್ ನಲ್ಲಿ ದಂಧೆ ನಡೆಸಲಾಗ್ತಿತ್ತು. ಮೊದಲಿಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದಳು. ಆದರೆ ಬಡತನ ಕಾರಣದಿಂದ ಅನುಸರಿಸಿಕೊಂಡು ಹೋಗಿದ್ದಳು. ಆದರೆ ಕಾಲ ಕ್ರಮೇಣ ಯುವತಿಗೆ ಟಾರ್ಚರ್ ನೀಡಿ ಒಂದೆ ದಿನಕ್ಕೆ ಹತ್ತು ಜನರ‌ ಜೊತೆಗೆ ಯುವತಿ ಹೋಗುವಂತೆ ಟಾರ್ಚರ್ ನೀಡಿದ್ದಾರೆ.‌ಕೆಲವೊಮ್ಮೆ ಬಲವಂತ ಪಡಿಸಿ ಸಿಗರೇಟ್ ನಿಂದ ಸುಟ್ಟು ಹಿಂಸಿಸಿರೋದಾಗಿ ಯುವತಿ ಹೇಳಿಕೆ ನೀಡಿದ್ದಾಳೆ‌.

 ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದೇನು?

ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದೇನು?

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಪಿಂಪ್‌ ಭ್ರಮ್ಮೇಂದ್ರ. ಮಂಜುಳ, ಲಾಡ್ಜ್ ಮಾಲೀಕ ಸಂತೋಷ್ ಸೇರಿ ಮೂವರ ಬಂಧನವಾಗಿದೆ. "ಮಹಿಳೆಗೆ ಬಲವಂತವಾಗಿ ಅಕ್ರಮ ಚಟುವಟಿಗೆಗೆ ತಳ್ಳಿರುತ್ತಾರೆ. ನೊಂದ ಮಹಿಳೆಯ ಬಳಿ ದೂರನ್ನು ತೆಗೆದುಕೊಂಡಿದ್ದೇವೆ. ಲಾಡ್ಜ್‌ ಮಾಲೀಕರನ್ನು ಬಂಧಿಸಲಾಗಿದೆ. ಬಲವಂತವಾಗಿ ವೇಶ್ಯಾವಾಟಿಕೆ ನಡೆಸಿರೋದು ಕಂಡುಬಂದಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+