ನೈಸ್ ರಸ್ತೆಯಲ್ಲಿ ಅಪಘಾತ: ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ
ಬೆಂಗಳೂರು, ಸೆಪ್ಟೆಂಬರ್ 14: ಸ್ವಿಫ್ಟ್ ಕಾರು ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಶಮ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಆಯಗೊಂಡಿರುವ ಘಟನೆ ನೈಸ್ ರಸ್ತೆಯ ಹೆಮ್ಮಿಗೆಪುರ ಸೇತುವೆ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಭರತ್(28) ಮೃತರು, ಗುರುವಾರ ರಾತ್ರಿ ಆತ ತನ್ನ ಸ್ನೇಹಿತ ಜಯಂತ್ ಹಾಗೂ ಉದಯ್ ಜೊತೆ ಸ್ವಿಫ್ಟ್ ಕಾರಿನಲ್ಲಿ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದ, ಈ ವೇಳೆ ಹೆಮ್ಮಿಗೆಪುರ ಸೇತುವೆ ಬಳಿ ಹೋಗುತ್ತಿದ್ದ ಸಮಯದಲ್ಲಿ ದೂರದಲ್ಲಿದ್ದ ಲಾರಿ ಕಂಡಿಲ್ಲ ಹತ್ತಿರ ಬಂದಾಗ ಕಂಡರೂ ಬ್ರೇಕ್ ಹಾಕುವ ಸ್ಥಿತಿಯಲ್ಲಿ ಅವರಿರಲಿಲ್ಲ, ವೇಗವಾಗಿ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನೊಳಗಿದ್ದ ಜಯಂತ್ ಹಾಗೂ ಉದಯ್ ಗೆ ಗಂಭೀರ ಗಾಯಗಳಾಗಿವೆ, ವಿಷಯ ತಿಳಿಯುತ್ತಿದ್ದಂತೆ ನೈಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ, ನಂತರ ಉಳಿದವರನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ, ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications