ಮತ ಕರ್ನಾಟಕ: ಮಹಿಳೆಯರದ್ದೇ ಮೇಲುಗೈ, ಆದರೆ
ಬೆಂಗಳೂರು, ಏ.19: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೊನ್ನೆ ನಡೆದ ಮತದಾನದಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ, ಅದೂ ದಾಖಲೆಯ ಪ್ರಮಾಣದಲ್ಲಿ ಗರಿಷ್ಠ ಮತ ಚಲಾಯಿಸಿ ಸೈ ಅನಿಸಿಕೊಂಡಿದ್ದಾರೆ.
ವಿಷಾದನೀಯವೆಂದರೆ ಮಹಿಳೆಯರೇನೋ ಹೆಚ್ಚು ಹೆಚ್ಚು ಮತಗಟ್ಟೆಯತ್ತ ಬರುತ್ತಿದ್ದಾರೆ, ಆದರೆ ಅದೇ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿಯೇ ನೋಡಿ, ಒಟ್ಟು 435 ಮಂದಿ ಕಣದಲ್ಲಿದ್ದರು. ಅವರಲ್ಲಿದ್ದ ಮಹಿಳೆಯರ ಸಂಖ್ಯೆ ಕೇವಲ 23.

ಗಮನಾರ್ಹವೆಂದರೆ ರಾಜ್ಯದಲ್ಲಿ ನಡೆದ ಒಟ್ಟು ಮತದಾನ ಪ್ರಮಾಣ ಮತ್ತು ಮಹಿಳೆಯರದ್ದೇ ಮತದಾನ ಪ್ರಮಾಣ ನಡುವಿನ ವ್ಯತ್ಯಾಸ ಕೂದಲೆಳೆಯ ಅಂತರದಲ್ಲಿದೆ. Lok Sabha election 2014ರಲ್ಲಿ ರಾಜ್ಯದಲ್ಲಿ ಒಟ್ಟು ಮತದಾನ ಶೇ. 67ರಷ್ಟಾಗಿದ್ದರೆ ಮಹಿಳೆಯರು ಶೇ. 66ರಷ್ಟು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ. ಅಂದರೆ ಶೇ. 1.48ರಷ್ಟು ಮಹಿಳೆಯರು ಹೆಚ್ಚಿಗೆ ಮತ ಚಲಾಯಿಸಿದ್ದಾರೆ.
ಈ ಹಿಂದೆ 1999ರ ಲೋಕಸಭಾ ಚುನಾವಣೆಯಲ್ಲಿ ಶೇ. 65ರಷ್ಟು ಮಹಿಳೆಯರು ಮತ ಚಲಾಯಿಸಿದ್ದರು. ಆದರೆ 1980ರಲ್ಲಿ ಅತಿ ಕಡಿಮೆ ಅಂದರೆ ಶೇ. 52ರಷ್ಟು ಮಹಿಳೆಯರು ಮಾತ್ರವೇ ಮತ ಚಲಾಯಿಸಿದ್ದರು. 1971ರ ಲೋಕಸಭಾ ಚುನಾವಣೆಯಿಂದಲೂ ಚುನಾವಣಾ ಆಯೋಗವು ಮಹಿಳೆಯರ ಮತದಾನವನ್ನು ಪ್ರತ್ಯೇಕವಾಗಿ ದಾಖಲಿಸುತ್ತಾ ಬಂದಿದೆ.












Click it and Unblock the Notifications