• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

3ನೇ ಲಾಕ್ ಡೌನ್: ಕರ್ಪ್ಯೂ ರೀತಿ ವಾತಾವರಣ ಇರಲಿದೆ, ಸಾರ್ವಜನಿಕರಿಗೆ ಪೊಲೀಸರ 6 ಸೂಚನೆಗಳು

|

ಬೆಂಗಳೂರು, ಮೇ 4: ಹಲವು ಸಡಿಲಿಕೆಯೊಂದಿಗೆ ಇಂದಿನಿಂದ (ಮೇ 4) ಮೂರನೇ ಲಾಕ್ ಡೌನ್ ಆರಂಭವಾಗಲಿದೆ. ಎರಡು ವಾರಗಳ ಈ ಲಾಕ್ ಡೌನ್ ನಲ್ಲಿ ಹಲವು ವಿನಾಯತಿ ನೀಡಿರುವುದರಿಂದ, ಜನಜೀವನ ಶೇ. 60ರಷ್ಟು ಮಾಮೂಲಿ ಸ್ಥಿತಿಗೆ ಬರುವ ಸಾಧ್ಯತೆಯಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಮೂರನೇ ಲಾಕ್ ಡೌನ್ ವೇಳೆ, ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಬಗ್ಗೆ ಬೆಂಗಳೂರು ಪೊಲೀಸರು ಆರು ಸೂಚನೆಯನ್ನು ನೀಡಿದ್ದು, ಎಲ್ಲರೂ ಪಾಲಿಸಬೇಕಾಗಿ ಕೋರಿದ್ದಾರೆ. ಅದು ಹೀಗಿದೆ:

ಮೇ 4ರಿಂದ ಬೆಂಗಳೂರು ಜನ ಹೊರಗೆ ಬರಬೇಕಂದ್ರೆ ಈ ನಿಯಮಗಳನ್ನು ಪಾಲಿಸಲೇಬೇಕು

1. ಮೂರನೇ ಲಾಕ್ ಡೌನ್ ಅವಧಿಯಲ್ಲಿ 22 ನಿರ್ಬಂಧಿತ ವಲಯಗಳನ್ನು ಹೊರತು ಪಡಿಸಿ, ಕೆಲವೊಂದು ವಿನಾಯತಿಗಳು ಬೆಂಗಳೂರು ನಗರದಾದ್ಯಂತ ಅನ್ವಯಿಸುತ್ತದೆ. ಎಲ್ಲಾ ರೀತಿಯ ಅಂಗಡಿ/ಮಳಿಗೆಗಳನ್ನು ಬೆಳಗ್ಗೆ ಏಳು ಗಂಟೆಯಿಂದ, ಸಂಜೆ ಏಳು ಗಂಟೆಯವರೆಗೆ ತೆರೆಯಬಹುದು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಕೋವಿಡ್-19: ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?

2. ಸಿಎಲ್ 2 (ವೈನ್ ಮತ್ತು ಎಂಆರ್ ಪಿ ಮಳಿಗೆ), ಸಿಎಲ್ - 11ಸಿ (ಎಂಎಸ್ಐಎಲ್) ತೆರೆದು ಮದ್ಯ ಮಾರಾಟ ಮಾಡಬಹುದಾಗಿದೆ. ಮಾರಾಟದ ಸಮಯದಲ್ಲಿ ಆರೋಗ್ಯ ಇಲಾಖೆ ಮಾರ್ಗದರ್ಶಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6.30ರೊಳಗೆ ಮುಗಿಸಿಕೊಳ್ಳತಕ್ಕದ್ದು

ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6.30ರೊಳಗೆ ಮುಗಿಸಿಕೊಳ್ಳತಕ್ಕದ್ದು

3. ಕರ್ಪ್ಯೂ ರೀತಿ ವಾತಾವರಣ ಸೃಷ್ಟಿಸುವ ಕಾರಣ, ಅಗತ್ಯ ವಸ್ತುಗಳ ಖರೀದಿಯನ್ನು ಬೆಳಗ್ಗೆ ಏಳು ಗಂಟೆಯಿಂದ ಸಂಜೆ 6.30ರೊಳಗೆ ಮುಗಿಸಿಕೊಳ್ಳತಕ್ಕದ್ದು. ಆದರೆ, ವೈದ್ಯಕೀಯ ಕ್ಷೇತ್ರ ಮತ್ತು ಇತರ ಅತ್ಯಗತ್ಯ ಕ್ಷೇತ್ರಗಳಿಗೆ ವಿನಾಯತಿಯನ್ನು ಕೊಡಲಾಗುತ್ತದೆ.

ಕಟ್ಟಡ ನಿರ್ಮಾಣ ಸ್ಥಳ

ಕಟ್ಟಡ ನಿರ್ಮಾಣ ಸ್ಥಳ

4. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಅಥವಾ ಸಮೀಪದ ಸ್ಥಳಗಳಲ್ಲಿ ಉಳಿದುಕೊಂಡಿರುವ ಕಾರ್ಮಿಕರು ಎಲ್ಲಾ ರೀತಿಯ ಕಟ್ಟಡ ಮತ್ತು ಕೈಗಾರಿಕಾ ಕೆಲಸಗಳಲ್ಲಿ ತೊಡಗಬಹುದು. ಯಾವುದೇ ಪ್ರತಿಭಟನೆಗೆ ಲಾಕ್ ಡೌನ್ ವೇಳೆ ಅನುಮತಿ ಇರುವುದಿಲ್ಲ.

ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸತಕ್ಕದ್ದು

ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸತಕ್ಕದ್ದು

5. ಬೆಂಗಳೂರು ನಗರ ರೆಡ್ ಝೋನ್ ನಲ್ಲಿರುತ್ತದೆ. ಹಾಗಾಗಿ, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ತಡೆದು ಕೇಸ್ ಹಾಕಲಾಗುವುದು. ಚಾಲಕರು ಕಡ್ಡಾಯವಾಗಿ 30kmph ಗಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವುದು ಮತ್ತು ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸತಕ್ಕದ್ದು.

ಐಪಿಎಸ್ ಸೆಕ್ಷನ್ ಅನ್ವಯ ಕಾನೂನು ರೀತಿಯಲ್ಲಿ ಕ್ರಮ

ಐಪಿಎಸ್ ಸೆಕ್ಷನ್ ಅನ್ವಯ ಕಾನೂನು ರೀತಿಯಲ್ಲಿ ಕ್ರಮ

6. ಅನಗತ್ಯವಾಗಿ ಜನರು ಗುಂಪು ಸೇರಬಾರದು. ನಿಷೇದಾಜ್ಞೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ತಪ್ಪಿದಲ್ಲಿ ಐಪಿಎಸ್ ಸೆಕ್ಷನ್ ಅನ್ವಯ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಲಲಾಗುವುದು. ಎಲ್ಲರೂ ಪೊಲೀಸರಿಗೆ ಸಹಕಾರ ನೀಡಲು ಕೋರಲಾಗಿದೆ.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

English summary
Third Lockdwon From May 4: Six Instructions From Bengaluru Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X