LIVE: ಕರ್ನಾಟಕ ಬಂದ್: ಉತ್ತರ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ

ಬೆಂಗಳೂರು, ಜನವರಿ 25: ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕೋರಿ ವಿವಿಧ ಸಂಘಟನೆಗಳು ಕರೆದಿರುವ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇಂದು(ಜ.25) ನಡೆಯುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲೆಗಳು, ಕಂಪನಿಗಳು ಮುಂಚಿತವಾಗಿಯೇ ರಜೆ ಘೋಷಿಸಿದ್ದವು. ಹಲವು ಶಾಲೆಗಳು ಬೆಳಿಗ್ಗೆ ಪರಿಸ್ಥಿತಿ ನೋಡಿ ನಂತರ ತಿಳಿಸುವುದಾಗಿ ಹೇಳಿವೆ. ಈಗಾಗಲೇ ರಾಜ್ಯದಾದ್ಯಂತ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್, ರೈಲ್ವೇ ನಿಲ್ದಾಣಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Live: Karnataka bandh for Mahadayi on Jan 25th

ಬಂದ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

* ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆ

* ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ

* ಬೆಂಗಳೂರಿನ ಅವೆನ್ಯೂ ರಸ್ತೆ ಅಂಗಡಿಗಳಿಗೆ ಕಲ್ಲೆಸೆತ

* ಮಾಲ್ ಗಳಲ್ಲಿ ಸಂಜೆ ತನಕ ಚಿತ್ರಪ್ರದರ್ಶನವಿಲ್ಲ

* ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತಿದ್ದ 400 ಬಸ್ಸುಗಳ ಸಂಚಾರ ಸ್ಥಗಿತ. ಮುನ್ನೆಚ್ಚರಿಕೆಗಾಗಿ ಈ ಕ್ರಮ

ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

* ಬೆಂಗಳೂರಿನ ಒರಾಯನ್ ಮಾಲ್, ಗರುಡಾ ಮಾಲ್ ಸೇರಿದಂತೆ ಪ್ರಮುಖ ಮಾಲ್ ಗಳೆಲ್ಲ ಮುಚ್ಚಿವೆ

* ಧಾರವಾಡದಲ್ಲಿ ಬಸ್, ಆಟೋ ಸಂಪೂರ್ಣ ಸ್ಥಗಿತ

* ಗದಗದ ನರಗುಂದದಲ್ಲಿ ರಸ್ತೆ ತಡೆ, ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ
* ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕರವೇ ಮುಖಂಡ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ. ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ

Live: Karnataka bandh for Mahadayi on Jan 25th

* ಕಾರ್ಯನಿರ್ವಹಿಸುತ್ತಿರುವ ಓಲಾ, ಊಬರ್ ಕ್ಯಾಬ್ ಗಳು

* ತುಮಕೂರಿನಲ್ಲಿ ಬಸ್ ಸಂಚಾರ ಸ್ಥಗಿತ
* ಮೈಸೂರಿನಲ್ಲೂ ಶಾಲಾ ಕಾಲೇಜುಗಳಿಗೆ ರಜೆಯಿಲ್ಲ: ಜಿಲ್ಲಾಧಿಕಾರಿ ರಂದೀಪ್
* ಹಾಸನದಲ್ಲಿ ಶಾಲಾ-ಕಾಲೇಜುಗಳಿಗೆ ರಜೆಯಿಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
* ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಕರವೇ ಪ್ರವೀಟ್ ಶೆಟ್ಟಿ ಬಣದಿಂದ ಪ್ರತಿಭಟನೆ.

* ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಬಂದ್ ಗೆ ವ್ಯಾಪಕ ಬೆಂಬಲ. ಸಾರಿಗೆ ಸ್ತಬ್ಧ.
* ಗೋವಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಪ್ರತಿಭಟನಕಾರರು

* ಕೆಎಸ್ ಆರ್ ಟಿಸಿ ಬಸ್ ಗಳು ಸಂಪೂರ್ಣ ಸ್ಥಗಿತ
* ಮೈಸೂರಿಗೂ ತಟ್ಟಿದ ಬಂದ್ ಬಿಸಿ, ಬೆಂಗಳೂರಿಗೆ ಬಂದ್ ಚಾಮುಂಡಿ ಎಕ್ಸ್ ಪ್ರೆಸ್ ನಲ್ಲಿ ಜನರೇ ಇಲ್ಲ!
* ಚಿತ್ರದುರ್ಗದಲ್ಲೂ ಪ್ರತಿಭಟನೆ
* ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್ ಗಳು

* ಚೆನ್ನೈ ಎಕ್ಸ್ ಪ್ರೆಸ್ ರೈಲು ತಡೆದು ಪ್ರತಿಭಟನೆ
* ಪ್ರಯಾಣಿಕರ ಪರದಾಟ
* ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಮಲಗಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ
* ಕೆಎಸ್ ಆರ್ ಟಿಸಿ ಬಸ್ ಸೇವೆಯೂ ಬಹುತೇಕ ಖಚಿತ
*ಬಿಎಂಟಿಸಿ ಬಸ್ ಸೇವೆ ಸ್ಥಗಿತ
* ಕೆಂಪೆಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ನಲ್ಲಿ ಎಂದಿನಂತೆ ಸಂಚಾರ ಆರಂಭಿಸಿದ್ದ ಬಿಎಂಟಿಸಿ ಬಸ್ ಗಳನ್ನು ತಡೆದ ಪ್ರತಿಭಟನಾಕಾರರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+