ಶುಭ ಸುದ್ದಿ: ಬೆಂಗಳೂರಿನಲ್ಲಿ 25 ರಿಂದ 19ಕ್ಕೆ ಇಳಿದ ಕಂಟೇನ್ಮೆಂಟ್ ಪ್ರದೇಶಗಳು
ಬೆಂಗಳೂರು, ಮೇ 10: ಕಳೆದೆರಡು ದಿನಗಳಲ್ಲಿ ರಾಜ್ಯದಲ್ಲಿ ಹೊಸ ಸೋಂಕಿತರ ಕೇಸ್ 88 ಮತ್ತು ಬೆಂಗಳೂರಿನಲ್ಲಿ 15 ಕೇಸ್ ದಾಖಲಾಗಿದೆ. ಕೊರೊನಾ ಹಾಟ್ ಸ್ಪಾಟ್ ವಾರ್ಡ್ ನಲ್ಲಿ ಅತಿಹೆಚ್ಚು ಕೇಸ್ ದಾಖಲಾಗಿರುವುದು ಹೊಂಗಸಂದ್ರ ಮತ್ತು ಪಾದರಾಯನಪುರದಲ್ಲಿ.
ಇದರ ನಡುವೆ, ನಗರದ ಕಂಟೇನ್ಮೆಂಟ್ ಪ್ರದೇಶಗಳು ಇಳಿಕೆಯಾಗಿರುವುದು ಮತ್ತು ಕ್ವಾರಂಟೈನ್ ನಲ್ಲಿ ಇರುವವರಲ್ಲೇ ಸೋಂಕು ಹೆಚ್ಚಾಗುತ್ತಿರುವುದು ಗಮನಿಸಬೇಕಾದ ಅಂಶ.
ಅಂದರೆ, ಕೊರೊನಾ ವೈರಸ್ ಇತರ ಪ್ರದೇಶಗಳಿಗೆ ಹೆಚ್ಚು ವ್ಯಾಪಿಸುತ್ತಿಲ್ಲ. ನಾಲ್ಕು ದಿನಗಳ ಕೆಳಗೆ 25 ಕಂಟೇನ್ಮೆಂಟ್ ಪ್ರದೇಶಗಳು ರಾಜಧಾನಿಯಲ್ಲಿದ್ದವು, ಅದು ಈಗ 19ಕ್ಕೆ ಇಳಿಕೆಯಾಗಿದೆ.
ಆರು ಪ್ರದೇಶಗಳನ್ನು ಡಿ-ಕಂಟೇನ್ಮೆಂಟ್ ಪ್ರದೇಶಗಳನ್ನಾಗಿ ಮಾಡಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಯಾವುದೇ ಹೊಸ ಕೇಸ್ ದಾಖಲಾಗದೇ ಇದ್ದಿರುವುದರಿಂದ, ಈ ಪ್ರದೇಶಗಳಿಗೆ ಸೀಲ್ಡ್ ಡೌನ್ ನಿಂದ ಮುಕ್ತಿ ಸಿಗಲಿದೆ. 6 ಡಿ-ಕಂಟೇನ್ಮೆಂಟ್, 19 ಕಂಟೇನ್ಮೆಂಟ್ ಪ್ರದೇಶಗಳ ಪಟ್ಟಿ ಇಂತಿದೆ:

ಡಿ-ಕಂಟೇನ್ಮೆಂಟ್ ಪ್ರದೇಶಗಳು
1. ರಾಧಾಕೃಷ್ಣ ದೇವಸ್ಥಾನ
2. ಮಾರುತಿ ಸೇವಾನಗರ
3. ರಾಮಸ್ವಾಮಿ ಪಾಳ್ಯ
4. ಹೊಸಹಳ್ಳಿ
5. ಕರೀಸಂದ್ರ
6. ಪುಲಿಕೇಶಿನಗರ

ಕಂಟೇನ್ಮೆಂಟ್ ಪ್ರದೇಶಗಳು - 1
1. ಜಗಜೀವನರಾಂ ನಗರ
2. ವಸಂತ ನಗರ
3. ಮಂಗಮ್ಮನ ಪಾಳ್ಯ
4. ಬಿಳೇಕಹಳ್ಳಿ
5. ಹೊಂಗಸಂದ್ರ
6. ಬೇಗೂರು
7. ಹಗದೂರು

ಕಂಟೇನ್ಮೆಂಟ್ ಪ್ರದೇಶಗಳು - 2
8. ಶಿವಾಜಿನಗರ
9. ಯಶವಂತಪುರ
10. ಆರ್ ಆರ್ ನಗರ
11. ಕೃಷ್ಣರಾಜ ಮಾರುಕಟ್ಟೆ
12. ಸುಧಾಮನಗರ
13. ಹಂಪಿ ನಗರ

ಕಂಟೇನ್ಮೆಂಟ್ ಪ್ರದೇಶಗಳು - 2
14. ದೀಪಾಂಜಲಿ ನಗರ
15. ಭೈರಸಂದ್ರ
16. ಬಿಟಿಎಂ ಲೇಔಟ್
17. ಮಲ್ಲೇಶ್ವರ
18. ಪಾದರಾಯನಪುರ
19. ಛಲವಾದಿ ಪಾಳ್ಯ












Click it and Unblock the Notifications