Liquor Sales: ₹400 ಕೋಟಿ ರೂಪಾಯಿ ಎಣ್ಣೆ ಕುಡಿದ ಮದ್ಯ ಪ್ರಿಯರು!
ಎಣ್ಣೆ ಬೇಕು ಅಣ್ಣಾ... ಹಿಂಗೆ ಹೊಸ ವರ್ಷದ ದಿನ ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನರು ಓಡಾಡಿದ್ದು ಉಂಟು. ಯಾಕಂದ್ರೆ ಹೊಸ ವರ್ಷಾಚರಣೆ ಅಂದ್ರೆನೇ ಎಣ್ಣೆ ಹೊಡೆಯೋದು ಅಂತಾ ಕೆಲವರು ತಿಳಿದುಕೊಂಡ ರೀತಿ ಇದೆ. ಹೀಗಾಗಿಯೇ ಎಣ್ಣೆ ಅಂದ್ರೆ ಲಿಕ್ಕರ್ ಹೊಳೆಯೇ ಹರಿದು ಹೋಗಿದೆ. ಚನ್ನಾಗಿ ಕುಡಿದು ಬೆಂಗಳೂರಿನ ಬೀದಿ ಬೀದಿಗಳಲ್ಲಿ ತೂರಾಡಿದವರೇ ಹೆಚ್ಚು, ಹೀಗಿದ್ದಾಗ ಕುಡುಕರ ಕೃಪೆಯಿಂದ ರಾಜ್ಯ ಸರ್ಕಾರದ ಖಜಾನೆಗೆ ಕೋಟಿ ಕೋಟಿ ರೂಪಾಯಿ ಹರಿದು ಬಂದಿದೆ!
ಒಬ್ಬರಿಗೆ ಒಂದು ಕ್ವಾಟರ್, ಇನ್ನೂ ಕೆಲವರಿಗೆ 2 ಕ್ವಾಟರ್ ಕೊಟ್ಟರೂ ಸಾಲೋದಿಲ್ಲ. ಈ ನಡುವೆ 90 ಹೊಡೆದು ಟೈಟ್ ಆಗಿ ಬೀಳುವವರು ಕೂಡ ಇದ್ದಾರೆ. ಎಲ್ಲಾ ಅವರ ಕೆಪಾಸಿಟಿ ಮೇಲೆ ಡಿಪೆಂಡ್ ಎನ್ನಬಹುದು. ಹೊಸ ವರ್ಷ ಸೆಲೆಬ್ರೇಷನ್ ಮಾಡುವಾಗ ದುಡ್ಡಿಗೆಲ್ಲಾ ಲೆಕ್ಕ ಹಾಕೋದಿಲ್ಲ ನಮ್ಮ ಜನ. ಹೀಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಜನ ಎಂಜಾಯ್ ಮಾಡ್ತಾ ಇದ್ದು, ಹೊಸ ವರ್ಷಾಚರಣೆ ದಿನವೇ ಸುಮಾರು ₹400 ಕೋಟಿ ರೂಪಾಯಿ ಎಣ್ಣೆ ಕುಡಿದ ಮದ್ಯ ಪ್ರಿಯರು ಸರ್ಕಾರಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ!

₹400 ಕೋಟಿ ರೂಪಾಯಿ ಎಣ್ಣೆ ಸೇಲ್!
ಹೌದು, ಸರ್ಕಾರಗಳಿಗೆ ಭರ್ಜರಿ ಆದಾಯ ಬರುವುದೇ ಎಣ್ಣೆ ಅರ್ಥಾತ್ ಲಿಕ್ಕರ್ ಮಾರಾಟದ ಮೂಲಕ. ಇದೇ ಕಾರಣಕ್ಕೆ ಹೊಸ ವರ್ಷದ ದಿನ ಭರ್ಜರಿ ಎಣ್ಣೆ ಸೇಲ್ ಮಾಡಲು ಸರ್ಕಾರ ಕೂಡ ಸಕಲ ತಯಾರಿ ಮಾಡಿಕೊಂಡಿತ್ತು. ಅದೇ ರೀತಿಯಾಗಿ ಹೊಸ ವರ್ಷದ ಹಿಂದಿನ ರಾತ್ರಿ ಪೂರ್ತಿ ಭಾರಿ ಭರ್ಜರಿ ಎಣ್ಣೆ ಸೇಲ್ ಆಗಿದ್ದು, ಬರೋಬ್ಬರಿ ₹400 ಕೋಟಿ ರೂಪಾಯಿ ಎಣ್ಣೆ ಸೇಲ್ ಆಗಿದೆಯಂತೆ.
ಬೆಂಗಳೂರಲ್ಲಿ ಭರ್ಜರಿ ಎಣ್ಣೆ ಸೇಲ್!
ಹೊಸ ವರ್ಷದ ದಿನ ಹೊಸದಾಗಿ ಕುಡಿಯುವವರ ಜೊತೆಗೆ ಹಳೇ ಕುಡುಕರು ಕೂಡ ಸೇರಿದ್ದು ಭರ್ಜರಿ ಎಣ್ಣೆ ಸೇಲ್ ಆಗಿದೆ. ಬೆಂಗಳೂರಿನ ಬಾರ್ & ರೆಸ್ಟೋರೆಟ್‌ಗಳು ಮಾತ್ರವಲ್ಲ, ಅತ್ತ ಎಂಆರ್‌ಪಿ ಶಾಪ್ & ಎಂಎಸ್‌ಐಎಲ್ ಶಾಪ್‌ಗಳ ತುಂಬಾ ಮದ್ಯಪ್ರಿಯ ಜನರು ನೊಣಗಳಂತೆ ಮುತ್ತಿಕೊಂಡು ಎಣ್ಣೆ ಖರೀದಿ ಮಾಡಿದ್ದಾರಂತೆ. ಈ ಮೂಲಕ ಮದ್ಯ ಮಾರಾಟ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಲು ಜೋರಾಗಿ ನಡೆದಿದೆ.
ಒಟ್ನಲ್ಲಿ ಕುಡಿದು ಫುಲ್ ಎಂಜಾಯ್ ಮಾಡಿದ ಜನ 2025ರ ಹೊಸ ವರ್ಷವನ್ನು ವೆಲ್‌ಕಂ ಮಾಡಿದ್ದಾರೆ. ಮತ್ತೊಂದು ಕಡೆ ಹೊಸ ವರ್ಷದ ಮೊದಲ ದಿನವೇ ಕರ್ನಾಟಕ ಸರ್ಕಾರಕ್ಕೂ ಭಾರಿ ಭರ್ಜರಿ ಇನ್‌ಕಂ ಬಂದಿದ್ದು, ಅಬಕಾರಿ ಅಧಿಕಾರಿಗಳು ಫುಲ್ ಖುಷ್ ಆಗಿದ್ದಾರೆ. ಇದೇ ವೇಳೆ ಬಾರ್ & ಎಂಆರ್‌ಪಿ ಅಂಗಡಿಗಳ ಮಾಲೀಕರ ಜೇಬು ತುಂಬಿದಂತಾಗಿದೆ.












Click it and Unblock the Notifications