Alcohol Price: ಜಿಎಸ್‌ಟಿ: ಮದ್ಯದ ಬೆಲೆ ಹೆಚ್ಚಳವಾಗಲಿದೆಯೇ, ಮದ್ಯ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್!
Alcohol Price: ಕೇಂದ್ರ ಸರ್ಕಾರವು ಜಿಎಸ್‌ಟಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಸುಧಾರಣೆಗಳನ್ನು ತಂದಿದೆ. ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಪ್ರಾರಂಭಿಸಿದಾಗಿನಿಂದಲೂ ಇದರಲ್ಲಿ ಕೆಲವೊಂದು ಗೊಂದಗಳು ಇದ್ದವು. ಇದೀಗ ಜಿಎಸ್‌ಟಿ 2.0ದಲ್ಲಿ ದೇಶದಾದ್ಯಂತ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಅಲ್ಲದೇ ಇದೇ ಸಂದರ್ಭದಲ್ಲಿ ತಂಬಾಕು ಹಾಗೂ ಗುಟ್ಕಾ ಸೇರಿದಂತೆ ಕೆಲವೊಂದು ವಸ್ತುಗಳ ಮೇಲೆ ವಿಪರೀತವಾದ ತೆರಿಗೆಯನ್ನು ವಿಧಿಸಲಾಗಿದೆ. ಹಾಗದರೆ ಮದ್ಯದ ಕಥೆ ಏನು. ಮದ್ಯದ ಬೆಲೆ ಏರಿಕೆ ಆಗಿದೆಯೇ ಅಥವಾ ಮುಂದಿನ ದಿನಗಳಲ್ಲಿ ಆಗಲಿದೆಯೇ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಇನ್ನು ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆಯ ವಿಚಾರದಲ್ಲಿ ದೇಶದಾದ್ಯಂತ ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಅನ್ನೇ ಕೊಟ್ಟಿದೆ. ಸಾಮಾನ್ಯವಾಗಿ ಕೆಲವೊಂದು ಕ್ಷೇತ್ರಗಳಲ್ಲಿ ಬೆಲೆ ಏರಿಕೆಯಾದರೆ ಅದೇ ಕ್ಷೇತ್ರದ ಪ್ರಮುಖ ವಸ್ತುವಿನ ಬೆಲೆ ಏರಿಕೆಯೂ ಆಗುತ್ತದೆ. ಆದರೆ ಜಿಎಸ್‌ಟಿ ಪರಿಷ್ಕರಣೆಯಲ್ಲಿ ತಂಬಾಕು ಮತ್ತು ಗುಟ್ಕಾ ಸೇರಿದಂತೆ ಕೆಲವೊಂದು ವಸ್ತುಗಳ ಪರಿಷ್ಕರಣೆ ಮಾಡಲಾಗಿದೆಯಾದರೂ ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಕೊಡಲಾಗಿದೆ.

ಭಾರತದ ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಯಲ್ಲಿ ಮದ್ಯವನ್ನು ಸೇರಿಸಿಲ್ಲ. ಇದರಿಂದ ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಂತೆ ಆಗಿದೆ. ಮದ್ಯ ಪ್ರಿಯರಿಗೆ ಈಗಗಾಲೇ ಬೆಲೆ ಏರಿಕೆಯ ಶಾಕ್ ಉಂಟಾಗಿದೆ. ಜಿಎಸ್‌ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಮದ್ಯವೂ ಜಿಎಸ್‌ಟಿ ವ್ಯಾಪ್ತಿಗೆ ಸೇರಲಿದೆಯೇ ಎನ್ನುವ ಪ್ರಶ್ನೆ ಮೂಡಿತ್ತು. ಆದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆಯನ್ನು ಮಾಡಿಲ್ಲ. Sin Goods ಅಥವಾ Sin Tax ವ್ಯಾಪ್ತಿಯಲ್ಲಿ ಮದ್ಯವನ್ನು ಸೇರಿಸಿಲ್ಲ.
ಮದ್ಯವನ್ನು ಮೊದಲಿನಿಂದಲೂ ಜಿಎಸ್‌ಟಿ ವ್ಯಾಪ್ತಿಗೆ ತಂದಿರಲಿಲ್ಲ. ಈ ಬಾರಿಯೂ ಜಿಎಸ್‌ಟಿ ಪರಿಷ್ಕರಣೆ ಮಾಡುವಾಗ ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗುತ್ತದೆಯೇ ಎನ್ನುವ ವಿಷಯ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ರಾಜ್ಯಗಳು ಅಬಕಾರಿ ಸುಂಕ ಮತ್ತು VAT ನಂತಹ ತಮ್ಮದೇ ಆದ ತೆರಿಗೆಗಳನ್ನು ವಿಧಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಈಗಲೂ ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿಸಲಾಗಿದೆ. ಮದ್ಯ ಮಾರಾಟದಿಂದ ರಾಜ್ಯಗಳಿಗೆ ಅಪಾರವಾದ ಆದಾಯ ಹರಿದು ಬರುತ್ತದೆ. ಅಲ್ಲದೇ ಮದ್ಯವನ್ನು ಏಕೀಕೃತ GST ಚೌಕಟ್ಟಿನ ಅಡಿಯಲ್ಲಿ ತಂದರೆ ನಷ್ಟವಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ, ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿಸಲಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ.
ಹೊಸ ಪರಿಷ್ಕರಣೆ ಜನರಿಗೆ ಸಂತೋಷ: ಇನ್ನು ಕೇಂದ್ರ ಸರ್ಕಾರವು ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿರುವುದಕ್ಕೆ ಜನ ಸಹ ಸಂತೋಷಿತರಾಗಿದ್ದಾರೆ. ಜಿಎಸ್‌ಟಿ ಬದಲಾವಣೆಯಿಂದ ಹಲವು ವಸ್ತುಗಳ ಬೆಲೆ ಇಳಿಕೆ ಆಗಿದೆ. ಇದನ್ನು ಕೇಂದ್ರ್ ಸರ್ಕಾರವು ದೀಪಾವಳಿ ಗಿಫ್ಟ್ ಎಂದು ಬಣ್ಣಿಸಿದೆ.












Click it and Unblock the Notifications