ಕುಡುಕರ 'ಈ' ಮೂರು ಬಿಲ್ ನೋಡಿ ಎಲ್ಲರ ತಲೆ ಗಿರ ಗಿರ ಗಿರ ಅಂದಿದೆ!
ಬೆಂಗಳೂರು, ಮೇ 5: ಅಂತೂ ಇಂತೂ ಕುಡುಕರ ಪಾಲಿನ ದೇವಸ್ಥಾನ ಓಪನ್ ಆಗೇ ಹೋಯ್ತು. ಒಂದು ಕಡೆ ಲಾಕ್ ಡೌನ್.. ಇನ್ನೊಂದು ಕಡೆ ಖಾಲಿ ಬಾಟ್ಲು.. ಕ್ವಾಟ್ರು ಇಲ್ಲದೆ ಕಂಗಾಲಾಗಿ ಹೋಗಿದ್ದ ಎಣ್ಣೆ ಪ್ರಿಯರಿಗೆ ನಿನ್ನೆಯಿಂದ ನಿಜವಾದ ಹಬ್ಬ ಶುರುವಾಗಿಬಿಟ್ಟಿದೆ.
Recommended Video
ಲಾಕ್ ಡೌನ್ 3.0 ಮಾರ್ಗಸೂಚಿ ಅನುಸಾರ, ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ನಿನ್ನೆಯಿಂದ ಬಾಟಲ್ ಗಟ್ಟಲೆ ಮದ್ಯ ಖರೀದಿ ಮಾಡಲು ಅಂಗಡಿಗಳ ಮುಂದೆ ಜನ ಕ್ಯೂ ನಿಂತಿದ್ದಾರೆ.
ಮದ್ಯ ಮಾರಾಟದಿಂದ ನಿನ್ನೆ (ಮೇ 4) ಫಸ್ಟ್ ಡೇ ಕಲೆಕ್ಷನ್ ಬೊಂಬಾಟ್ ಆಗಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 45 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಆಯುಕ್ತರೇ ಮಾಹಿತಿ ನೀಡಿದ್ದಾರೆ.
ಈ ನಡುವೆ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಗೆ ಸಾಥ್ ನೀಡಿದ ಮೂರು ಬಿಲ್ ಗಳು ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಆ ಮೂರು ಬಿಲ್ ಗಳಲ್ಲಿನ 'ವ್ಯಾಪಾರದ ಮೊತ್ತ' ನೋಡಿದವರ ತಲೆ ಮೂರು ಪೆಗ್ ಹೊಡೆದವರಿಗಿಂತ ಹೆಚ್ಚು ಗಿರ ಗಿರ ಗಿರ ಅಂತ ತಿರುಗುತ್ತಿದೆ.

ಎಣ್ಣೆ ಪಾರ್ಟಿ.. ಸೌಂಡ್ ಪಾರ್ಟಿ.!
ಮದ್ಯಂಗಡಿ ಓಪನ್ ಆಗಿದ್ದೇ ತಡ.. ಎಣ್ಣೆ ಪ್ರಿಯರೊಬ್ಬರು ಖರೀದಿ ಮಾಡಿರುವ ಮದ್ಯದ ಬಿಲ್ ಇದು. ಅಂದ್ಹಾಗೆ, ಅವರ ಬಿಲ್ ಎಷ್ಟಾಗಿದೆ ಗೊತ್ತಾ.? ಬರೋಬ್ಬರಿ 95,347 ರೂಪಾಯಿ.! ಅಷ್ಟೊಂದು ದುಡ್ಡು ಕೊಟ್ಟು 6 ವಿವಿಧ ಬ್ರ್ಯಾಂಡ್ ಗಳ ಒಟ್ಟು 83 ಬಾಟಲ್ ಗಳನ್ನು ಮದ್ಯಪ್ರಿಯರೋರ್ವರು ಬ್ಯಾಗ್ ಗೆ ತುಂಬಿಸಿಕೊಂಡು ಮನೆಗೆ ಹೋಗಿದ್ದಾರೆ.

ಮೂರೇ ಬ್ರ್ಯಾಂಡ್.. ಆದರೆ ಬಿಲ್ ನೋಡಿ...
ಮಂಗಳೂರಿನಲ್ಲಿ ಮದ್ಯಪ್ರಿಯರೊಬ್ಬರು ಪಾವತಿ ಮಾಡಿರುವ ಬಿಲ್ ಇದು. ಅವರು ಕೊಂಡುಕೊಂಡಿರುವುದು ಮೂರೇ ಬ್ರ್ಯಾಂಡು. ಆದರೆ, ಬಿಲ್ ಎಷ್ಟಾಗಿದೆ ಗೊತ್ತೇ.? 59,952 ರೂಪಾಯಿ.!

ಸಖತ್ ಟ್ರೆಂಡಿಂಗ್ ಆದ ಬಿಲ್
ಮದ್ಯದಂಗಡಿಗಳು ತೆರೆದ ಕೂಡಲೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆದ ಬಿಲ್ ಇದು. 52,841 ರೂಪಾಯಿ ಮೌಲ್ಯದ 17 ವಿವಿಧ ಬ್ರ್ಯಾಂಡ್ ಗಳ 128 ಬಾಟಲ್ ಗಳನ್ನು ಕಲೆಹಾಕಿಕೊಂಡಿದ್ದಾರೆ ಓರ್ವ 'ಕುಡುಕ' ಮಹಾಶಯ.

45 ಕೋಟಿ ರೂಪಾಯಿ ಮದ್ಯ ಮಾರಾಟ
ನಿನ್ನೆ ಒಂದೇ ದಿನ ಸುಮಾರು 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಒಟ್ಟು 12.4 ಲಕ್ಷ ಲೀಟರ್ ಮದ್ಯದ ಮೌಲ್ಯ 45 ಕೋಟಿ ರೂಪಾಯಿಗಳು ಎಂದು ಅಬಕಾರಿ ಇಲಾಖೆ ಆಯುಕ್ತರು ಮಾಹಿತಿ ಕೊಟ್ಟಿದ್ದಾರೆ. ಆದರೆ ಮೂಲಗಳ ಪ್ರಕಾರ ಬಂದಿರುವ ಮಾಹಿತಿ ದಂಗು ಬಡಿಸುವಂತಿದೆ. ಸುಮಾರು ಒಂದು ನೂರು ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಮದ್ಯ ನಿನ್ನೆ ಒಂದೇ ದಿನದಲ್ಲಿ ಮಾರಾಟವಾಗಿದೆ ಎಂಬ ಮಾಹಿತಿಯಿದೆ.












Click it and Unblock the Notifications