ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತರಿಗೆ ಒಲಿದೀತೇ ಬೆಂಗಳೂರು ಮೇಯರ್ ಗದ್ದುಗೆ?

|
Google Oneindia Kannada News

Recommended Video

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸೆ.೨೮ ಕ್ಕೆ | Oneindia Kannada

ಬೆಂಗಳೂರು, ಸೆ.26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಸ್ಥಾನಕ್ಕೆ ಸೆ.28ರಂದು ಚುನಾವಣೆ ನಿಗದಿಯಾಗಿದೆ. ಲಿಂಗಾಯತರಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಡ ಕಾಂಗ್ರೆಸ್ ನಿಂದ ಹೆಚ್ಚಿದೆ.

ಈ ಕುರಿತು ವೀರಶೈವರು/ಲಿಂಗಾಯತ ಮುಖಂಡರು ಹಾಗೂ ವಿವಿಧ ಮಠಾಧೀಶರು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯೇ ಬಿಬಿಎಂಪಿ ಮೇಯರ್! ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯೇ ಬಿಬಿಎಂಪಿ ಮೇಯರ್!

ಬೆಂಗಳೂರು ಇತಿಹಾಸದಲ್ಲಿ ಒಂದು ಸಲವೂ ಕೂಡ ಲಿಂಗಾಯತರಿಗೆ ಮೇಯರ್ ಆಗುವ ಅವಕಾಶ ಲಭ್ಯವಾಗಿಲ್ಲ, ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆಗಳಲ್ಲಿಯೂ ಲಿಂಗಾಯತರಿಗೆ ಅವಕಾಶ ನೀಡಿಲ್ಲ.

Lingayaths strongly lobbying for Bengaluru mayor post

ಮುಂದಿನ ಲೋಕಸಭಾ ಚುನಾವಣೆ, ಮೈಸೂರು ವಿಭಾಗ ಮತ್ತು ಬೆಂಗಳೂರಿನಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಬೇಕಾದರೆ ಈ ಬಾರಿ ಲಿಂಗಾಯತರಿಗೆ ಮೇಯರ್ ಸ್ಥಾನವನ್ನು ನೀಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಮಠಾಧೀಶರು, ಕೆಲವು ಲಿಂಗಾಯತ ಮುಖಂಡರು ಸಭೆ ನಡೆಸಿದ್ದಾರೆ.ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ್ದಾರೆ.

ಬಿಬಿಎಂಪಿಯಲ್ಲೂ ರೆಸಾರ್ಟ್ ಪಾಲಿಟಿಕ್ಸ್: ಪಕ್ಷೇತರರಿಗೆ ಡಿಮ್ಯಾಂಡ್ ಬಿಬಿಎಂಪಿಯಲ್ಲೂ ರೆಸಾರ್ಟ್ ಪಾಲಿಟಿಕ್ಸ್: ಪಕ್ಷೇತರರಿಗೆ ಡಿಮ್ಯಾಂಡ್

ಈಸಲದ ಬೆಂಗಳೂರು ಮೇಯರ್ ಚುನಾವಣೆಯಲ್ಲಿ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕೂಡ ಕಾಂಗ್ರೆಸ್ ನ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಿಗೆ ಮನವಿ ಮಾಡಿದ್ದಾರೆ. ಮೇಯರ್ ಚುನಾವಣೆಗೆ ಇನ್ನೂ ಎರಡೇ ದಿನ ಬಾಕಿ ಇದೆ, ಯಾರಿಗೆ ಸಿಗುತ್ತದೆ ಮೇಯರ್ ಪಟ್ಟ ಎನ್ನುವ ಕುಲೂಹಲ ಎಲ್ಲರಲ್ಲಿದೆ.

English summary
Many Congress leaders belongs to Lingayath community have lobbying for banga mayor post which election will be held on September 28. Meanwhile former minister Ramalingareddy batted before party leaders for corporator Gangambika who belonged to the same community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X