Leopard in Bengaluru: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಚಿರತೆ ಓಡಾಟ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಜನರಿಗೆ ಎಚ್ಚರಿಕೆ ವಹಿಸಲು ಕೇಳಲಾಗಿದೆ. ಪ್ರಮುಖ ಟೆಕ್ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಬಳಿ ಫ್ಲೈಓವರ್ ದಾಟುವ ಸಂದರ್ಭದಲ್ಲಿ ಚಿರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂಜಾನೆ 3 ಗಂಟೆ ವೇಳೆಗೆ ಕಾಣಿಸಿಕೊಂಡಿದ್ದು, ರಾತ್ರಿ ವೇಳೆ ಸಂಚರಿಸುವವರಿಗೆ ಆತಂಕ ಶುರುವಾಗಿದೆ.
1ನೇ ಹಂತದ ಟೋಲ್ ಪ್ಲಾಜಾದಲ್ಲಿನ ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಸೆರೆಯಾಗಿದ್ದು, ಚಿರತೆ ರಸ್ತೆ ದಾಟುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಚಿರತೆಯು ಪನಕ್ ಇಂಡಿಯಾ ಕಂಪನಿ ಪ್ರದೇಶದಿಂದ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನ (NTTF) ಮೈದಾನಕ್ಕೆ ಹೋಗುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಮಹಾನಗರದಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ವಾರದ ಹಿಂದೆ ಕೂಡ ಜಿಗಣಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು, ಅದೂ ಇದೂ ಒಂದೇ ಚಿರತೆ ಇರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
Leopard spotted in Bengaluru's IT Hub, Causes panic among workers#ViralVideo #LeopardinITHub #ITHub #Bengaluru #LeopardInBengaluru pic.twitter.com/1iQybEjvof
— Business Today (@business_today) September 17, 2024
ಮುನ್ನೆಚ್ಚರಿಕೆ ಕ್ರಮ
ಚಿರತೆ ಕಾಣಿಸಿಕೊಂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಟಿಟಿಎಫ್‌ನ ಪ್ರಾಂಶುಪಾಲ ಸುನಿಲ್ ಜೋಶಿ, "ಕಾಂಪೌಂಡ್ ಗೋಡೆ ಬಳಿ ಚಿರತೆ ಇರುವ ದೃಶ್ಯಗಳನ್ನು ನಾವು ಟೋಲ್ ಗೇಟ್ ಕ್ಯಾಮೆರಾದಿಂದ ಪಡೆದುಕೊಂಡಿದ್ದೇವೆ. ಕ್ಯಾಂಪಸ್‌ನಲ್ಲಿ ಮುನ್ನೆಚ್ಚರಿಕೆಯಾಗಿ ತಪಾಸಣೆ ನಡೆಸಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿ ಚಿರತೆ ಇಲ್ಲ ಎಂದು ಹೇಳಿದ್ದಾರೆ. ಕ್ಯಾಮೆರಾ ದೃಶ್ಯಗಳು ಅಲ್ಲಿ ಚಿರತೆ ಮುಂದೆ ಹೋಗಿದೆ ಎನ್ನುವುದನ್ನು ತೋರಿಸಿದೆ. ತರಬೇತಿ ಕೇಂದ್ರವಾಗಿರುವ ಕಾರಣ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಹೇಳಿದರು.
ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದು, ಯಾವುದೇ ಕ್ಯಾಮೆರಾದಲ್ಲಿ ಚಿರತೆ ಓಡಾಟ ಕಾಣಿಸಿಲ್ಲ. ಕಾಂಪೌಂಡ್ ಪಕ್ಕದಲ್ಲಿರುವ ರಸ್ತೆಯ ಬಳಿ ಮಾತ್ರ ಚಿರತೆ ಹೋಗಿರುವುದು ಸೆರೆಯಾಗಿದೆ. ಆದರೆ ಈಗ ಎಲ್ಲಿದೆ ಎನ್ನುವುದು ತಿಳಿದುಬಂದಿಲ್ಲ ಎಂದರು.











Click it and Unblock the Notifications