90 ಲಕ್ಷದ ಕೆಲಸ ಬಿಟ್ಟು, ಸೋತರೂ ಛಲ ಬಿಡದೆ 30 ಸಾವಿರದಲ್ಲಿ ಮೈಕ್ರೋಗ್ರೀನ್ಸ್ ಉದ್ಯಮ ಕಟ್ಟಿ ಕೋಟ್ಯಾಧಿಪತಿಯಾದ ಮೋಹಿತ್

ಯಶಸ್ಸು ಎಂದರೆ ಕೇವಲ ದೊಡ್ಡ ಕಂಪನಿ, ಕೈತುಂಬಾ ಸಂಬಳ ಮತ್ತು ಉನ್ನತ ಹುದ್ದೆ ಎಂದು ಬಹುತೇಕರ ಮನಸ್ಸಿನಲ್ಲಿರುತ್ತದೆ. ಆದರೆ, ವಾರ್ಷಿಕ 90 ಲಕ್ಷ ರೂಪಾಯಿ ಸಂಬಳ ತರುವ ಕಾರ್ಪೊರೇಟ್ ಕೆಲಸವನ್ನಾ ಬಿಟ್ಟು, ಸ್ವಂತ ಉದ್ಯಮ ಶುರು ಮಾಡಿ, ಮೊದಲ ಬಾರಿ ಸೋತರೂ ಛಲ ಬಿಡದೆ ಕೇವಲ 30 ಸಾವಿರ ರೂಪಾಯಿ ಬಂಡವಾಳದಲ್ಲಿ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಮೋಹಿತ್ ನಿಜವಾನ್ ಅವರ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ.

ಭರತ್ ಪ್ರಜಾಪತಿ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಇವರ ಈ ಯಶೋಗಾಥೆ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Left 90L Rupees Job Failed Once Now Runs 1 44 Crore Microgreens Business Mohit Nijhawan Success Story

ಕಾರ್ಪೊರೇಟ್ ಕೆಲಸ ಬಿಡಲು ಕಾರಣವೇನು?

ಮೋಹಿತ್ ನಿಜವಾನ್ ಅವರು ಫಾರ್ಮಾಸ್ಯುಟಿಕಲ್ (ಔಷಧಿ) ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ಸನೋಫಿ-ಜೆನ್‌ಜೈಮ್ (Sanofi-Genzyme) ಕಂಪನಿಯಲ್ಲಿ ಪ್ರಾದೇಶಿಕ ಲೀಡರ್‌ ಆಗಿ ಉನ್ನತ ಹುದ್ದೆಯಲ್ಲಿದ್ದರು. ಆದರೆ, ಕ್ಯಾನ್ಸರ್ ಮಹಾಮಾರಿಯಿಂದಾಗಿ ತಮ್ಮ ಕುಟುಂಬದ ಸದಸ್ಯರೊಬ್ಬರನ್ನ ಕಳೆದುಕೊಂಡಾಗ ಅವರು ಬದುಕನ್ನ ನೋಡುವ ದೃಷ್ಟಿಕೋನವೇ ಬದಲಾಯಿತು.

ಆರೋಗ್ಯ, ಆಹಾರ ಪದ್ಧತಿ ಮತ್ತು ದೈನಂದಿನ ಜೀವನಶೈಲಿಯ ನಡುವಿನ ಸಂಬಂಧದ ಬಗ್ಗೆ ಆಳವಾಗಿ ಚಿಂತಿಸಲು ಆರಂಭಿಸಿದರು. ಇದೇ ಕಾರಣಕ್ಕಾಗಿ ಡಿಸೆಂಬರ್ 2020ರಲ್ಲಿ ತಮ್ಮ 90 ಲಕ್ಷ ರೂಪಾಯಿ ಪ್ಯಾಕೇಜ್‌ನ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಮೊದಲ ವ್ಯಾಪಾರದಲ್ಲಿ ಸೋಲು

ಕಾರ್ಪೊರೇಟ್ ಜಗತ್ತಿನಿಂದ ಹೊರಬಂದ ನಂತರ 2021ರಲ್ಲಿ ಮೋಹಿತ್ ಅವರು ಮೈಕ್ರೋಗ್ರೀನ್ಸ್ ಕೃಷಿಯಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟರು. ಆದರೆ, ಪಾಲುದಾರರ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಕೆಲವು ಆರಂಭಿಕ ಹಿನ್ನಡೆಗಳಿಂದಾಗಿ ಆ ವ್ಯಾಪಾರ ಕೈಗೂಡಲಿಲ್ಲ.

ಆ ಸಮಯದಲ್ಲಿ ಅವರು ತಮ್ಮ ಹಳೆಯ ಸುಖದಾಯಕ ಕಾರ್ಪೊರೇಟ್ ಕೆಲಸಕ್ಕೆ ಮರಳುವ ಎಲ್ಲ ಅವಕಾಶಗಳಿದ್ದವು. ಆದರೆ, ಸೋಲೊಪ್ಪಿಕೊಳ್ಳದ ಅವರು ಮತ್ತೊಮ್ಮೆ ಶೂನ್ಯದಿಂದ ಹೊಸ ಪ್ರಯತ್ನಕ್ಕೆ ಕೈಹಾಕಲು ನಿರ್ಧರಿಸಿದರು.

30 ಸಾವಿರ ಬಂಡವಾಳ: ಗ್ರೀನು ಮೈಕ್ರೋಗ್ರೀನ್ಸ್ ಯಶೋಗಾಥೆ

ಮೇ 2022ರಲ್ಲಿ ಮೋಹಿತ್ ನಿಜವಾನ್ ಮೈಕ್ರೋಗ್ರೀನ್ಸ್ ಕೃಷಿಯನ್ನ ಮತ್ತೆ ಹೊಸದಾಗಿ ಆರಂಭಿಸಿದರು. ಈ ಬಾರಿ ಕೇವಲ 30,000 ರೂಪಾಯಿ ಬಂಡವಾಳದೊಂದಿಗೆ ಚಂಡೀಗಢದಲ್ಲಿ 100 ಚದರ ಅಡಿಯ ಸಣ್ಣ ಬಾಡಿಗೆ ಕೊಠಡಿಯಲ್ಲಿ ತಮ್ಮ ಕೆಲಸ ಶುರು ಮಾಡಿದರು. ಕೇವಲ ಮೂರು ರಾಕ್‌ಗಳು, ಕೆಲವು ಟ್ರೇಗಳು, ಗ್ರೋ ಲೈಟ್ಸ್ ಮತ್ತು ಬೀಜಗಳನ್ನು ಬಳಸಿ ತಮ್ಮ 'ಗ್ರೀನು ಮೈಕ್ರೋಗ್ರೀನ್ಸ್' ಉದ್ಯಮವನ್ನ ಕಟ್ಟಿದರು. ಕಾರ್ಪೊರೇಟ್ ಕೆಲಸದಿಂದ ಗಳಿಸಿದ್ದ ಆರ್ಥಿಕ ಭದ್ರತೆ ಅವರಿಗೆ ಈ ರಿಸ್ಕ್ ತೆಗೆದುಕೊಳ್ಳಲು ದೊಡ್ಡ ಮಟ್ಟಿಗೆ ನೆರವಾಯಿತು.

ಮೈಕ್ರೋಗ್ರೀನ್ಸ್ ಉದ್ಯಮದ ವರಮಾನ

ಒಂದು ಸಣ್ಣ ಕೊಠಡಿಯಲ್ಲಿ ಆರಂಭವಾದ ಗ್ರೀನು ಮೈಕ್ರೋಗ್ರೀನ್ಸ್ ಇಂದು 500 ಚದರ ಅಡಿಯ ಸುಸಜ್ಜಿತ ಘಟಕವಾಗಿ ಬೆಳೆದು ನಿಂತಿದೆ. ಸುಮಾರು 60 ರಾಕ್‌ಗಳನ್ನು ಹೊಂದಿದ್ದು, ತಿಂಗಳಿಗೆ 12,000 ಟ್ರೇಗಳನ್ನ ಉತ್ಪಾದಿಸುವ ಬೃಹತ್ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಈ ಉದ್ಯಮವು ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ವಾರ್ಷಿಕ ಬರೋಬ್ಬರಿ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಇದರಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ನಿವ್ವಳ ಲಾಭಾಂಶವಿದೆ.

ಕೇವಲ ಹಣ ಮತ್ತು ಹುದ್ದೆ ಮಾತ್ರ ವೃತ್ತಿಬದುಕಿನ ಬೆಳವಣಿಗೆಯಲ್ಲ. ನಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಅರಿತು, ಎಷ್ಟೇ ಅಡೆತಡೆಗಳು ಬಂದರೂ ಆ ನಿಟ್ಟಿನಲ್ಲಿ ಹೆಜ್ಜೆ ಇಡುವುದು ನಿಜವಾದ ಯಶಸ್ಸು ಎಂಬುದನ್ನು ಮೋಹಿತ್ ನಿಜವಾನ್ ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+