ಈ ಕನ್ನಡ ಉಚಿತ ಶಾಲೆಯಲ್ಲಿ ಅಚ್ಚರಿ ಖಚಿತ
ಬೆಂಗಳೂರು, ಜೂ.25: ಇಂಗ್ಲಿಷ್ ಕಲಿಯಲು ಸ್ಪೋಕನ್ ಇಂಗ್ಲಿಷ್ ಕ್ಲಾಸ್ಗೆ ಹೋಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ನಗರದಲ್ಲಿ ಕನ್ನಡ ಬಾರದ ಅನ್ಯಭಾಷಿಕರಿಗಾಗಿ ಸ್ಪೋಕನ್ ಕನ್ನಡ ಕೋಚಿಂಗ್ ತರಗತಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನಗಳನ್ನು ವಿವಿಧ ಸಂಘ ಸಂಸ್ಥೆಗಳು ನಡೆಸಿಕೊಂಡು ಬಂದಿದೆ. ಈ ಮಧ್ಯೆ ನಗರದಲ್ಲೊಬ್ಬರು ಸದ್ದಿಲ್ಲದೇ ಅನ್ಯಭಾಷಿಕರಿಗೆ ಉಚಿತವಾಗಿ ಕನ್ನಡ ಕಲಿಸುತ್ತಿದ್ದಾರೆ.
ಎಚ್ಎಎಲ್ನ ನಿವೃತ್ತ ಅಧಿಕಾರಿಯಾಗಿರುವ ನಾಗಭೂಷಣ್ ಅವರು ಬೆಂಗಳೂರಿನಲ್ಲಿರುವ ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಕನ್ನಡ ತರಗತಿ ಆರಂಭಗೊಂಡಿದ್ದು ಇದುವರೆಗೂ ಐನೂರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಿದ್ದಾರೆ.[ಕನ್ನಡೇತರರ ಕನ್ನಡ ಶಾಲೆಗೆ ವರ್ಷದ ಹರ್ಷ!]
ಇಂದಿರಾನಗರದ ನಿವಾಸಿಯಾಗಿರುವ ಇವರು ವಾರಾಂತ್ಯದ ಮೂರು ದಿನಗಳಲ್ಲಿ ಸಂಜೆ 5ರಿಂದ 6.30ರವರೆಗೆ ತಮ್ಮ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. 10-15 ಮಂದಿ ಸದಸ್ಯರ ತಂಡಕ್ಕೆ ಒಂದು ತಿಂಗಳ ಕಾಲ ಉಚಿತವಾಗಿ ವ್ಯವಹಾರಕ್ಕೆ ತಕ್ಕಷ್ಟು ಕನ್ನಡವನ್ನು ಕಲಿಸುತ್ತಿದ್ದಾರೆ.

ಎಚ್ಎಎಲ್ನಿಂದ ನಿವೃತ್ತನಾದ ಮೇಲೆ ಕನ್ನಡ ಸೇವೆ ಮಾಡಬೇಕು ಎಂದು ಯೋಚಿಸಿ ಈ ತರಗತಿಯನ್ನು ಆರಂಭಿಸಿದ್ದೇನೆ. ಈ ತರಗತಿಯಿಂದ ಬಹಳಷ್ಟು ಜನ ವ್ಯವಹಾರ ಜ್ಞಾನಕ್ಕಾಗುವಷ್ಟು ಕನ್ನಡ ಮಾತನಾಡಲು ಕಲಿತಿದ್ದಾರೆ ಎಂದು ನಾಗಭೂಷಣ್ ಹೇಳುತ್ತಾರೆ.
ಎಳವೆಯಲ್ಲೇ ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ನಾಗಭೂಷಣ್ ಅವರು ವಿಮಾನಯಾನ ಮತ್ತು ನೌಕಾಯಾನ ಹೆಸರಿನ ಎರಡು ಕವನ ಸಂಕಲನವನ್ನು ಹೊರ ತಂದಿದ್ದಾರೆ. ಎಚ್ಎಎಲ್ನಲ್ಲಿ ಕನ್ನಡ ಸಂಘವನ್ನು ಹುಟ್ಟು ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವರ್ತೂರು ವಿಧಾನಸಭಾ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಉಡುಪಿ ಕನ್ನಡ ಸಾಹಿತ್ಯ ಪರಿಷತ್ನಿಂದ ಕನ್ನಡಶ್ರೀ ಪ್ರಶಸ್ತಿಯನ್ನು ಸಹ ಇವರು ಪಡೆದಿದ್ದಾರೆ. ಸೇವೆಯಿಂದ ನಿವೃತ್ತರಾದರೂ ಉಚಿತವಾಗಿ ಕನ್ನಡ ಕಲಿಸುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಉಚಿತವಾಗಿ ಕನ್ನಡ ಕಲಿಯುವ ಆಸಕ್ತರು ಈ ವಿಳಾಸಕ್ಕೆ ಭೇಟಿ ನೀಡಿ ಎನ್.ನಾಗಭೂಷಣ್ ಅವರನ್ನು ಸಂಪರ್ಕಿಸಬಹುದು.
ಎನ್.ನಾಗಭೂಷಣ್
"ಸ್ನೇಹ"
ಇಂದಿರಾ ನಗರ ಕ್ಲಬ್ ಹತ್ತಿರ
531, 4ನೇ ಕ್ರಾಸ್
9 ನೇ ಎಚ್ಎಎಲ್ 2 ನೇಹಂತ
ಇಂದಿರಾನಗರ- ಬೆಂಗಳೂರು
ದೂ: 080 2529-3664
ಮೊಬೈಲ್ : 98440-51067

-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications