Cyclone Effect: ಬೆಂಗಳೂರಲ್ಲಿ ಮಧ್ಯಾಹ್ನವೇ ಜೋರು ಮಳೆ, ಮುಂದಿನ 48 ಗಂಟೆ ಅತ್ಯಧಿಕ ಮಳೆ
ಬೆಂಗಳೂರು, ನವೆಂಬರ್ 15: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಚಳಿ ವಾತಾವರಣ ಜೊತೆಗೆ ಆಗಾಗ ಜಿಟಿ ಜಿಟಿ ಮಳೆ, ಒಂದಷ್ಟು ಪ್ರದೇಶಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಈ ಮಳೆಗೆ ಚಂಡಮಾರುತ ಪ್ರಭಾವ ಅಂತಲೂ ಹೇಳಲಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನ ಬೆಂಗಳೂರಿಗೆ ಭಾರೀ ಮಳೆ, ಚಳಿ ಕಾಡಲಿದೆ ಎಂದು ಮುನ್ಸೂಚನೆ ನೀಡಿದೆ.
ಹೌದು, ಶುಕ್ರವಾರ ಬೆಳಗ್ಗೆಯಿಂದ ಸಹಜ ವಾತಾವರಣ ಇತ್ತು. ಮಧ್ಯಾಹ್ನ 2.30ರ ಸುಮಾರಿಗೆ ನೋಡ ನೋಡುತ್ತಿದ್ದಂತೆ ಜಿಟಿ ಜಿಟಿ ಮಳೆ ಆರಂಭವಾಯಿತು. ಬಳಿಕ ಬಿಸಿಲಿನ ದರ್ಶನವಾಗಿ ಅಚ್ಚರಿ ಉಂಟು ಮಾಡಿತು. ಇತ್ತೀಚಿನ ದಿನಗಳಲ್ಲಿ ನಗರ ನಿವಾಸಿಗಳು ಬೆಂಗಳೂರಿನಲ್ಲಿ ಯಾವಾಗ ಎಂತಹ ವಾತಾವರಣ ನಿರ್ಮಾನವಾಗುತ್ತದೋ ತಿಳಿಯುತ್ತಿಲ್ಲ.

ಬೆಳಗ್ಗೆ ಮಬ್ಬು ವಾತಾವರಣ ಜೊತೆಗೆ ತುಸು ಚಳಿ ಅನ್ನಿಸಿದರೆ, ಮಧ್ಯಾಹ್ನ ಒಣ ಹವೆಯಂತೆ ಬೇಸಿಗೆ ರೀತಿ ಭಾಸವಾಗುತ್ತದೆ. ನಂತರ ಸಂಜೆ ದಿಢೀರ ಮಳೆ ಆಗಿ, ಮಳೆಗಾಲ ವಾತಾವರಣ ನಿರ್ಮಿಸುತ್ತಿದೆ. ಆಗಾಗ ಬಂದು ಹೋಗುತ್ತಿರುವ ಮಳೆ, ಬಿಸಿಲಿಗೆ ಜನರೇ ಕನ್ಫೂಸ್ ಆಗಿದ್ದಾರೆ. ಬಿಸಿಲಿದೆ ಎಂದು ರೈನ್ ಕೋಟ್, ಕೊಡೆ ಬಿಟ್ಟು ಬಂದರೆ, ಸಂಜೆ ಜೋರು ಮಳೆಗೆ ತೊಯ್ದು ತೆಪ್ಪೆಯಾವ ಪರಿಸ್ಥಿತಿ ಇದೆ ಎಂದು ಕೋರಮಂಗಲ ಖಾಸಗಿ ಕಂಪನಿ ನೌಕರರೊಬ್ಬರು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕೋರಮಂಗಲ, ಮಡಿವಾಳ, ಸರ್ಜಾಪುರ ರಸ್ತೆ, ಡೈರಿ ವೃತ್ತ, ಲಾಲ್ ಬಾಗ್, ಬೆಳ್ಳಂದೂರು, ಮಾರತ್ತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ದೊಡ್ಡಾನೆಕುಂದಿ, ಎಚ್‌ಎಎಲ್ ಏರ್‌ಪೋರ್ಟ್, ಕಾಡುಗೋಡಿ ಸೇರಿದಂತೆ ಸುಮಾರು ಎಂಟತ್ತು ವಾರ್ಡ್‌ಗಳಲ್ಲಿ ದಿಢೀರನೇ ಜೋರು ಮಳೆ ಆಯಿತು.
#ಬಿಬಿಎಂಪಿ #ಮಳೆ #ಮುನ್ಸೂಚನೆ : ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. #bengalururains #KarnatakaVarthe#BBMP #Rainfall #Forecast: Fairly Widespread very light to light rains are likely over the region. pic.twitter.com/JvvvBBQ1wE
— Karnataka State Natural Disaster Monitoring Centre (@KarnatakaSNDMC) November 15, 2024
ಮುಂದಿನ 48 ನಗರಕ್ಕೆ ಭಾರೀ ಮಳೆ
ಈ ಮಳೆ ಇಂದು ತಡರಾತ್ರಿವರೆಗೂ ಕೆಲವು ಬಡಾವಣೆಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ನೆನ್ನೆ ಗುರುವಾರ ಅಟ್ಟೂರು, ಯಲಹಂಕ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕೆ ಪ್ರದೇಶ, ಬಾಗಲಗುಂಟೆ ಪ್ರದೇಶಗಳಲ್ಲಿ ಕನಿಷ್ಠ 10ರಿಂದ ಗರಿಷ್ಠ 15 ಮಿಲಿ ಮೀಟರ್ ಮಳೆ ಆಗಿದೆ.

ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಬೆಳಗ್ಗೆ ಹಾಗೂ ಸಂಜೆ ತೇವಭರಿತ ಗಾಳಿ ಬೀಸಲಿದೆ. ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ವಿಪರೀತ ಮಳೆ ಆಗುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಮತ್ತೆ ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಸೃಷ್ಟಿಯಾಗಬಹುದು ಎಂದು ಐಎಂಡಿ ಅಂದಾಜಿಸಲಾಗಿದೆ.
ಇದಕ್ಕೆ ಬಂಗಾಳಕೊಲ್ಲಿಯಲ್ಲಿ ಆಗಿರುವ ಹವಾಮಾನ ಬದಲಾವಣೆ ಕಾರಣಗಳಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.












Click it and Unblock the Notifications