ತಿರುಗೋ ಭೂಮಿಗೆ ಗೊತ್ತು , ಕನ್ನಡಕ್ಕಿರುವ ಗತ್ತು... ಅಂತ ಅನ್ನೋದು ಇದೇ ಕಾರಣಕ್ಕೆ!
ಕರ್ನಾಟಕದಲ್ಲಿ ಹೊರಗಿನಿಂದ ಬಂದ ಯಾರು ಎಷ್ಟೇ ಎಗರಾಡಿದರು ನಡೆಯಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. "ತಿರುಗೋ ಭೂಮಿಗೆ ಗೊತ್ತು, ಕನ್ನಡಕ್ಕಿರುವ ಗತ್ತು"... ಎನ್ನುವ ಮಾತು ಹಿಂದಿವಾಲಾನ ಚೀರಾಟದ ವಿಷಯದಲ್ಲೂ ನಿಜವಾಗಿದೆ. ಬೆಂಗಳೂರಿನಲ್ಲಿ ಉತ್ತರ ಭಾರತೀಯನೊಬ್ಬ ಬೆಂಗಳೂರಾದರೂ ಹಿಂದಿಯಲ್ಲಿ ಮಾತನಾಡು ಅಂತ ಆಗ್ರಹಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹಿಂದಿವಾಲ ಕನ್ನಡಿಗರ ಮುಂದೆ ಕ್ಷಮೆಯಾಚಿಸಿದ್ದಾನೆ. ಅದೇನು ಅಂತ ಈ ವಿಡಿಯೋದಲ್ಲಿ ಇದೆ.
ಬೆಂಗಳೂರಿನಲ್ಲಿ ಉತ್ತರ ಭಾರತದಿಂದ ಅಥವಾ ಹಿಂದಿವಾಲಾಗಳ ಹಾವಳಿ ದಿನೇ ದಿನೆ ಹೆಚ್ಚಳವಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರೂ. ಕೆಲವರು ಮಾಡುವ ಕುಚೇಷ್ಟೆಗಳು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ರೀತಿ ಹಿಂದಿವಾಲಾನೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಮೇಲೆ ಆತ ಮತ್ತೊಂದು ವಿಡಿಯೋ ಮಾಡಿದ್ದಾನೆ. ಅದೇನು ಎನ್ನುವ ವಿವರ ನೋಡೋಣ.

ಅಣ್ಣಂದಿರೇ ಕ್ಷಮಿಸಿ...
ಬೆಂಗಳೂರಿನಲ್ಲಿ ಕಾರು ಚಾಲಕನೊಂದಿಗೆ ದರ್ಪ ಮೆರೆದಿದ್ದ ಹಿಂದಿವಾಲಾ ಇದೀಗ ಮತ್ತೊಂದು ವಿಡಿಯೋ ಮಾಡಿ ಕನ್ನಡಿಗರ ಬಳಿ ಕ್ಷಮೆ ಕೇಳಿದ್ದಾನೆ. ಅದರಲ್ಲೂ ಕನ್ನಡದಲ್ಲಿಯೇ ಮಾತನಾಡಿದ್ದಾನೆ. " ಮೊದಲನೆಯದಾಗಿ ಕರ್ನಾಟಕದಲ್ಲಿ ಇರುವ ಎಲ್ಲಾ ಕನ್ನಡಿಗರ ಬಳಿ ಕ್ಷಮೆಯಾಚಿಸುತ್ತೇನೆ. ನಾನು ಕಳೆದ 9 ವರ್ಷಗಳಿಂದಲೂ ಬೆಂಗಳೂರಿನ ಭಾಗವಾಗಿದ್ದೇನೆ. ಬೆಂಗಳೂರಿನೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಬೆಂಗಳೂರು ನನಗೆ ಜೀವನ ಕೊಟ್ಟಿದೆ. ಅದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ಗಳಿಸುತ್ತಿರುವ ಹಣ ಸಹ ಇದೇ ಊರಿನಿಂದ ಬರುತ್ತಿದೆ. ನನಗೆ ಬೆಂಗಳೂರು ತುಂಬಾ ಇಷ್ಟ ಅಂತ ಹೇಳಿದ್ದಾನೆ.
ಮುಂದುವರಿದು ನಾನು ಕರ್ನಾಟಕದ ಜನರಿಗೆ ಹಾಗೂ ಕನ್ನಡಿಗರಿಗೆ ಏನಾದರೂ ತಪ್ಪಾಗಿ ಹೇಳಿದ್ದರೆ. ಅದಕ್ಕೆ ನಾನು ಮನಃಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಹತ್ತಿರದಲ್ಲಿ ಇರುವ ಪೊಲೀಸ್ ಠಾಣೆಗೆ ಹೋಗಿ ಕ್ಷಮೆಯಾಚಿಸುತ್ತೇನೆ. ನಾನು ಮಾತನಾಡಿರುವ ಬಗ್ಗೆ ವಿಷಾದವಿದೆ. ಡ್ರೈವರ್‌ನೊಂದಿಗೆ ಮಾತನಾಡುವಾಗ ಈ ರೀತಿ ತಪ್ಪಾಗಿದೆ. ನಾನು ತಪ್ಪಾಗಿ ಮಾತನಾಡಿದ್ದರೆ, ದಯವಿಟ್ಟು ಕ್ಷಮಿಸಿ ಎಂದು ಆತ ಹೇಳಿದ್ದಾನೆ.
9 ವರ್ಷ ಇದ್ದರೂ ಕನ್ನಡದ ಒಂದು ವಾಕ್ಯ ಬರಲ್ಲ!
ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಸ್. ಶ್ಯಾಮ್ ಪ್ರಸಾದ್ ಅವರು, ಒಂಬತ್ತು ವರ್ಷ ಬೆಂಗಳೂರಿನಲ್ಲಿದ್ದರೂ ಸರಿಯಾಗಿ ಒಂದು ವಾಕ್ಯ ಕನ್ನಡದಲ್ಲಿ ಮಾತನಾಡೋಕೆ ಬರಲ್ಲ ಈ ದುಷ್ಟನಿಗೆ. ಇದಕ್ಕೆಲ್ಲ ಕಾರಣ ಹಿಂದಿ ರಾಷ್ಟ್ರ ಭಾಷೆ ಅಂತ ನಮಗೆ 75 ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದಿರುವ ಹಿಂದಿ ಹೈಕಮಾಂಡ್ ಪಕ್ಷಗಳು. ಕರ್ನಾಟಕದ ಶಾಲೆಗಳಲ್ಲಿ #ದ್ವಿಭಾಷಾ_ನೀತಿ ಜಾರಿಯಾದರೆ ಮಾತ್ರ ಕರ್ನಾಟಕದಲ್ಲಿ ಕನ್ನಡಿಗರಿಗೆ ಉಳಿಗಾಲ. #ವಲಸೆ_ನಿಯಂತ್ರಣ_ಕಾಯ್ದೆ ತರದೆ ಇದ್ದರೆ ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿ ಈ ರೀತಿಯ ದಾಳಿಗಳನ್ನು ದಿನವೂ ಅನುಭವಿಸಬೇಕು. #ನಮ್ಮನಾಡು_ನಮ್ಮಆಳ್ವಿಕೆ ಇರಲಿ ಎಂದು ಅವರು ಆಗ್ರಹಿಸಿದ್ದಾರೆ.
ಈ ಕ್ಷಮಾಪಣೆ ನಮಗೆ ಬೇಕಾಗಿಲ್ಲ: ಇನ್ನು ಕ್ಷಮಾಪಣೆ ನಮಗೆ ಬೇಕಾಗಿಲ್ಲ ಎಂದು ಕನ್ನಡಿಗರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ, ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಮಾತನಾಡುವುದು ಆ ಮೇಲೆ ಕ್ಷಮಾಪಣೆ ಕೇಳುವುದು ಕೆಟ್ಟ ಅಭ್ಯಾಸವಾಗಿ ಹೋಗಿದೆ. ಈ ರೀತಿ ಮಾಡುವವರಿಗೆ ಶಿಕ್ಷೆ ವಿಧಿಸಬೇಕು ಆಗ ಮಾತ್ರ ಈ ರೀತಿ ಮಾಡುವುದು ನಿಲ್ಲಲಿದೆ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಈ ವಿಡಿಯೋಗೆ ಪರ & ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. We Dravidians ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಿಂದಿವಾಲಾನ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
Yesterday - Hindi Warrior
— We Dravidians (@WeDravidians) April 21, 2025
Today - Kannada Sympathiser
👻
"The 'Hindi warrior' suddenly turns Kannadiga sympathiser?
Watch the apology video of one night superstar of Hindia —( Directly dubbed his apology in Kannada)#Hindia #Kannada #ApologyVideo #LanguagePolitics #SouthIndia pic.twitter.com/Uf2Ez2VFeB
ನಿನ್ನೆ - ಹಿಂದಿ ಯೋಧ
ಇಂದು - ಕನ್ನಡದ ಬಗ್ಗೆ ಕರುಣೆ ಎಂದು ಈ ಪೇಜ್‌ನಿಂದ ಬರೆದುಕೊಳ್ಳಲಾಗಿದೆ. ಮುಂದುವರಿದು "ಹಿಂದಿ ಯೋಧ" ಇದ್ದಕ್ಕಿದ್ದಂತೆ ಕನ್ನಡದ ಬಗ್ಗೆ ಇಷ್ಟೊಂದು ಕರುಣಿಯಿಂದ ಮಾತನಾಡುತ್ತಿರುವುದು ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ. ದಿ ಹಿಂದಿ ವಾರಿಯರ್ ಒಂದು ರಾತ್ರಿಯ ಸೂಪರ್‌ಸ್ಟಾರ್‌ನ ಕ್ಷಮೆಯಾಚನೆಯ ವೀಡಿಯೊವನ್ನು ವೀಕ್ಷಿಸಿ ಎಂದು ಬರೆದುಕೊಳ್ಳಲಾಗಿದೆ.
ಇನ್ನು ಕೆಲವರು ನಾವು ಉತ್ತರ ಭಾರತಕ್ಕೆ ಬರುವ ದಕ್ಷಿಣ ಭಾರತೀಯರಿಗೆ ಹಿಂದಿ ಕಲಿಯಿರಿ ಎಂದು ಒತ್ತಾಯ ಮಾಡುವುದಿಲ್ಲ. ಆದರೆ, ಉತ್ತರ ಭಾರತೀಯರು ದಕ್ಷಿಣ ಭಾರತದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬರೆದುಕೊಳ್ಳಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications