ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್‌ನಲ್ಲಿ ರಾಜ್‌ ಕುಮಾರ್ 'ಅಪ್ಪು'ಗೆಯ ಅದ್ಭುತ ಪುಷ್ಪ ದೃಶ್ಯ ವೈಭವ

|
Google Oneindia Kannada News

ಬೆಂಗಳೂರು, ಆಗಸ್ಟ್ 05: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್‌ರ ವೈಭೋಗ ಮೇಳೈಸಿದೆ. ಪ್ರದರ್ಶನವನ್ನು ಪುನೀತ್ ಬಾಲ್ಯದಿಂದ ಸಾಧನೆಯ ಹಾದಿಯವರಿಗೂ ಜನರ ಮನಸ್ಸನ್ನು ಸೂರೆ ಮಾಡವ ರೀತಿಯಲ್ಲಿ ವೈಭವಯುತವಾಗಿ ಆಯೋಜಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಮಯದಲ್ಲಿನ ಪುನೀತ್ ಪುಷ್ಪೋತ್ಸವದಲ್ಲಿ ಏನಿದೆ? ಎನ್ನೋದರ ಬಗ್ಗೆ ವಿಶೇಷ ವರದಿ ಒನ್‌ಇಂಡಿಯಾ ಕನ್ನಡದಲ್ಲಿ.

ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್ ಕುಮಾರ್ ಪುಷ್ಪ ವೈಭವವನ್ನು ಕಾಣಬಹುದಾಗಿದೆ. 212ನೇ ಫಲಪುಷ್ಪ ಪ್ರದರ್ಶನವನ್ನು ಬಹಳ ವಿಶಿಷ್ಟವಾಗಿ ಆಯೋಜನೆಯನ್ನು ಮಾಡಲಾಗಿದೆ. ಗಾಜಿನ ಮನೆಯ ಸುತ್ತಲು ಪುನೀತ್ ಮತ್ತು ಡಾ. ರಾಜ್ ಕುಮಾರ್‍‌ರ ಫೋಟೋಗಳನ್ನು ಕಾಣಬಹುದಾಗಿದೆ.

ಶುಕ್ರವಾರದಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಾಹನ ಪಾರ್ಕಿಂಗ್ ವಿವರಶುಕ್ರವಾರದಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಾಹನ ಪಾರ್ಕಿಂಗ್ ವಿವರ

ಗಾಜಿನ ಮನೆಯ ಮುಖ್ಯದ್ವಾರದ ಎಡಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಬಲಬದಿಯಲ್ಲಿ ಡಾ. ರಾಜ್ ಕುಮಾರ್‌ರ ಚಿನ್ನದ ಬಣ್ಣದ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಜನರು ಇಬ್ಬರಿಗೂ ನಮನನ್ನು ಅರ್ಪಿಸಿ ಮುಂದೆ ನಡೆದರೆ ಪುಷ್ಪಾಲಂಕಾರವನ್ನು ನೋಡಿ, ಕಣ್ತುಂಬಿಕೊಳ್ಳಬುದಾಗಿದೆ.

 ಮಯೂರನಾಗಿ ನಿಂತ ರಾಜ್, ರಾಜಕುಮಾರನಾದ ಅಪ್ಪು

ಮಯೂರನಾಗಿ ನಿಂತ ರಾಜ್, ರಾಜಕುಮಾರನಾದ ಅಪ್ಪು

ಗಾಜಿನ ಮನೆಯನ್ನು ಎಂಟ್ರಿಯಾಗುತ್ತಿದ್ದಂತೆ ಅಪ್ಪ ರಾಜ್‌ಕುಮಾರ್ ಮತ್ತು ಮಗ ಪುನೀತ್ ರಾಜ್‌ಕುಮಾರ್ ಚಿಕ್ಕದಾದ ಪುತ್ಥಳಿಗಳು ಹೂವಿನ ಅಲಂಕಾರದೊಂದಿಗೆ ನೋಡುಗರನ್ನು ಆಕರ್ಷಿಸುತ್ತವೆ. ಹಾಗೆಯೇ ದೃಷ್ಟಿಯನ್ನು ಹಾಯಿಸಿದರೇ ಮಯೂರನಾಗಿದ್ದ ರಾಜ್ ಕುಮಾರ್ ಪುತ್ಥಳಿ ಎದುರಾಗುತ್ತದೆ. ಇನ್ನೊಂದು ಬದಿಯಲ್ಲಿ ರಾಜಕುಮಾರ ಸಿನಿಮಾದಲ್ಲಿನ ರಾಜನಂತೆ ಪುನೀತ್ ರಾಜ್ ಕುಮಾರ್ ಹೆಜ್ಜೆ ಹಾಕುತ್ತಿರುವ ಪುತ್ಥಳಿ ಜನರನ್ನು ಸೂರೆಗೊಳ್ಳಲಿದೆ.

 ಅಪ್ಪ ಅಮ್ಮನ ಮಡಿಲಲ್ಲಿ ಪುನೀತ್ ರಾಜವೈಭೋಗ

ಅಪ್ಪ ಅಮ್ಮನ ಮಡಿಲಲ್ಲಿ ಪುನೀತ್ ರಾಜವೈಭೋಗ

ಡಾ. ರಾಜ್ ಕುಮಾರ್ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ ಮೇರು ನಟ. ಇವರ ಶ್ರೀ ಕೃಷ್ಣದೇವರಾಯ ಕುಳಿತುಕೊಳ್ಳವ ಶೈಲಿ. ಸುತ್ತಲು ಇರುವ ಹೂವಿನ ಅಲಂಕಾರ ಇವೆಲ್ಲವೂ ಜನರನ್ನು ಮೂಕವಿಸ್ಮಿತರಾಗಿ ನೋಡುವಂತೆ ಮಾಡಿದೆ. ಇನ್ನು ಅಪ್ಪ ಅಮ್ಮನ ಮಡಿಲಲ್ಲಿ ಮುದ್ದು ರಾಜಕುಮಾರ ಪುನೀತ್ ಇರುವುದು ಜನರನ್ನು ಇಷ್ಟ ಪಡುವಂತೆ ಮಾಡುತ್ತದೆ. ಈ ಮೂವರು ಇಹಲೋಕವನ್ನು ತ್ಯಜಿಸಿರುವುದರಿಂದ ಒಟ್ಟಿಗೆ ಈ ಪುತ್ಥಳಿಯನ್ನು ನೋಡಿದಾಗ ಜನರ ಕಣ್ಣುಗಳು ತುಂಬಿ ಬರುತ್ತವೆ.

 ಭಕ್ತ ಪ್ರಹ್ಲಾದದ ದೃಶ್ಯ ವೈಭೋಗ

ಭಕ್ತ ಪ್ರಹ್ಲಾದದ ದೃಶ್ಯ ವೈಭೋಗ

ಡಾ. ರಾಜ್‌ಕುಮಾರ್ ಮತ್ತು ನಿವೃತ್ತ ಐಪಿಎಸ್ ಕೆಂಪಯ್ಯ ನೇತೃತ್ವದಲ್ಲಿ ಸ್ಥಾಪಿತವಾದ ಶಕ್ತಿಧಾಮ ಮಹಿಳೆಯರ, ಮಕ್ಕಳ ಏಳಿಗೆಗೆ ದುಡಿಯುತ್ತಿದೆ. ಈ ಶಕ್ತಿಧಾಮಕ್ಕೆ ಪುನೀತ್ ವಿಶೇಷ ಕೊಡುಗೆಯನ್ನು ನೀಡಿ ನಡೆಸಿಕೊಂಡು ಬಂದಿದ್ದರು. ಶಕ್ತಿಧಾಮವನ್ನು ಪುಷ್ಪದಲ್ಲೂ ನಿರ್ಮಾಣ ಮಾಡಿ ಅದರ ಮುಂದೆ ಪುನೀತ್ ಪುತ್ಥಳಿಯನ್ನು ಇಡಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಮತ್ತು ಪುನೀತ್ ಅಭಿನಯಕ್ಕೆ ಸಾಕ್ಷಿಯಾಗಿದ್ದು ಭಕ್ತ ಪ್ರಹ್ಲಾದ ಚಿತ್ರ. ಈ ಸಿನಿಮಾದ ಕ್ಲೈಮ್ಯಾಕ್ಸ್ ಭಾಗವನ್ನು ಮರು ಸೃಷ್ಠಿಸಿರುವಂತೆ ಬಾಲ ಪುನೀತ, ರಾಜ್ ಕುಮಾರ್, ಕಂಭವನ್ನು ಸೀಳಿಕೊಂಡು ಬರುವ ನರಸಿಂಹನ ಪ್ರತಿಮೆ ಜನರನ್ನು ಆಕರ್ಷಿಸುತ್ತದೆ.

 ಪುನೀತ್ ಮತ್ತು ರಾಜ್ ಕುಮಾರ್ ಬಗೆಗಿನ ಸಂಪೂರ್ಣ ವಿವರ

ಪುನೀತ್ ಮತ್ತು ರಾಜ್ ಕುಮಾರ್ ಬಗೆಗಿನ ಸಂಪೂರ್ಣ ವಿವರ

ಡಾ. ರಾಜ್ ಕುಮಾರ್‌ ರಾಘವೇಂದ್ರ ಸ್ವಾಮಿಗಳ ಪರಮಭಕ್ತರಾಗಿದ್ದರು. ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ನಿಭಾಯಿಸಿದ್ದರು ಇದರಿಂದ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು , ಬೃಂದಾವನವನ್ನು ಸೃಷ್ಟಿಸಲಾಗಿದ್ದ ಭಕ್ತಿಯುವಾಗಿ ಅಲಂಕಾರವನ್ನು ಮಾಡಲಾಗಿದೆ. ಬೇಡರ ಕಣ್ಣಪ್ಪನಾಗಿ ಅವತರಿಸಿರುವ ಡಾ. ರಾಜ್ ಕುಮಾರ್ ಶಿವಲಿಂಗದ ಮೇಲೆ ಕಾಲನ್ನಿಡುವ ದಶ್ಯವು ಪುಷ್ಪಾಲಂಕೃತವಾಗಿದೆ. ಇನ್ನು ಗಾಜಿನ ಮನೆಯ ಸುತ್ತಲು ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾ‍ಜ್ ಕುಮಾರ್‌ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಕಲಾಗಿದ್ದು. ಗಾಜಿನ ಮನೆ ಜನರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ ಎನ್ನುವಂತಿದೆ.

Recommended Video

ಸ್ವಾತಂತ್ರ್ಯ ಸೆನಾನಿ ಭಗತ್‌ ಸಿಂಗ್‌ Shaheed Bhagat Singh || 75th Independence Day *India | OneIndia

English summary
75th Independence day the Lalbagh Botanical garden in Bengaluru host a flower show themed after father and son Dr Rajkumar and Puneeth Rajkumar from August 5 to 15th. Attractions and other details Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X