ಕೇಂದ್ರ ಪಠ್ಯಪುಸ್ತಕದಲ್ಲಿ ಮಕ್ಕಳಿಗೆ ಲಾಲ್ ಬಾಗ್ ಪಾಠ!
ಬೆಂಗಳೂರು, ಮೇ 22: ದಿನಕ್ಕೆ ಸಾವಿರಾರು ಜನರನ್ನು ಬರಸೆಳೆವ ಲಾಲ್‌ಬಾಗ್ ಕುರಿತು ಪಠ್ಯ ಮೊದಲ ಬಾರಿಗೆ ಐಸಿಎಸ್‌ಇ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆ.
ನಾಲ್ಕನೇ ತರಗತಿಯ ಪಠ್ಯ ಪುಸ್ತಕ ಕನ್ನಡದಲ್ಲಿ ಲಾಲ್‌ಬಾಗ್ (12 ಪಾಠ ) ಎಂಬ ಪಾಠ ಪರಿಚಯಿಸಲಾಗಿದೆ. ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಈ ಪಠ್ಯವನ್ನು ಅಭ್ಯಾಸ ಮಾಡಲಿದ್ದಾರೆ. ಪಠ್ಯ ಪುಸ್ತಕದಲ್ಲಿ ಒಟ್ಟು 15 ಪಾಠಗಳಿವೆ. ಅಬ್ಬಿ ಜಲಪಾತ, ವೀರರಾಣಿ ಕಿತ್ತೂರು ಚೆನ್ನಮ್ಮ, ಆದರ್ಶ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್ ಅವರನ್ನು ಒಳಗೊಂಡಂತೆ ಮಾಹಿತಿಯುಕ್ತ ಪಾಠಗಳು ಈ ಪಠ್ಯದಲ್ಲಿದೆ.
ಎರಡು ಪುಟಗಳ ಈ ಪಾಠದಲ್ಲಿ ಪುಟದ ಮೇಲ್ಭಾಗದಲ್ಲಿ ಗಾಜಿನ ಮನೆಯ ಮುಂಭಾಗದ ಫೋಟೊವನ್ನು ಮುದ್ರಿಸಲಾಗಿದೆ. ಅದರ ಕೆಳಭಾಗದಲ್ಲಿ ಲಾಲ್‌ಬಾಗ್ ಹುಟ್ಟು, ಬೆಳವಣಿಗೆ, ಅದಕ್ಕೆ ಕಾರಣಕರ್ತರ ಮಾಹಿತಿಯನ್ನು ಮುದ್ರಿಸಲಾಗಿದೆ. ಎರಡನೇ ಪುಟದಲ್ಲಿ ಹೂವಿನ ಗಡಿಯಾರ ಮತ್ತು ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕಾಗಿ ಬೆಳೆಸಿರುವ ಹೂವಿನ ಸಸ್ಯಗಳ ಸಮೇತ ಗಾಜಿನ ಮನೆಯ ಒಳನೋಟದ ಚಿತ್ರಗಳನ್ನು ಮುದ್ರಿಸಲಾಗಿದೆ.

ಈ ಪುಟದಲ್ಲಿಯೇ ಲಾಲ್‌ಬಾಗ್‌ನ ವಿಶಿಷ್ಟ ಸಸ್ಯರಾಶಿಯಲ್ಲದೆ ಕೆಂಪೇಗೌಡ ಗೋಪುರ, ಗುಲಾಬಿವನ, ಪುಷ್ಪ ಗಡಿಯಾರ, ತಾವರೆಕೊಳ, ಲಾಲ್‌ಬಾಗ್ ಕೆರೆ, ವಾದ್ಯ ಮಂಟಪ, ಜಪಾನಿ ಮಾದರಿ ಉದ್ಯಾನ ಹೀಗೆ ಉದ್ಯಾನಗಳಲ್ಲಿರುವ ಇತರೆ ವಿಶೇಷಗಳ ಬಗ್ಗೆ ಮಾಹಿತಿ ಇದೆ. ಗಾಜಿನ ಮನೆಯಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನಗಳು ಇತ್ಯಾದಿ ಮಾಹಿತಿಯೂ ಇದೆ ಎಂದು ತೋಟಾಗರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ತಿಳಿಸಿದ್ದಾರೆ.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications