ನಿವೇಶನ ಕಲಹದಿಂದ ಮನನೊಂದು ವಕೀಲೆ ಆತ್ಮಹತ್ಯೆ
ಬೆಂಗಳೂರು, ಜನವರಿ 2: ನಿವೇಶನ ವಿಚಾರಕ್ಕೆ ಬೇಸರಗೊಂಡು ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಕಾರ್ಪೊರೇಟರ್ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆನ್ನುವ ಆರೋಪಗಳು ಕೇಳಿಬಂದಿವೆ. ಉದಯನಗರದ ವಿವೇಕಾನಂದ ಸ್ಟ್ರೀಟ್ ನಿವಾಸಿ ಧರಣಿ(27) ಮೃತ ವಕೀಲೆ.
ಎ ನಾರಾಯಣಪುರ ವಾರ್ಡ್ ಕಾರ್ಪೊರೇಟರ್ ಸುರೇಶ್ ಕಿರುಕುಳದಿಂದ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉದಯನಗರದಲ್ಲಿ ಧರಣಿ ತಮ್ಮ ತಾಯಿಯೊಂದಿಗೆ ನೆಲೆಸಿದ್ದರು.

ಅಕ್ಕಪಕ್ಕದ ನಿವಾಸಿಗಳು ಮತ್ತು ಧರಣಿ ಕುಟುಂಬಕ್ಕೂ ನೀರು, ಕಸ ಹೀಗೆ ಸಣ್ಣ ಸಣ್ಣ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ 2 ತಿಂಗಳ ಹಿಂದೆ ಧರಣಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಸುರೇಶ್ ಸಂಧಾನಕ್ಕೆ ಯತ್ನಿಸಿದ್ದರು, ಈ ವೇಳೆ ಧರಣಿ ಕುಟುಂಬಕ್ಕೆ ಅಸಮಾಧಾನವಾಗಿತ್ತು. ಮಂಗಳವಾರ ಮತ್ತೆ ಧರಣಿ ಮತ್ತು ಸ್ಥಳೀಯರಿಗೆ ಜಗಳವಾಗಿತ್ತು. ತಾಯಿ ಜೊತೆಯೂ ಜಗಳವಾಡಿ ರಾತ್ರಿ 11.30ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕ ನಿವೇಶನ ಮಾರಾಟಕ್ಕೂ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.












Click it and Unblock the Notifications