Get Updates
Get notified of breaking news, exclusive insights, and must-see stories!

ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ?

ಬೆಂಗಳೂರು, ನ. 02: ಗಂಡ ಸತ್ತ ಮುಂಡೆಗೆ ಯಾಕೆ ರಾಜಕೀಯ ಅಂತಾ ಕೇಳಿದ್ದೀರಿ. ಗಂಡನನ್ನು ತಿಂದವಳಿಗೆ ಯಾಕೆ ರಾಜಕೀಯ ಅಂತಾ ಹೇಳಿದ್ದೀರಿ. ಇದು ನಿಮಗೆ ಶೋಭೆ ತರುತ್ತದೆಯೇ? ಎಂದು ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆರ್ ಆರ್ ನಗರದಲ್ಲಿ ಮಾತನಾಡಿದರು.

ಈ ಮಾಧ್ಯಮಗಳ ಮೂಲಕ ಮುನಿರತ್ನ ಅಣ್ಣನನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನಗೆ ಬಂದ ಪರಿಸ್ಥಿತಿ ಆ ಮಕ್ಕಳಿಗೆ ಬರುವುದು ಬೇಡ. ಒಂದು ವೇಳೆ ಅವರಿಗೆ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದಿರಿ? ಅವರಿಗೂ ಹೀಗೆ ನಿಂದಿಸುತ್ತಿದ್ರಾ? ನಾನು ಯಾವ ತಪ್ಪು ಮಾಡಿದ್ದೇನೆ? ಗಂಡ ಸತ್ತ ನಂತರ ಯಾವ ಹೆಣ್ಣು ಬದುಕಬಾರದಾ? ರಾಜಕೀಯಕ್ಕೆ ಬರಬಾರದಾ? ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಾರದಾ? ಜನರ ನೋವಿಗೆ ಸ್ಪಂದಿಸಬಾರದಾ? ಸಮಾಜದಲ್ಲಿ ಒಬ್ಬ ಸುಶಿಕ್ಷಿತ ಹೆಣ್ಣಿಗೆ ಇಷ್ಟು ಕೆಟ್ಟ ಪದ ಬಳಸುತ್ತೀರಿ ಎಂದರೆ ಬೇರೆ ಹೆಣ್ಣುಗಳ ಕಥೆ ಏನು? ಅವರನ್ನು ನೀವು ಹೇಗೆ ನಡೆಸಿಕೊಂಡಿರಬೇಡಾ? ಎಂದರು.

ಮತದ ರೂಪದಲ್ಲಿ ಭಿಕ್ಷೆಯಾಗಿ ಕುಂಕುಮ ನೀಡಿ

ಮತದ ರೂಪದಲ್ಲಿ ಭಿಕ್ಷೆಯಾಗಿ ಕುಂಕುಮ ನೀಡಿ

ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡಿರುವ ಅರಶಿನ-ಕುಂಕುಮವನ್ನು ಮತದ ಸ್ವರೂಪದಲ್ಲಿ ಭಿಕ್ಷೆಯಾಗಿ ನೀಡಿ. ನನ್ನ ಉಳಿದ ಬದುಕನ್ನು ನಿಮ್ಮ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಕುಸುಮಾ ಅವರು ಮತದಾರರಲ್ಲಿ ಮನವಿ ಮಾಡಿದರು.

ನಿಂದನೆ, ಅಪನಿಂದನೆಗಳಿಂದ ನೊಂದಿರುವ ಈ ವಿದ್ಯಾವಂತ ನಿಮ್ಮ ಮನೆ ಮಗಳನ್ನು ನ. 3 ರಂದು ನೀವೆಲ್ಲರೂ ಹುಡಿ ತುಂಬಿ ಹಾರೈಸಲಿದ್ದೀರಿ ಎಂಬ ನಂಬಿಕೆ ನನಗಿದೆ. ನನ್ನ ಜೀವನವನ್ನು ನಿಮ್ಮ ಸೇವೆಗೆ ಮೀಸಲಿಟ್ಟು ತೀರಿಸುವೆ ಎಂದು ಭಾವುಕರಾದರು.

ಚುಚ್ಚು ಮಾತುಗಳನ್ನು ಆಡಿದ್ದೀರಿ

ಚುಚ್ಚು ಮಾತುಗಳನ್ನು ಆಡಿದ್ದೀರಿ

ಕಳೆದ 20 ದಿನಗಳಿಂದ ನನ್ನ ಜೀವನದಲ್ಲಿ ಆಗಿರುವ ಬದಲಾವಣೆಗಳು ಎಲ್ಲರಿಗೂ ಗೊತ್ತಿದೆ. ನನ್ನ ಹೆಸರು ಚುನಾವಣೆ ಕಣದ ಮುನ್ನಲೆಗೆ ಬಂದ ಕ್ಷಣದಿಂದಲೂ ನನ್ನ ಮೇಲೆ ನಿರಂತರ ವಾಗ್ದಾಳಿಗಳು, ಗದಾಪ್ರಹಾರ ನಡೆಯುತ್ತಲೇ ಇದೆ.

ನನ್ನ ಗಂಡನ ಹೆಸರು ಬಳಸಬಾರದು ಅಂತೀರಿ. ನನ್ನ ಮೇಲೆ ಸುಳ್ಳು ಎಫ್ ಐಆರ್ ಹಾಕ್ತೀರಿ. ಪ್ರಚಾರಕ್ಕೆ ಅಡ್ಡಿಪಡಿಸಿದ್ದೀರಿ. ಅಲ್ಲದೆ ನಾನು ಪ್ರಚಾರಕ್ಕೆ ಹೋದ ಕೆಲವು ಮನೆಗಳಲ್ಲಿ, ನೀವು ನನ್ನ ಬಗ್ಗೆ ಆಡಿರುವ ಮಾತುಗಳು, ಬಳಸಿರುವ ಭಾಷೆ ಯಾವುದೇ ಹೆಣ್ಣು ಕೇಳುವಂಥದ್ದಲ್ಲ. ಅಂಥ ಚುಚ್ಚು ಮಾತುಗಳನ್ನು ಆಡಿದ್ದೀರಿ. ನಾನು ನಿಮಗೇನು ಅನ್ಯಾಯ ಮಾಡಿದ್ದೇ ಮುನಿರತ್ನ ಅಣ್ಣನವರೇ? ಎಂದು ಕುಸುಮಾ ಅವರು ಪ್ರಶ್ನಿಸಿದ್ದಾರೆ.

ಹೆಣ್ಣು ಮಕ್ಕಳ ಕತೆ ಏನು?

ಹೆಣ್ಣು ಮಕ್ಕಳ ಕತೆ ಏನು?

ಎರಡು ಬಾರಿ ಶಾಸಕರಾಗಿರುವ ನೀವು ಈ ರೀತಿ ಮಾತನಾಡಿದರೆ ಜನರನ್ನು ಹೇಗೆ ರಕ್ಷಿಸುತ್ತೀರಿ? ಹೆಣ್ಣು ಮಕ್ಕಳ ಕತೆ ಏನು? ನನ್ನ ಅನುಭವ ಪ್ರಶ್ನೆ ಮಾಡುತ್ತೀರಿ. ನನ್ನ ತಂದೆ, ತಾಯಿಗೆ ಹೊರೆಯಾಗದೆ ನನ್ನ ಕಾಲಿನ ಮೇಲೆ ನಾನೇ ನಿಂತುಕೊಂಡು ಜೀವಿಸುತ್ತಿದ್ದೇನೆ. ಆಗಬಾರದ ವಯಸ್ಸನಲ್ಲೇ ನನಗಾದ ಆಘಾತದಿಂದ ಹೊರಬರಲು ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದು, ಇಲ್ಲಿ ಮಕ್ಕಳಿಗೆ ಪಾಠ ಹೇಳಿ ಬದುಕುತ್ತಿದ್ದೇನೆ. ನನ್ನದೇ ಗುರುತು ಹೊಂದಲು ಹೊರಟಿದ್ದೇನೆ. ನನ್ನ ಅನುಭವ ಏನು ಅಂತಾ ಜನರಿಗೆ ಗೊತ್ತಿದೆ. ನಿಮ್ಮ ಅನುಭವ ಏನು ಅಂತಾ ಹೇಳಿ?

ಕುಂಕುಮ ಭಿಕ್ಷೆ ಪಡೆಯುತ್ತೇನೆ

ಕುಂಕುಮ ಭಿಕ್ಷೆ ಪಡೆಯುತ್ತೇನೆ

ನಾನು ಐದು ವರ್ಷಗಳ ಹಿಂದೆ ಕಳೆದುಕೊಂಡ ಅರಿಶಿನ, ಕುಂಕುಮವನ್ನು ನನ್ನ ಜನ ಉಡಿ ತುಂಬಿ ಕೊಡುತ್ತಾರೆ. ಹೂವು ಮುಡಿಸುತ್ತಾರೆ. ಈ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ. ಮತದ ಸ್ವರೂಪದಲ್ಲಿ ಅರಿಶಿನ, ಕುಂಕುಮ ಭಿಕ್ಷೆ ಪಡೆಯುತ್ತೇನೆ. ಜನ ನನ್ನನ್ನು ಹಾರೈಸುತ್ತಾರೆ. ನನ್ನ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ನಾನು ಅಂದುಕೊಂಡಿರುವುದನ್ನು ಮಾಡೇ ಮಾಡುತ್ತೇನೆ. ನನ್ನ ಜೀವನ ರಾಜಕೀಯ ಹಾಗೂ ಜನರ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರು ಹೇಳಿದರು.

Recommended Video

      ಒಬ್ಬರೇ ಬಸ್ stand ಅಲ್ಲಿ ಇದ್ರೆ ಹುಷಾರು !!! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+