ಕೇವಲ 730 ರೂ.ಗೆ KSTDC ಒಂದು ದಿನದ ಟೂರ್ ಪ್ಯಾಕೇಜ್: ನಂದಿ ಬೆಟ್ಟ, ಈಶ ಫೌಂಡೇಶನ್ ಸೇರಿ ಈ 5 ಅದ್ಭುತ ತಾಣಗಳ ದರ್ಶನ

ವೀಕೆಂಡ್‌ನಲ್ಲಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಸ್ವಲ್ಪ ದೂರ ಹೋಗಿ, ಪ್ರಶಾಂತ ಹಾಗೂ ಸುಂದರವಾದ ಜಾಗಗಳಿಗೆ ಭೇಟಿ ನೀಡಲು ಬಯಸುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಉತ್ತಮ ಆಫರ್ ಒಂದನ್ನ ನೀಡಿದೆ.

ಹೌದು, ಕೇವಲ 730 ರೂಪಾಯಿಗಳ ಕೈಗೆಟುಕುವ ದರದಲ್ಲಿ ಬೆಂಗಳೂರಿನಿಂದ ನಂದಿ ಬೆಟ್ಟ, ಈಶ ಫೌಂಡೇಶನ್ ಸೇರಿದಂತೆ ಐದಕ್ಕೂ ಹೆಚ್ಚು ಪ್ರಮುಖ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ವೀಕ್ಷಿಸುವ ಬಜೆಟ್ ಫ್ರೆಂಡ್ಲಿ ಟೂರ್ ಪ್ಯಾಕೇಜ್ ಅನ್ನ ಕೆಎಸ್‌ಟಿಡಿಸಿ ಇತ್ತೀಚೆಗೆ ಘೋಷಿಸಿದೆ.

KSTDC Offers Nandi Hills To Isha Foundation One Single Day Tour Package For Just 730 Rupees

ವಿಶೇಷವೆಂದರೆ ಈ ಪ್ಯಾಕೇಜ್‌ನಲ್ಲಿ ಕೆಎಸ್‌ಟಿಡಿಸಿ ವತಿಯಿಂದ ತರಬೇತಿ ಪಡೆದ ಅಧಿಕೃತ ಗೈಡ್ ಇರಲಿದ್ದು, ನೀವು ಭೇಟಿ ನೀಡುವ ಪ್ರತಿಯೊಂದು ಸ್ಥಳದ ಇತಿಹಾಸ, ವಿಶೇಷತೆ ಮತ್ತು ಮಾಹಿತಿಯನ್ನ ಪ್ರವಾಸಿಗರಿಗೆ ವಿವರಿಸುತ್ತಾರೆ.

ನಂದಿ ಬೆಟ್ಟದ ಸೌಂದರ್ಯ ಸವಿಯುವ ಅವಕಾಶ

ಈ ಒಂದು ದಿನದ ಪ್ರವಾಸವು ಪ್ರತಿದಿನ ಬೆಳಿಗ್ಗೆ ಸರಿಯಾಗಿ 8 ಗಂಟೆಗೆ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ ಕೌಂಟರ್ ಬಳಿಯಿಂದ ಆರಂಭವಾಗುತ್ತದೆ. ಸುಸಜ್ಜಿತವಾದ ಬಸ್‌ನಲ್ಲಿ ಪ್ರಯಾಣ ಶುರುವಾಗಲಿದ್ದು, ಮಾರ್ಗಮಧ್ಯೆ ನಂದಿ ಸವಿರುಚಿ ಹೋಟೆಲ್ ಬಳಿ ಬೆಳಗಿನ ಉಪಾಹಾರಕ್ಕಾಗಿ ಸುಮಾರು ಅರ್ಧ ಗಂಟೆಗಳ ಕಾಲ ಬಸ್ ನಿಲ್ಲಿಸಲಾಗುತ್ತದೆ.

ಉಪಾಹಾರದ ನಂತರ ಬೆಳಿಗ್ಗೆ 10:30 ರ ಸುಮಾರಿಗೆ ಸುಪ್ರಸಿದ್ಧ ನಂದಿ ಬೆಟ್ಟವನ್ನು ತಲುಪುವ ಈ ಟ್ರಿಪ್, ಮಧ್ಯಾಹ್ನ 2 ಗಂಟೆಯವರೆಗೂ ಅಲ್ಲಿಯೇ ಕಾಲ ಕಳೆಯಲು ಅವಕಾಶ ಮಾಡಿಕೊಡುತ್ತದೆ. ಪ್ರವಾಸಿಗರು ನಂದಿ ಬೆಟ್ಟದ ಸುಂದರ ಪ್ರಕೃತಿ ಮತ್ತು ವ್ಯೂ ಪಾಯಿಂಟ್ ಅನ್ನ ಸವಿಯುತ್ತಾ, ಮಧ್ಯಾಹ್ನದ ಊಟವನ್ನು ಅಲ್ಲೇ ಮುಗಿಸಿಕೊಂಡು ಮುಂದಿನ ಪಯಣ ಬೆಳೆಸಬಹುದು.

ಐತಿಹಾಸಿಕ ದೇವಾಲಯಗಳು ಹಾಗೂ ಮ್ಯೂಸಿಯಂ ಭೇಟಿ

ನಂದಿ ಬೆಟ್ಟದ ಪ್ರವಾಸ ಮುಗಿದ ಬಳಿಕ, ಮಧ್ಯಾಹ್ನದ ನಂತರ ಪ್ರವಾಸಿಗರನ್ನ ಪ್ರಶಾಂತವಾದ ಕಣಿವೆ ಬಸವಣ್ಣ ದೇವಾಲಯಕ್ಕೆ ಕರೆದೊಯ್ಯಲಾಗುತ್ತದೆ. ತದನಂತರ ಕರ್ನಾಟಕದ ಅತ್ಯಂತ ಹಳೆಯ ಹಾಗೂ ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ, ಪಾರಂಪರಿಕ ತಾಣವಾಗಿರುವ ಭೋಗನಂದೀಶ್ವರ ದೇವಾಲಯದ ದರ್ಶನ ಮಾಡಿಸಲಾಗುತ್ತದೆ.

ಇದಾದ ಬಳಿಕ ಭಾರತದ ಹೆಮ್ಮೆಯ ಶ್ರೇಷ್ಠ ಇಂಜಿನಿಯರ್, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಗೆ ಬಸ್ ತೆರಳುತ್ತದೆ. ಅಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ಸಮಾಧಿಗೆ ಭೇಟಿ ನೀಡಿ ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಸುವರ್ಣಾವಕಾಶವನ್ನ ಈ ಪ್ಯಾಕೇಜ್‌ ಒದಗಿಸುತ್ತದೆ.

ಈಶ ಫೌಂಡೇಶನ್ ದರ್ಶನ ಮತ್ತು ಅದ್ಭುತ ಲೈಟ್ ಶೋ

ಮುದ್ದೇನಹಳ್ಳಿಯ ಭೇಟಿಯ ನಂತರ ಸಂಜೆ 6 ರಿಂದ 6:30 ರ ಸುಮಾರಿಗೆ ಬಸ್ ಚಿಕ್ಕಬಳ್ಳಾಪುರದಲ್ಲಿರುವ ಪ್ರಖ್ಯಾತ ಸದ್ಗುರು ಸನ್ನಿಧಿ, ಈಶ ಫೌಂಡೇಶನ್‌ಗೆ ತಲುಪುತ್ತದೆ. ಇಲ್ಲಿ ಪ್ರವಾಸಿಗರು ಬೃಹತ್ ಆದಿಯೋಗಿ ಮೂರ್ತಿಯ ದರ್ಶನ ಪಡೆಯಬಹುದು. ನಂತರ ರಾತ್ರಿ ಆದಿಯೋಗಿ ಮೂರ್ತಿಯ ಮೇಲೆ ಮೂಡಿಬರುವ ಸುಂದರವಾದ ಲೈಟ್ ಶೋ ವೀಕ್ಷಿಸಲು ಅವಕಾಶವಿರುತ್ತದೆ.

ಲೈಟ್ ಶೋ ಮುಗಿಸಿಕೊಂಡು ನಂತರ, ರಾತ್ರಿ 9:30 ರಿಂದ 10 ಗಂಟೆಯ ಸುಮಾರಿಗೆ ಬಸ್ ಮರಳಿ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಪ್ರವಾಸಿಗರನ್ನು ಸುರಕ್ಷಿತವಾಗಿ ತಂದು ಬಿಡುತ್ತಾರೆ.

ಆಸಕ್ತ ಪ್ರವಾಸಿಗರು ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಈ ಟೂರ್ ಪ್ಯಾಕೇಜ್ ಅನ್ನು ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕೇವಲ ಒಂದು ದಿನದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಇಷ್ಟೆಲ್ಲಾ ಸ್ಥಳಗಳನ್ನ ನೋಡಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+