ಇಂದು ರಾತ್ರಿ ಎಂದಿನಂತೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ
ಬೆಂಗಳೂರು, ಜನವರಿ 8: ಕೆಎಸ್‌ಆರ್‌ಟಿಸಿ ಬಸ್ ಎಂದಿನಂತೆ ರಾತ್ರಿ ಸಂಚಾರ ಆರಂಭಿಸಲಿವೆ ಎಂದು ಕೆಎಸ್‌ಆರ್‌ಟಿಸಿ ನಿಗಮ ತಿಳಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳವಾರ ರಾತ್ರಿ ಎಂದಿನಂತೆಯೇ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲಿದೆ. ಕೇವಲ ಒಂದೇ ದಿನದ ಮುಷ್ಕರವಾಗಿದ್ದರೆ ಮುಷ್ಕರದ ದಿನ ಆರು ಗಂಟೆ ಬಳಿಕ ಬಸ್‌ಗಳ ಸಂಚಾರ ಆರಂಭವಾಗುತ್ತಿತ್ತು, ಆದರೆ ಎರಡು ದಿನಳ ಮಯಷ್ಕರವಾದ್ದರಿಂದ ಜನರಿಗೆ ಆತಂಕವಿತ್ತು. ಆದರೆ ಅದೀಗ ದೂರವಾಗಿದೆ.

ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ತೆಳಲು ಕೆಎಸ್‌ಆರ್‌ಟಿಸಿ ಬಸ್ ಸಿದ್ಧಗೊಳ್ಳುತ್ತಿದೆ, ಆದರೆ ಇದುವರೆಗೂ ಒಂದೇ ಒಂದು ಪ್ರುಯಾಣಿಕ ಕೂಡ ಸೀಟು ಬುಕ್ ಮಾಡಿಲ್ಲ.
ಆದರೆ ಎರಡು ದಿನಗಳ ಕಾಲ ಸಂಪೂರ್ಣವಾಗಿ ಬಿಎಂಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬುಧವಾರ ಪ್ರತಿಭಟನೆ ಇನ್ನೂ ತೀವ್ರವಾಗುವ ಸಾಧ್ಯತೆ ಇದೆ. ಮೆಟ್ರೋ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications