ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಇನ್ಮುಂದೆ ಚಿಲ್ಲರೆ ಸಮಸ್ಯೆಗೆ ಹೇಳಿ ಗುಡ್‌ಬೈ
ಬೆಂಗಳೂರು, ಸೆಪ್ಟೆಂಬರ್ 30: ಪ್ರಯಾಣಿಕರಿಗಾಗಿ ಪ್ರಯಾಣಿಕರಿಗೋಸ್ಕರ ಕೆಎಸ್‌ಆರ್‌ಟಿಸಿ ಹೊಸ ಪ್ಲಾನ್ ಮಾಡಿದ್ದು, ಸಾರಿಗೆ ಬಸ್ ಅಲ್ಲಿ ಓಡಾಡುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಲು ಕೈಯಲ್ಲಿ ಕಾಶ್ ಇಲ್ಲ ಎನ್ನುವ ಟೆನ್ಷನ್ ಬಿಟ್ಟು ಬಿಡಬಹುದು. ಯಾಕಂದ್ರೆ ಕೆಎಸ್‌ಆರ್‌ಟಿಸಿ ನಿಮಗೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ.
ಚೇಂಜ್ ಇಲ್ಲ ಅಂದ್ರೆ ಬಸ್ ಇಂದ ಇಳಿದು ಬಿಡಿ ಅನ್ನೋದು ಒಬ್ಬ ಪ್ರಯಾಣಿಕನ ಸಮಸ್ಯೆ ಅಲ್ಲ. ದಿನನಿತ್ಯ ರಾಜ್ಯದಲ್ಲಿ ನೂರಾರು ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ನೂರಾರು ಪ್ರಯಾಣಿಕರು ಈ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಈ ರೀತಿಯ ಸಮಸ್ಯೆಗೆ ಮುಕ್ತಿಯಾಡಲು ಕೆಎಸ್‌ಆರ್‌ಟಿಸಿ ಹೊಸ ಪ್ಲಾನ್ ಮಾಡಿಕೊಂಡಿದೆ.

ಈಗಾಗಲೇ ಹಲವು ಡಿಜಿಟಲ್ ಹೆಜ್ಜೆಗಳನ್ನು ಇಟ್ಟಿರುವ ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಡಿಜಿಟಲ್ ಹೆಜ್ಜೆ ಇಡಲು ಮುಂದಾಗಿದೆ. ನಿಮಗೆಲ್ಲಾ ಗೊತ್ತಿರುವಂತೆ ಶಕ್ತಿ ಯೋಜನೆಯ ನಂತರ ನಿರ್ವಾಹಕರ ಕೈಯಲ್ಲೂ ಹಾರ್ಡ್ ಕ್ಯಾಶ್ ಕಡಿಮೆಯಾಗಿದೆ. ಇದರಿಂದ ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕರು & ನಿರ್ವಾಹಕರ ನಡುವೆ ಗಲಾಟೆ ಸಾಮಾನ್ಯ ಎನ್ನುವಂತಾಗಿದೆ.
ಇದೇ ಚಿಲ್ಲರೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರಯಣಿಕರು & ಕಂಡಕ್ಟರ್ ನಡುವೆ ದಿನನಿತ್ಯ ಜಟಾಪಟಿ ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲೆಂದೇ ಕೆಎಸ್‌ಆರ್‌ಟಿಸಿ ಮುಂದಾಗಿದೆ. ಮುಂದಿನ ದಿನಗಳಲ್ಲಿ ಯುಪಿಐ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ಸಿಸ್ಟಮ್‌ಗೆ ಪ್ಲಾನ್ ಹಾಕಿಕೊಂಡಿದೆ.

ಈಗಾಗಲೇ ವಾಯುವ್ಯ ರಸ್ತೆ ಸಾರಿಗೆ ನಿಗಮವು ಯುಪಿಐ ಆಧಾರಿತ ಪಾವತಿ ಸಿಸ್ಟಮ್ ಅನ್ನು ಜಾರಿ ಮಾಡಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯಲ್ಲೂ ಇದರ ಜಾರಿಗೆ ಪ್ಲಾನ್ ಹಾಕಿಕೊಳ್ಳಲಾಗಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.
ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯಶಸ್ವಿ
ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಮೂರು ತಿಂಗಳು ಪೂರೈಸಿದೆ. ಇದುವರೆಗೆ ಮಹಿಳೆಯರು 13.20 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದು ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ 332.77 ಕೋಟಿ ರೂಪಾಯಿಗಳಾಗಿದೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಸಪ್ಟೆಂಬರ್ 10ಕ್ಕೆ ಮೂರು ತಿಂಗಳು ಪೂರೈಸಿದ್ದು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ.












Click it and Unblock the Notifications