ಬೆಂಗಳೂರಿನಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆ ಆರಂಭ

ಬೆಂಗಳೂರು, ಫೆಬ್ರವರಿ 26 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ವಿಮಾನ ನಿಲ್ದಾಣದಿಂದ ಅನಂತಪುರಕ್ಕೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲಿದೆ. 13/3/2020ರಿಂದ ಬಸ್ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Recommended Video

      Karnataka State Road Transport Corporation fare hiked up to 12 percent

      ಕೆಎಸ್ಆರ್‌ಟಿಸಿ ಪತ್ರಿಕಾ ಪ್ರಕರಣೆಯಲ್ಲಿ ಈ ಕುರಿತು ಮಾಹಿತಿ ನೀಡಿದೆ. ಅಂತರರಾಜ್ಯ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನಂತಪುರಕ್ಕೆ ಫ್ಲೈ ಬಸ್ ಸಾರಿಗೆಯನ್ನು ಹೊಸದಾಗಿ ಆರಂಭಿಸಲಾಗುತ್ತಿದೆ.

      ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನಂತಪುರಕ್ಕೆ ಮಾರ್ಚ್ 13ರಿಂದ ಫ್ಲೈ ಬಸ್ ಸಂಚಾರ ನಡೆಸಲಿದೆ. ವಯಸ್ಕರಿಗೆ ಪ್ರಯಾಣದರ 700 ರೂ. ನಿಗದಿ ಮಾಡಲಾಗಿದೆ.

      KSRTC Flybus Bus Services From KIA To Anantapur

      ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಕೆಎಸ್ಆರ್‌ಟಿಸಿಯ ಐಷಾರಾಮಿ ಫ್ಲೈ ಬಸ್ ಚಿಕ್ಕಬಳ್ಳಾಪುರ ಮಾರ್ಗವಾಗಿ ಅನಂತಪುರಕ್ಕೆ ಸಂಚಾರ ನಡೆಸಲಿದೆ.

      ವೇಳಾಪಟ್ಟಿ ವಿವರ

      bus

      ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೊದಲು ಕೆಎಸ್ಆರ್‌ಟಿಸಿ ಮೈಸೂರಿಗೆ ಫ್ಲೈ ಬಸ್ ಸೇವೆಯನ್ನು ಆರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನಲೆಯಲ್ಲಿ ಮಡಿಕೇರಿ, ಕುಂದಾಪುರ, ಉಡುಪಿಗೂ ಬಸ್ ಸೇವೆಯನ್ನು ಆರಂಭಿಸಲಾಗಿತ್ತು.

      ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರು ನಗರದ ಸಂಚಾರ ದಟ್ಟಣೆಗೆ ಸಿಲುಕುವುದನ್ನು ತಪ್ಪಿಸಲು ಫ್ಲೈ ಬಸ್ ಸೇವೆ ಆರಂಭಿಸಲಾಗಿತ್ತು. ವಿಮಾನ ನಿಲ್ದಾಣದಿಂದ ಹೊರಡುವ ಬಸ್ ನಗರವನ್ನು ಪ್ರವೇಶ ಮಾಡದೇ ನೇರವಾಗಿ ವಿವಿಧ ನಗರಗಳಿಗೆ ಸಂಚಾರ ನಡೆಸುತ್ತವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+