KSRTC: ಹಳೇಯ ಐರಾವತ ಬಸ್‌ಗಳಿಗೂ ಹೊಸ ರೂಪ, ಬೇಡಿಕೆ ಪೂರೈಕೆಗೆ ನಿರ್ಧಾರ
ಬೆಂಗಳೂರು, ಜುಲೈ 17: ರಾಜ್ಯ ಸಾರಿಗೆ ಇಲಾಖೆಯು ಹೊಸ ಬಸ್ ಗಳನ್ನು ಖರೀದಿ ಮಾಡುತ್ತಲೇ ಇದೆ. ಶಕ್ತಿ ಯೋಜನೆ ಬಳಿಕ ಬಸ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಇದುವರೆಗೂ ಕರ್ನಾಟಕ ಸಾರಿಗೆ ಬಸ್‌ಗಳನ್ನು ನವೀಕರಣ (Refurbish) ಮಾಡಿ ಮರಳಿ ರಸ್ತೆಗೆ ಬಿಡುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಈಗ ಐರಾವತ ವರ್ಗದ ಬಸ್‌ಗಳನ್ನು ನವೀಕರಣಕ್ಕೆ ಕೈಹಾಕಿದೆ.
ಹೌದು, ಇದೇ ಮೊದಲ ಬಾರಿಗೆ KSRTC ನಾಲ್ಕು ಐರಾವತ ಮತ್ತು ಐರಾವತ ಕ್ಲಬ್ ವರ್ಗದ ಬಸ್‌ಗಳನ್ನು ನವೀಕರಿಸಿದೆ. ಅವುಗಳನ್ನು ಅವುಗಳನ್ನು ಬಹುತೇಕ ಹೊಸ ಕೋಚ್‌ಗಳಾಗಿ ಪರಿವರ್ತಿಸುವ ಕಾರ್ಯ ನಡೆಸಿದೆ. ಈ ಸಾರಿಗೆ ನಿಗಮವು 2022 ರಿಂದ 1,027 ಕರ್ನಾಟಕ ಸರಿಗೆ ಬಸ್‌ಗಳ ಯಶಸ್ವಿ ನವೀಕರಣ ಮಾಡಿದೆ. ಆ ವಾಹನಗಳು ಗುತ್ತಿಗೆ ಆಧಾರದಲ್ಲಿ ಹೊಸದಾಗಿ ಸಂಚಾರ ನಡೆಸುತ್ತಿವೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಹಳೇ ಬಸ್‌ಗಳಿಗೆ ಹೊಸ ರೂಪ
ಈ ಕುರಿತು ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು, ಕರ್ನಾಟಕ ಸಾರಿಗೆ ಬಸ್‌ಗಳನ್ನು ಯಶಸ್ವಿಯಾಗಿ ನವೀಕರಿಸಿದ್ದೇವೆ. ಅದಾದ ಬಳಿಕ ನವೀಕರಣ ಉಪಕ್ರವನ್ನು ಪ್ರೀಮಿಯಂ ಐರಾವತ ವರ್ಗದ ಬಸ್‌ಗಳಿಗೂ ವಿಸ್ತರಣೆ ಮಾಡಿದ್ದೇವೆ. ಸಂಚಾರ ಪೂರ್ಣಗೊಳಿಸಿ ಹಳೆಯದಾದ ಬಸ್‌ಗಳು ಹೊಸ ರೂಪ ಪಡೆಯುತ್ತಿವೆ ಎಂದರು.
ಒಂದು ಹೊಸ ಬಸ್ ಖರೀದಿಗೆ ಸುಮಾರು ₹40 ಲಕ್ಷ ವೆಚ್ಚವಾಗುತ್ತದೆ. ಹಳೆಯ ಬಸ್ ಅನ್ನು ಹೊಸ ಸ್ಥಿತಿಗೆ ನವೀಕರಿಸಲು ಕೇವಲ ₹3ಲಕ್ಷ ರೂಪಾಯಿ ತಗುಲುತ್ತದೆ. ಹೀಗೆ ನವೀಕರಿಸಿದ ಬಸ್ಸುಗಳು ಕರ್ನಾಟಕದಲ್ಲಿ ಶಕ್ತಿ ಯೋಜನೆಯ ಅನುಷ್ಠಾನದ ನಂತರ ಹೆಚ್ಚಾಗುತ್ತಿರುವ ಬೇಡಿಕೆಗಳಿಗೆ ತಕ್ಕಂತೆ ಪೂರೈಕೆ ಮಾಡಲು ಈ ಉಪಕ್ರಮ ಸಹಾಯವಾಗುತ್ತದೆ.

ಅದೇ ರೀತಿ ಐರಾವತ ಬಸ್‌ಗಳ ನವೀಕರಣ ಯಶಸ್ವಿಯಾದರೆ. ನಾವು ಪ್ರೀಮಿಯಂ ಬಸ್‌ಗಳ ಸಂಪೂರ್ಣ ಫ್ಲೀಟ್ ಅನ್ನು ನವೀಕರಿಸಲು ಪ್ಲಾನ್ ಮಾಡಿಕೊಳ್ಳುತ್ತೇವೆ. ದಕ್ಷತೆ ಮತ್ತು ಪರಿಸರ ಸ್ನೇಹಿ ಇಂಟರ್‌ಸಿಟಿ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ 300 ಎಲೆಕ್ಟ್ರಿಕ್ ಬಸ್‌ಗಳನ್ನು ಹೊರ ತರಲಿದೆ ಎಂದು ಹೇಳಿದರು.
ನವೀಕರಣಕ್ಕೆ ಎಂತಹ ಬಸ್‌ಗಳ ಆಯ್ಕೆ?
ರಾಜ್ಯದಲ್ಲಿ 10 ಲಕ್ಷ ಕಿಲೋಮೀಟರ್ ಗೂ ಹೆಚ್ಚು ಸಂಚಾರ ನಡೆಸಿರುವ ಸುಮಾರು 10 ವರ್ಷ ಹಳೆಯದಾದ ಬಸ್‌ಗಳನ್ನು ನವೀಕರಣಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ, ಬಸ್ ಅನ್ನು ಸಂಪೂರ್ಣವಾಗಿ ಡಿಸ್ಅಸೆಂಬಲ್ ಮಾಡಿ, ಬಸ್ ಚಾಸಿಸ್ ಮಾತ್ರ ಉಳಿಯುತ್ತದೆ.
ಬಳಿಕ ಸೀಟುಗಳಿಂದ ಕಿಟಕಿಗಳವರೆಗೆ, ಪ್ರತಿ ಪಾರ್ಟ್ ಬದಲಾಯಿಸುತ್ತೇವೆ. ಗಾಡಿಗೆ ಸಂಪೂರ್ಣ ಹೊಸ ಬಾಡಿ ನಿರ್ಮಿಸುತ್ತೇವೆ. ಬಣ್ಣ ಬಳಿದ ನಂತರ, ನವೀಕರಿಸಿದ ಬಸ್ ಹೊಸದರಂತೆ ಕಾಣುತ್ತದೆ ಎಂದು ಅಧಿಕಾರಿ ಹೇಳಿದರು.
ನವೀಕರಣ ವೇಳೆ ಬಸ್‌ಗಳು ಉತ್ತಮವಾಗಿ ಎಂಜಿನ್ ನಿರ್ವಹಣೆಯನ್ನು ಖಚಿತ ಪಡಿಸಿಕೊಳ್ಳುತ್ತೇವೆ. ಎಂಜಿನ್ ಬದಲು ಮಾಡುವ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ 15 ವರ್ಷಗಳಿಂದ ಸೇವೆ ಸಲ್ಲಿಸಿದ ಬಸ್‌ಗಳ ಸಂಚಾರ ಸ್ಥಗಿತಗೊಳಿಸುತ್ತೇವೆ. ನವೀಕರಣಕ್ಕೆ ಆಯ್ಕೆ ಮಾಡಿರುವ ಬಸ್ ಕೇವಲ ಕೇವಲ 10 ವರ್ಷಗಳಷ್ಟು ಹಳೆಯವು ಎಂದು ಅವರು ಮಾಹಿತಿ ನೀಡಿದರು.
ನಾಲ್ಕು ನಿಗಮಗಳಿಂದ 2,300 ಹೊಸ ಬಸ್ ಖರೀದಿ
ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ನಿಗಮಗಳು ಒಟ್ಟು 2,300 ಹೊಸ ಬಸ್‌ಗಳನ್ನು ಖರೀದಿಸಿವೆ. ಪ್ರಸ್ತುತ ರಾಜ್ಯದಲ್ಲಿಒಟ್ಟು 23,989 ಬಸ್ ಗಳು ನಿತ್ಯ ರಸ್ತೆಗೆ ಇಳಿಯುತ್ತವೆ. ಅವೆಲ್ಲವು ದೈನಂದಿನವಾಗಿ 65.02 ಲಕ್ಷ ಕಿಲೋಮೀಟರ್ ಕ್ರಮಿಸುತ್ತವೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೊಸ ಉಪಕ್ರಮದಿಂದ ಮುಂದಿನ ದಿನಗಳಲ್ಲಿ ಹಳೆಯ ನಿಗದಿತ ಕಿಮೀ ಓಡಿರುವ ಐರಾವತ ಬಸ್‌ಗಳು ಮತ್ತೆ ರಸ್ತೆಗೆ ಇಳಿಯಲಿವೆ. ಶಕ್ತಿ ಯೋಜನೆಗೆ ಜೊತೆಗೆ ರಾಜ್ಯದ ಯಾವೆಲ್ಲ ಜಿಲ್ಲೆಗಳಿಗೆ ಬಳಸಿಕೊಳ್ಳಬೇಕು ಎಂದು ಇಲಾಖೆ ನಿರ್ಧರಿಸಲಿದೆ. ಸದ್ಯ ನಾಲ್ಕು ಹಳೇಯ ಬಸ್‌ಗಳು ಹೊಸ ರೂಪ ಪಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಳೇಯ ಬಸ್ ಹೊಸ ರೂಪ ಪಡೆಯಲಿವೆ.












Click it and Unblock the Notifications