ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್‌ನಲ್ಲಿ ದುರ್ಘಟನೆ: ಬಸ್‌ ಡಿಕ್ಕಿ ಹೊಡೆದು ವ್ಯಕ್ತಿ ಸಾವು

|
Google Oneindia Kannada News

ಬೆಂಗಳೂರು, ಮೇ 4: ಇಂದಿನಿಂದ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಬಸ್‌ಗಳು ಓಡಾಟ ಶುರುವಾಗಿದೆ. ಆದರೆ, ಮೊದಲ ದಿನವೇ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ದುರ್ಘಟನೆವೊಂದು ನಡೆದಿದೆ.

ಮೆಜೆಸ್ಟಿಕ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾರೆ. ಮೃತಪಟ್ಟ ವ್ಯಕ್ತಿಗೆ 45 ವರ್ಷದ ವಯಸ್ಸಾಗಿತ್ತು. ಕೊಪ್ಪಳ ಘಟಕದ ಬಸ್‌ ಇದಾಗಿದ್ದು, ಫ್ಲಾಟ್ ಫಾಮ್‌ನಿಂದ ಹೊರಡುವಾಗ ಅಪಘಾತ ನಡೆದಿದೆ. ಘಟನೆಗೆ ಕಾರಣವಾದ ಡ್ರೈವರ್‌ ಬಸ್‌ ಬಿಟ್ಟು ಓಡಿ ಹೋಗಿದ್ದಾನೆ.

ವಲಸೆ ಕಾರ್ಮಿಕರು ಹೋಗುತ್ತಿದ್ದ ಬಸ್ ಅಪಘಾತ; 40 ಜನರ ರಕ್ಷಣೆವಲಸೆ ಕಾರ್ಮಿಕರು ಹೋಗುತ್ತಿದ್ದ ಬಸ್ ಅಪಘಾತ; 40 ಜನರ ರಕ್ಷಣೆ

ಸರ್ಕಾರ ಇಂದಿನಿಂದ ಬಸ್‌ ಸಂಚಾರಕ್ಕೆ ಅವಕಾಶ ನೀಡಿ, ಲಾಕ್‌ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ನೀಡಿತ್ತು. ಹಾಗಾಗಿ ನೂರಾರೂ ಸಂಖ್ಯೆಯ ಜನರು ಮೆಜೆಸ್ಟಿಕ್‌ನಲ್ಲಿ ಜಮಾಯಿಸಿದ್ದಾರೆ. ವಲಸೆ ಕೂಲಿ ಕಾರ್ಮಿಕರು ಸಹ ಇಲ್ಲಿ ಇದ್ದಾರೆ. ಈ ಜನದಟ್ಟಣೆಯ ನಡುವೆ ಅಪಘಾತ ಸಂಭವಿಸಿದೆ.

KSRTC Bus Accident In Majestic

ಫ್ಲಾಟ್ ಫಾರಂ ನಂಬರ್ 15 ರಿಂದ ಬಸ್‌ ಹೊರಡುತ್ತಿದ್ದು, ಎದುರುಗಡೆ ಇದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಬಸ್‌ ಗುದ್ದಿದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಮೆಜೆಸ್ಟಿಕ್‌ನಂತಹ ಜನದಟ್ಟಣೆ ಇರುವ ಸ್ಥಳದಲ್ಲಿ ನಿಧಾನವಾಗಿ ಬಸ್‌ ಚಲಾಯಿಸಬೇಕು. ಆದರೆ, ಕೆಲವು ಚಾಲಕರು ವೇಗವಾಗಿ ಚಲಾಯಿಸಿ ಪದೇ ಪದೇ ಇಂತಹ ಅಪಘಾತಕ್ಕೆ ಕಾರಣರಾಗುತ್ತಾರೆ.

English summary
KSRTC bus accident in majestic today (May 4th). A 45 years old person dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X