ಹಳೆಯ ವಾಹನಗಳ ನಿಷ್ಕ್ರಿಯಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಪಟ್ಟು
Recommended Video

ಬೆಂಗಳೂರು, ಅಕ್ಟೋಬರ್ 24: ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ವಾಹನ ಸಂಚಾರವನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತೊಮ್ಮೆ ಸರ್ಕಾರದ ಬಾಗಿಲು ತಟ್ಟಿದೆ.
ಇದೀಗ ಬೆಂಘಳೂರಲ್ಲಿ 73 ಲಕ್ಷಕ್ಕೂ ಅಧಿಕ ವಾಹನಗಳಿವೆ. ಇನ್ನೊಂದು ವಿಚಾರವೆಂದರೆ ಅದರಲ್ಲಿ 16 ಲಕ್ಷಕ್ಕೂ ಅಧಿಕ ವಾಹನಗಳು 15 ವರ್ಷಗಳನ್ನು ಪೂರೈಸಿದ ವಾಹನಗಳಾಗಿವೆ. ಒಟ್ಟು 32 ಸಾವಿರ ವಾಹನಗಳ ಹೊಗೆ ತಪಾಸಣೆ ಮಾಡಲಾಗಿದೆ. ಪೆಟ್ರೋಲ್ ವಾಹನಗಳು ಶೇ.14ರಷ್ಟು ಹಾಗೂ ಡೀಸೆಲ್ ವಾಹನಗಳು ಶೇ.25ರಷ್ಟು ವಿಷ ಅನಿಲ ಉಗುಳುವ ಮಾಹಿತಿ ತಪಾಸಣೆಯಿಂದ ತಿಳಿದುಬಂದಿದೆ.
15 ವರ್ಷಗಳಿಗಿಂತ ಹೆಚ್ಚಿ ವಾಹನವನ್ನು ನಿಷೇಧಿಸುವಂತೆ 2016ರಲ್ಲಿಯೇ ಒಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಾರಿಗೆ ಅಧಿಕಾರಿಗಳು ಹಾಗೂ ಸರ್ಕಾರದ ಇನ್ನಿತರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಒತ್ತಾಯಿಸಿದೆ.

15 ವರ್ಷ ಮೀರಿದ ವಾಹನಗಳ ಸಂಚಾರವನ್ನು ಕೇಂದ್ರ ನಿಷೇಧ ಮಾಡಿದಲ್ಲಿ ಕರ್ನಾಟಕದಲ್ಲೂ ನಿಷೇಧಿಸಲಾಗುತ್ತದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಸ್ತಾವನೆಯನ್ನು ಸರ್ಕಾರ ಯಾವ = ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿಯೇ ಕಾರ್ಯಪಡೆ ತಂಡ ರಚಿಸಿ ಸಾರಿಗೆ ಇಲಾಖೆ ಸ್ಥಳೀಯ ಸಂಸ್ಥೆಗಳಿಗೆ ಕ್ರಿಯಾ ಯೋಜನೆ ರಚಿಸುವಂತೆ ನಿರ್ದೇಶನ ನೀಡಿದೆ.












Click it and Unblock the Notifications