ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಟಿಪಿ ಮೇಲ್ದರ್ಜೆ: ಬೆಂಗಳೂರಿನ 60 ಅಪಾರ್ಟ್ ಮೆಂಟ್‌ಗಳಿಗೆ ನೋಟಿಸ್

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ಅಳವಡಿಸದ ಬೆಂಗಳೂರಿನ 60 ಅಪಾರ್ಟ್ ಮೆಂಟ್‌ಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈಗಾಗಲೇ ಬೆಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೃಷಭಾವತಿ ನದಿ ಬಳಿ ಇರುವ ಎಸ್‌ಟಿಪಿ ಅಳವಡಿಸದ 50 ಮನೆಗಳಿಗಿಂತ ಹೆಚ್ಚು ಮನೆಗಳನ್ನು ಹೊಂದಿರುವ ಅಪಾರ್ಟ್ ಮೆಂಟ್‌ಗಳಿಗೆ ನೋಟೀಸ್ ಜಾರಿ ಮಾಡಿತ್ತು.

ಅಪಾರ್ಟ್ ಮೆಂಟ್‌ಗಳಲ್ಲಿ ಮೂಲ ಸೌಕರ್ಯ, ನಾಗರಿಕ ಸ್ನೇಹಿ ನಿಯಮ ಅಗತ್ಯಅಪಾರ್ಟ್ ಮೆಂಟ್‌ಗಳಲ್ಲಿ ಮೂಲ ಸೌಕರ್ಯ, ನಾಗರಿಕ ಸ್ನೇಹಿ ನಿಯಮ ಅಗತ್ಯ

ಇದೀಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒಟ್ಟು ನಗರದ 60 ಅಪಾರ್ಟ್ ಮೆಂಟ್‌ ಗಳಿಗೆ ನೋಟಿಸ್ ಜಾರಿ ಮಾಡಿದೆ.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಂತೆ ಮಂಡಳಿ ಅಪಾರ್ಟ್ ಮೆಂಟ್‌ ನಲ್ಲಿ ಅಳವಡಿಸಿರುವ ಗುಣಮಟ್ಟವಿಲ್ಲದ ಎಸ್‌ಟಿಪಿಗಳನ್ನು ಪರಿಶೀಲಿಸಿ ಅವುಗಳನ್ನು ಮೇಲ್ದರ್ಜೆಗೇರಿಸಲು ಸೂಚಿಸಿದೆ.

 ಹೊಸ ಎಸ್‌ಟಿಪಿ ನಿಯಮದಲ್ಲೇನಿದೆ?

ಹೊಸ ಎಸ್‌ಟಿಪಿ ನಿಯಮದಲ್ಲೇನಿದೆ?

ಎಸ್‌ಟಿಪಿಗಳಲ್ಲಿ ಎರಡು ಪೈಪ್‌ಗಳ ಸಂಪರ್ಕವಿರಬೇಕು. ಅದರಲ್ಲಿ ಕೊಳಚೆ ನೀರನ್ನು ಸಂಸ್ಕರಿಸಿದ ಬಳಿಕ ಗಟ್ಟಿಯಾದ ಕಸ ಹೊರಬರುವುದನ್ನು ಸಂಸ್ಕರಣೆ ಮಾಡುವ ವ್ಯವಸ್ಥೆಯೂ ಇರಬೇಕು. ಹಳೇ ಎಸ್‌ಟಿಪಿಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ ಮತ್ತು ಕೊಳಚೆ ನೀರು ಸರಿಯಾಗಿ ಸಂಸ್ಕರಣೆ ಆಗುತ್ತಿಲ್ಲ, ಆದ್ದರಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: 50 ಮನೆಗಳ ಅಪಾರ್ಟ್‌ಮೆಂಟ್‌ಗೆ ಎಸ್‌ಟಿಪಿ ಕಡ್ಡಾಯಬೆಂಗಳೂರು: 50 ಮನೆಗಳ ಅಪಾರ್ಟ್‌ಮೆಂಟ್‌ಗೆ ಎಸ್‌ಟಿಪಿ ಕಡ್ಡಾಯ

 ವಿದ್ಯುತ್ ಕಡಿತ ಮಾಡಲ್ಲ

ವಿದ್ಯುತ್ ಕಡಿತ ಮಾಡಲ್ಲ

ಒಂದೊಮ್ಮೆ ಎಸ್‌ಟಿಪಿ ಮೇಲ್ದರ್ಜೆಗೇರಿಸದಿದ್ದರೆ ಅಪಾರ್ಟ್ ಮೆಂಟ್ ನ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎನ್ನುವ ಮಾತುಗಳಲ್ಲವೂ ಸುಳ್ಳು ಆ ರೀತಿ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಎಸ್‌ಟಿಪಿಯಲ್ಲಿ ನಿಗಿತ ಗುಣಮಟ್ಟ ಕೊಳಚೆ ನೀಡು ಸಂಸ್ಕರಣೆ ಬಗ್ಗೆ ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಲಾಗಿದೆ ಆದರೆ ವಿದ್ಯುತ್ ಕಡಿತಗೊಳಿಸುವ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 ಹೊಸ ಎಸ್‌ಟಿಪಿ ಅಳವಡಿಸಿದ ಬಳಿಕ ಪರವಾನಗಿ ಪಡೆಯಬೇಕು

ಹೊಸ ಎಸ್‌ಟಿಪಿ ಅಳವಡಿಸಿದ ಬಳಿಕ ಪರವಾನಗಿ ಪಡೆಯಬೇಕು

ಹಳೆಯ ಅಪಾರ್ಟ್ ಮೆಂಟ್ ಗಳು ಎಸ್‌ಟಿಪಿ ಅಳವಡಿಸಿಕೊಂಡ ಬಳಿಕ ಮಂಡಳಿಗೆ ಮಾಹಿತಿ ನೀಡಿ ಪರವಾನಗಿ ಪಡೆಯಬೇಕು, ಕೆಲ ಅಪಾರ್ಟ್ ಮೆಂಟ್ ಗಳು ಪರವಾನಗಿಯನ್ನು ಪಡೆದಿಲ್ಲ, ಇನ್ನೂ ಕೆಲವು ಅಪಾರ್ಟ್ ಮಂಟ್ ಗಳು ಪರವಾನಗಿ ನವೀಕರಣವನ್ನು ಮಾಡಿಕೊಂಡಿಲ್ಲ.

ಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ

 ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ

ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ

ನೋಟಿಸ್ ನೀಡಿದ ಬಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಈಗಾಗಲೇ ಎಸ್‌ಟಿಪಿಯಲ್ಲಿ ಹಲವು ಬದಲಾವಣೆಗಳಾಗಿದೆ. ಮೇಲ್ದರ್ಜೆಗೇರಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅಪಾರ್ಟ್ ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

English summary
After the BWSSB threat now Karnataka state pollution control board issued notice to 60 apartments over Sewage treatment plant(STP) issues. These apartments didn't installed the STP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X