ಕುಮಾರಸ್ವಾಮಿ ಅವರ ಯುಎಸ್ ಪ್ರವಾಸದ ಬಗ್ಗೆ ಈಶ್ವರಪ್ಪ ವ್ಯಂಗ್ಯ
ಬೆಂಗಳೂರು, ಜೂನ್ 30: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಬಗ್ಗೆ ಸರಣಿ ಟ್ವೀಟ್ ಮೂಲಕ ಗೇಲಿ ಮಾಡುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಮತ್ತೊಮ್ಮೆ ಕುಮಾರಸ್ವಾಮಿ ಅವರನ್ನು ಕೆಣಕಿದ್ದಾರೆ. ಐಷಾರಾಮಿ ಗ್ರಾಮ ವಾಸ್ತವ್ಯ, ಸ್ಟಾರ್ ಹೋಟೆಲ್ ನಲ್ಲಿ ಸಿಎಂ ವಾಸ್ತವ್ಯವನ್ನು ಉಲ್ಲೇಖಿಸಿರುವ ಈಶ್ವರಪ್ಪ ಅವರು ಯುಎಸ್ ಪ್ರವಾಸ ಕೈಗೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸಿಎಂ ವಿದೇಶ ಪ್ರವಾಸಕ್ಕೆ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿ ಮಾಡಿರುವ ಟ್ವೀಟ್ ಗೆ ಪರ ವಿರೋಧ ಟ್ವೀಟ್ ಪ್ರತಿಕ್ರಿಯೆಗಳು ಬಂದಿವೆ. 'ತಾಜ್ ವೆಸ್ಟೆಂಡ್ ಟು ಗ್ರಾಮ ವಾಸ್ತವ್ಯ ಎರಡು ದಿನ, ತಾಜ್ ವೆಸ್ಟೆಂಡ್ ಟು ಅಮೆರಿಕ 10 ದಿನ' ಎಂದು ಸಿಎಂ ವಿದೇಶ ಪ್ರವಾಸಕ್ಕೆ ಟ್ವಿಟರ್ ನಲ್ಲಿ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ.
— K S Eshwarappa (@ikseshwarappa) June 29, 2019
ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ.
ಯಾರಾದರೂ ಪ್ರಶ್ನಿಸಿದರೆ ನೀವೇನು ನಂಗೆ ವೋಟ್ ಹಾಕಿದೀರಾ ಅಂತ ಪ್ರಶ್ನಿಸೋ ಮುಖ್ಯಮಂತ್ರಿಗಳೇ, ನಿಮ್ಮ ಪಾರ್ಟಿ ಹೆಸರನ್ನು ಜಾತ್ಯತೀತ ಜನತಾದಳದ ಬದಲು ಪ್ರಶ್ನಾತೀತ ಜನತಾದಳ ಅಂತ ಇಟ್ಟುಬಿಡಿ.@BJP4Karnataka @BSYBJP
ಯಾರಾದರೂ ಪ್ರಶ್ನಿಸಿದರೆ ನೀವೇನು ನನಗೆ ವೋಟ್ ಹಾಕಿದ್ರಾ ಎಂದು ಕೇಳುತ್ತೀರಿ. ಹೀಗೆ ಪ್ರಶ್ನಿಸುವ ನೀವು ಜೆಡಿಎಸ್ ಪಕ್ಷದ ಹೆಸರನ್ನು ಬದಲಿಸಿ. ಜಾತ್ಯತೀತ ಜನತಾದಳ ಬದಲು ಪ್ರಶ್ನಾತೀತ ಜನತಾದಳ ಎಂದು ಹೆಸರಿಡುವಂತೆ ಈಶ್ವರಪ್ಪ ಹೇಳಿದ್ದಾರೆ.

ಮೋದಿ ಪ್ರವಾಸದ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರು
ಅಭಿವೃದ್ಧಿಯ ಹೆಸರಿನಲ್ಲಿ ನಿಮ್ಮ ಪ್ರಧಾನಿಯವರು ವಿದೇಶಗಳನ್ನು ಸುತ್ತುತ್ತಿದ್ದರಲ್ಲ ಅವರನ್ನು ಒಮ್ಮೆ ಪ್ರಶ್ನಿಸಿ, ನೀವು ಅಧಿಕಾರದಲ್ಲಿ ಇಲ್ದೇನೆ ಈ ರೀತಿ ನಿಮಗೇನಾದರೂ ಅಧಿಕಾರ ಕೊಟ್ಟರೆ ಕರ್ನಾಟಕ ತೊಳೆದು ಬಿಡ್ತೀರಾ..ಎಂದ ಧರ್ಮ
+
ಕುಮಾರಸ್ವಾಮಿ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಹೋಗುತ್ತಿರುವೆ ಎಂದು ಹೇಳಿದ್ದಾರೆ. ಸ್ವಲ್ಪ ಪ್ರೂಫ್ ಕೊಟ್ಟುಬಿಡಿ ಅಂತ ಕೇಳಿ ಸರ್, ನಮ್ಮ ಕರ್ನಾಟಕದ ಜನತೆಯ ದುಡ್ಡು ಫಾರೀನ್ ಟ್ರಿಪ್ ಮಾಡೊಕ್ಕಲ್ಲ ಎಂದ ಅನುಪ್ ಕುಲಕರ್ಣಿ

ಒಕ್ಕಲಿಗರ ಕಾರ್ಯಕ್ರಮಕ್ಕೆ ಹೋಗಿರುವುದು
ಒಕ್ಕಲಿಗರ ಕಾರ್ಯಕ್ರಮಕ್ಕೆ ಹೋಗಿರುವುದು, ಸರ್ಕಾರದ ದುಡ್ಡಿನಲ್ಲಿ ಹೋಗಿಲ್ಲ, ಹಿಂದೂ ಅಲ್ವಲ್ಲ ನೀನು, ನಿಂಗೆ ಎಲ್ಲಿ ಗೊತ್ತಾಗಬೇಕು ಎಂದ ನೂತನ್.
ಜನರಿಂದಲೆ ಆಯ್ಕೆಯಾದ ಶಾಸಕರೇ ದಯವಿಟ್ಟು ಸಮಸ್ಯೆಗಳತ್ತ ಗಮನ ಹರಿಸಿ ಎಂದು ಚಿತ್ರ ಸಮೇತ ಟ್ವೀಟ್ ಮಾಡಿದ ನಟರಾಜ್.

ಎಚ್ಡಿಕೆ ಪ್ರಶ್ನೆ ಮಾಡುವ ಧೈರ್ಯ ನಿಮಗೆ ಮಾತ್ರ ಇದೆ
ಎಚ್ಡಿಕೆ ಪ್ರಶ್ನೆ ಮಾಡುವ ಧೈರ್ಯ ನಿಮಗೆ ಮಾತ್ರ ಇದೆ ಎಂದ ರಾಜೇಶ್.
ಒಂದು ಕಾರ್ಯಕ್ರಮ ನಿಮಿತ್ತ ಅಮೆರಿಕಾಕ್ಕೆ ಹೋದರೂ ತಪ್ಪು ಅಂದರೆ, ಇದರಲ್ಲೇ ಗೊತ್ತಾಗುತ್ತೆ ನಿಮ್ಮ ಅಧಿಕಾರದ ದಾಹ ನಿಮ್ಮನ್ನು ಹೆಗೆ ವಿಲ ವಿಲ ಮಾಡ್ತಿದೆ ಅಂತ ಹಗಲು ಕನಸು ಹೀಗೆ ಕಾಣ್ತಾ ಇರಿ ಈಶು ಅಂಕಲ್ ನಮ್ಮ ಯಾವಾಗಲೂ ಜಾತ್ಯಾತೀತವೆ ನೇ ನಿಮ್ಮ ಬಿಜೆಪಿ ಥರ ಅಲ್ಲ ಎಂದ ಶರಣ್.

ಮನ್ಸೂರ್ ಖಾನ್ ಬಗ್ಗೆ ಕೂಡಾ ಉಲ್ಲೇಖ
ಸಾಮಾನ್ಯ ಜನತೆಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮನ್ಸೂರ್ ಖಾನ್ ನನ್ನು ಹಿಡಿದು ಜನಗಳೀಗೆ ನ್ಯಾಯಬೇಕಿದ್ದ ಮುಖ್ಯಮಂತ್ರಿಯೇ ಇಂದು ವಿದೇಶಕ್ಕೆ ಹಾರಿದ್ದಾರೆ.. ಏನಿದು ಅಮೆರಿಕಾ-ದುಬೈ-ಕರ್ನಾಟಕದ ದೌರ್ಭಾಗ್ಯ ಎಂದು ಚೌಕಿದಾರ್ ಸಿದ್ದೇಶ್












Click it and Unblock the Notifications