ರಾಜಕೀಯ ನಿವೃತ್ತಿ ಘೋಷಿಸಿದ ಕೆಎಸ್ ಈಶ್ವರಪ್ಪ ವಿವಾದಗಳು
ಬೆಂಗಳೂರು, ಏಪ್ರಿಲ್ 11: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಬಿಜೆಪಿ ಪಕ್ಷದೊಳಗೆ ಸಂಚಲನಕಾರಿ ಘಟನೆಗಳು ನಡೆಯುತ್ತಿದ್ದು, ಆಶ್ವರ್ಯವೆಂಬಂತೆ ಹಿರಿಯ ಬಿಜೆಪಿ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಪತ್ರ ಬರೆದಿರುದ ಕೆಎಸ್ ಈಶ್ವರಪ್ಪ ನಾನು ಸ್ವಯಂ ಇಚ್ಚೆಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಪ್ರಮುಖ ನಾಯಕರಾಗಿದ್ದ ಕೆಎಸ್ ಈಶ್ವರಪ್ಪ ವಿವಾದಿತ ಹೇಳಿಕೆ ನೀಡುವುದರಲ್ಲೂ ಮುಂಚೂಣಿಯಲ್ಲಿದ್ದರು. ಇದು ಎಷ್ಟೋ ಬಾರಿ ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಮುಖ ಚರ್ಚಾ ವಿಷಯವಾಗುತ್ತಿತ್ತು.

ಕೆಎಸ್ ಈಶ್ವರಪ್ಪ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದದಲ್ಲಿ ವಿಜಯ ಸಂಕಲ್ಪ ಯಾತ್ರೆ ಯಲ್ಲಿ ಮಾಜಿ ಸಚಿವ ಈಶ್ವರಪ್ಪ ಭಾಷಣ ಸಂದರ್ಭದಲ್ಲಿ ಮಸೀದಿಯ ಆಜಾನ್ ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಎಲ್ಲಿ ಹೋದ್ರು ಇದೊಂದು ತಲೆನೋವು ನನಗೆ, ಸುಪ್ರಿಂ ಕೋರ್ಟ್ ಆದೇಶ ಇದೆ ಇವತ್ತಲ್ಲಾ ನಾಳೆ ಇದು ಖತಂ ಆಗುತ್ತೆ ಅನುಮಾನ ಬೇಡ ಎಲ್ಲಾ ಧರ್ಮಕ್ಕೂ ಗೌರವ ಕೊಡಿ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಪ್ರಶ್ನಿಸಿದ್ದರು.
ನಮ್ಮ ದೇವಸ್ಥಾನ ದಲ್ಲೂ ಪೂಜೆ ಮಾಡುತ್ತೇವೆ ಅಲ್ಲೂ ಶ್ಲೋಕ ಹೇಳ್ತೆವೆ, ಭಜನೆ ಮಾಡ್ತೇವೆ. ಅವರಿಗಿಂತ ಜಾಸ್ತಿ ಭಕ್ತಿ ಪ್ರಪಂಚದಲ್ಲಿ ಧರ್ಮವನ್ನು ಉಳಿಸುತ್ತಿರುವಂತ ದೇಶ ಭಾರತ ಮಾತ್ರ. ಮೈಕಲ್ಲಿ ಜೋರಾಗಿ ಕೂಗಿದ್ರೆ ಮಾತ್ರ ಅಲ್ಲಾನಿಗೆ ಹೇಳಿದ್ರೆ ಅವನಿಗೆ ಕಿವುಡಾ ಅಂತ ಹೇಳ್ಬೆಕಾಗುತ್ತೆ,ಆದಷ್ಟು ಬೇಗ ಈ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಹೇಳಿದರು.

ಹಿಂದೆ ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಾಗವಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು ಎಂಬ ಹೇಳಿಕೆ ನೀಡಿ ಮತ್ತೆ ವಿವಾದದ ಕೇಂದ್ರವಾಗಿದ್ದರು. ಕೊಪ್ಪಳ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ್ದ ಈಶ್ವರಪ್ಪ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಮನಮೋಹನ್ ಸಿಂಗ್ ಗಂಡಸೇ ಅಲ್ಲ, ಕಾಂಗ್ರೆಸ್‌ನಲ್ಲಿ ತಾಯಿ ಮೊಲೆಹಾಲು ಕುಡಿದ ಗಂಡಸರೇ ಇಲ್ಲ ಎಂಬಂತಹ ಮಾತುಗಳನ್ನು ಆಡಿದ್ದರು.
2018ರಲ್ಲಿ ಈಶ್ವರಪ್ಪ, ಬಿಜೆಪಿ ಸರ್ಕಾರ ಏನು ಮಾಡಿದೆ, ಕೇಂದ್ರ ಸರ್ಕಾರ ಏನು ಮಾಡಿದೆ. ನಾವು ಬಂದ್ಮೇಲೆ ಏನೇನು ಮಾಡ್ತೀವಿ, ದಲಿತರಿಗೆ, ಹಿಂದುಳಿದವರಿಗೆ ರೈತರಿಗೆ ಹೆಣ್ಮಕ್ಕಳಿಗೆ ವಯಸ್ಸಾಗಿರೋರಿಗೆ ಏನು ಮಾಡುತ್ತೇವೆ ಈ ವಿಷಯಗಳೆಲ್ಲಾ ಗೊತ್ತಿರಬೇಕು, ನಾವಿದನ್ನೆಲ್ಲಾ ತಿಳ್ಕೊಂಡು ಹೋಗ್ಬೇಕು. ಅಕಸ್ಮಾತ್ ನಮಗೆ ಗೊತ್ತಿಲ್ಲ ಅಂದ್ರೆ ಒಂದನ್ನು ನೆನಪಿಟ್ಕೊಬೇಕು. ರಾಜಕಾರಣಿಗಳು ಗೊತ್ತಿಲ್ಲ ಅಂತ ಯಾವಾಗ್ಲೋ ಒಪ್ಕೋಬಾರ್ದು. ಸುಳ್ಳೋ ಪೊಳ್ಳೋ ಏನೋ ಒಂದು ಹೇಳಿ ಬರಬೇಕು ಎಂದು ಹೇಳಿದ್ದರು.
ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಾಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ, ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೀತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದ್ರಲ್ಲೆ ತಿರುಗಿಸಿ ಹೊಡೆಯಿರಿ, ಒಂದಕ್ಕೆ ಎರಡು ತೆಗೀರಿ" ಎಂದು ಬಹಿರಂಗವಾಗಿ ಹಿಂಸಾಕೃತ್ಯಕ್ಕೆ ಕರೆ ನೀಡಿದ್ದರು.
ಹಿಂದೂ ಕಾರ್ಯಕರ್ತರ ಮೇಲೆ ಕೈ ಮಾಡಿದವರನ್ನು ಒಂದಕ್ಕೆ ಎರಡು ತೆಗೆದುಬಿಡಿ ಎಂಬ ಈಶ್ವರಪ್ಪನವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಪ್ರಹಾರವನ್ನೇ ನಡೆಸಿದ್ದರು. ಹಿಂದೆ ಪತ್ರಿಕಾಗೋಷ್ಟಿಯಲ್ಲಿ ಈಶ್ವರಪ್ಪನವರು, ಕಾಂಗ್ರೇಸಿಗರು ಕುಡುಕ ಸೂ....ಮಕ್ಕಳು" ಎಂಬ ಪದವನ್ನು ಬಳಿಸಿಬಿಟ್ಟಿದ್ದರು. ಕೊನೆಗೆ ಈ ಹೇಳಿಕೆ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾದ ಬೆನ್ನಿಗೆ ಈಶ್ವರಪ್ಪ ಕ್ಷಮೆ ಕೋರಿದ್ದರು.
ಕೆಎಸ್ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ಓರ್ವ ಕುಡುಕ, ಮೋಸಗಾರ. ಯಾವ ಸಂದರ್ಭದಲ್ಲಿ ಕುಡೀತಾರೆ, ಕುಡಿದಾಗ ಏನು ಮಾತಾಡ್ತಾರೆ ಅಂತ ಅವರಿಗೆ ಗೊತ್ತಿರಲ್ಲ" ಎಂದು ವಯಕ್ತಿಕವಾಗಿ ನಿಂದಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ ಆದ ದಿನದಂದು ಶಿವಮೊಗ್ಗದಲ್ಲಿ ಮಾತನಾಡಿದ್ದ ಕೆ.ಎಸ್ ಈಶ್ವರಪ್ಪ ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸಲಾಗುವುದು. ಕಾಶಿ ವಿಶ್ವನಾಥನ ಜಾಗ, ಮಥುರಾ ಕೃಷ್ಣನ ಸ್ಥಳವಾಗಿದ್ದು, ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಮಗೆ ಗುಲಾಮಗಿರಿ ಭಾವ ಕಾಡುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ ಎಂದು ಹೇಳಿಕೆ ನೀಡಿದ್ದರು.
ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಅವರು ಸಚಿವರಾಗಿದ್ದ ಈಶ್ವರಪ್ಪ ಅವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಪಾಟೀಲ್ ಅವರು 4 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಯೋಜನೆಗೆ ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸಲು ಈಶ್ವರಪ್ಪ 40% ಕಮಿಷನ್‌ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಪಾಟೀಲ್ ಮಾರ್ಚ್‌ನಲ್ಲಿ ಆರೋಪಿಸಿದ್ದರು ಮತ್ತು ಕೇಂದ್ರ ಆರ್‌ಡಿಪಿಆರ್ ಸಚಿವರಲ್ಲದೆ ಪ್ರಧಾನಿಗೆ ದೂರು ನೀಡಿದ್ದರು.
ಫೆಬ್ರವರಿ 20 ರಂದು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದಾಗಲೂ ಈಶ್ವರಪ್ಪ ವಿವಾದವನ್ನು ಎಬ್ಬಿಸಿದರು. ಪೊಲೀಸ್ ತನಿಖೆ ಪ್ರಾರಂಭವಾಗುವ ಮೊದಲೇ, "ಮುಸ್ಲಿಂ ಗೂಂಡಾಗಳು" ತನ್ನ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. 2021ರಲ್ಲಿ ಗ್ರಾಮೀಣಾಭೀವೃದ್ಧಿ ಸಚಿವರಾಗಿ, ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕುಟುಂಬ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದರು. ಆರ್‌ಡಿಪಿಆರ್ ಇಲಾಖೆಯ ಎಲ್ಲಾ ಯೋಜನೆಗಳಿಗೆ ಸಿಎಂ ಕಚೇರಿಯಿಂದ ಅನುಮತಿ ನೀಡಲಾಗುತ್ತಿದೆ ಎಂದು ಅವರು ವಿವಾದಾತ್ಮಕವಾಗಿ ಹೇಳಿದ್ದರು. ದೂರು ನೀಡಲು ಆಗ ರಾಜ್ಯಪಾಲರಾದ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿದ್ದರು. ಇದು ಯಡಿಯೂರಪ್ಪನವರ ಸಿಎಂ ಆಗಿ ಮುಂದುವರಿಯುವ ಸಾಧ್ಯತೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗಿತ್ತು.
2012ರಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದಲ್ಲಿ ರಾಜ್ಯ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದರು. ಹಿರಿಯ ನಾಯಕನ ಬಳಿ ಕರೆನ್ಸಿ ಎಣಿಕೆ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 2015ರಲ್ಲಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ, ಅವರು ಮಹಿಳಾ ಪತ್ರಕರ್ತರಿಗೆ ವಿರೋಧ ಪಕ್ಷವು ತನ್ನ ಕರ್ತವ್ಯಗಳಲ್ಲಿ ವಿಫಲವಾಗಿದೆಯೇ ಎಂದು ಪ್ರಶ್ನಿಸಿದ ನಂತರ "ಯಾರಾದರೂ ಅವಳನ್ನು ಎಳೆದುಕೊಂಡು ಅತ್ಯಾಚಾರ ಮಾಡಿದರೆ" ಪ್ರತಿಪಕ್ಷಗಳು ಏನು ಮಾಡಬಹುದು ಎಂದು ಹೇಳಿದಾಗ ಅವರು ಟೀಕೆಗಳನ್ನು ಮಾಡಿದರು. ಅವರು 2006 ರಿಂದ ಪ್ರತಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು.
2015ರಲ್ಲಿ 'ರಾಜ್ಯದಲ್ಲಿ ದಕ್ಷ ಅಧಿಕಾರಿಗಳ ಹತ್ಯೆ, ದರೋಡೆ, ಅತ್ಯಾಚಾರಗಳು ಹೆಚ್ಚುತ್ತಿವೆಯಲ್ಲ. ಈ ಬಗ್ಗೆ ವಿರೋಧ ಪಕ್ಷವಾದ ನೀವು ಸರ್ಕಾರವನ್ನು ಎಚ್ಚರಿಸುತ್ತಿಲ್ಲ?ಎಂದು ಅಕ್ಟೋಬರ್ 17ರಂದು ಮಹಿಳಾ ಪತ್ರಕರ್ತೆಯೊಬ್ಬರು ಕೇಳಿದ್ದರು. ಅದಕ್ಕೆ 'ನಿನ್ನನ್ನು ಯಾವನೋ ಎಳೆದ್ಕೊಂಡು ಹೋಗಿ ರೇಪ್ ಮಾಡಿದ್ರೆ ನಾ ಏನ್ ಮಾಡೋಕಾಗುತ್ತೆ, ನಾನು ಎಲ್ಲೋ ಇರ್ತಿನಿ' ಎಂದು ಅವರ ಪ್ರಶ್ನೆಗೆ ಉತ್ತರಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಅಸಂಬದ್ದ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದರು.












Click it and Unblock the Notifications