KR Pura-Whitefild Metro Line: ಪ್ರಧಾನಿ ಉದ್ಘಾಟನೆ-ಪ್ರಯಾಣಿಕರ ಬಳಕೆಗೂ ಮುನ್ನ ರಾಜಕೀಯಕ್ಕೆ ಬಳಕೆ, ತಿಳಿಯಿರಿ
ವೈಟ್‌ಫಿಲ್ಡ್‌ನಿಂದ ಕೆ.ಆರ್.ಪುರ ವರೆಗಿನ ಮೆಟ್ಟೋ ಮಾರ್ಗ ಲೋಕಾರ್ಪಣೆಗೂ ಮುನ್ನ ಭಾರಿ ಸುದ್ದಿ ಮಾಡುತ್ತಿದೆ. ಸಾರ್ವಜನಿಕರ ಪ್ರಯಾಣಕ್ಕೆ ಬಳಕೆಯಾಗಬೇಕಾದ ಸಾರಿಗೆ ರಾಜಕೀಯಕ್ಕೆ ಬಳಕೆ ಆಗುತ್ತಿದೆ. ಮಾರ್ಗ ಅಪೂರ್ಣ ಎಂದು ಕಾಂಗ್ರೆಸ್ ಹೇಳುತ್ತಿದೆ.
ಬೆಂಗಳೂರು, ಮಾರ್ಚ್ 23: ಜನರಿಗೆ ವೇಗದ ಮತ್ತು ಸುರಕ್ಷಿತ ಸಂಚಾರ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ವೈಟ್‌ಫಿಲ್ಡ್‌ನಿಂದ ಕೆ.ಆರ್.ಪುರ ವರೆಗೆ ನೂತನ ಮೆಟ್ರೋ ಮಾರ್ಗ ನಿರ್ಮಿಸಿದೆ. ಇದು ಇದೀಗ ಸಾರ್ವಜನಿಕರ ಪ್ರಯಾಣಕಕ್ಕೆ ಬಳಕೆಯಾಗುವ ಮುನ್ನವೇ ರಾಜಕೀಯ ಲಾಭಕ್ಕೆ ಬಳಕೆ ಆಗುತ್ತಿದೆ.
ಕರ್ನಾಟಕ ಕಾಂಗ್ರೆಸ್ ನಮ್ಮ ಮೆಟ್ರೋ ಮಾರ್ಗ ವಿಚಾರವಾಗೇ ಬಿಜೆಪಿ ನಿರ್ಧಾರಗಳ ವಿರುದ್ಧ ಹರಿಹಾಯ್ದಿದೆ. ಬಿಜೆಪಿ ಸರ್ಕಾರವು ಚುನಾವಣಾ ಲಾಭಕ್ಕಾಗಿ ಈ ನೂತನ ಮೆಟ್ರೋ ಮಾರ್ಗ ಉದ್ಘಾಟನೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೇ ಈ ವೈಟಫಿಲ್ಡ್‌ನಿಂದ ಕೆ.ಆರ್ ಪುರ ವರೆಗಿನ ಮಾರ್ಗವನ್ನು 'ಅಸಂಪರ್ಕಿತ, ಸೇರದ ಮತ್ತು ಮುಂದುವರೆಯದ ಮಾರ್ಗ ಅಂತಲೂ ಕರೆದಿದೆ.

ಇದೇ ಮಾರ್ಚ್ 25 ರಂದು ಬೆಂಗಳೂರಿಗರಿಗೆ ಬಹುನಿರೀಕ್ಷಿತ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮೂಲಕ ಇದನ್ನು ಮುಂಬರಲಿರುವ ಚುನಾವಣೆ ಹಿನ್ನೆಲೆ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಎಐಸಿಸಿ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜವಾಲ್ ಆರೋಪಿಸಿದ್ದಾರೆ.
ಐಟಿ ಹಬ್ ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ಕಡಿಮೆಗೆ ಇಲ್ಲಿ ಮೆಟ್ರೋ ಮಾರ್ಗ ಆರಂಭಿಸಬೇಕು ಎಂಬುದನ್ನು ಒಪ್ಪಬಹುದು. ಆದರೆ, ತರಾತುರಿಯಲ್ಲಿ ಮೆಟ್ರೋ ಮಾರ್ಗ ಉದ್ಘಾಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜನರ ಸುರಕ್ಷತೆಗೆ ಅಪಾಯ ಎದುರಾಗುವ ಸಂಭವವಿದೆ ಎಂದರು.
ಇದಷ್ಟೇ ಅಲ್ಲ ಚುನಾವಣೆ ಹಿನ್ನೆಲೆಯ್ಲಲಿ ದೇಶದ ಪ್ರಮುಖ ಮೂಲ ಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವ ಮೊದಲೇ ತೆರೆಯಲು ಮೋದಿ ಆತುರದಲ್ಲಿದ್ದಾರೆ. ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂನಿಂದ ವೈಟ್‌ಫೀಲ್ಡ್ ನಡುವಿನ ಮೆಟ್ರೋ ಮಾರ್ಗ ಶನಿವಾರ ಉದ್ಘಾಟನೆಗೊಳ್ಳಲಿದೆ. ಬಲವಂತವಾಗಿ ಅಕಾಲಿಕವಾಗಿ ಕಾರ್ಯಾಚರಣೆಗೊಳಿಸುವುದರಿಂದ ಬೆಂಗಳೂರಿಗರಿಗೆ ಅನಗತ್ಯ ತೊಂದರೆ ಉಂಟಾಗುತ್ತದೆ.

ಬೆಂಗಳೂರಿಗೆ 8,000 ಬಸ್‌ಗಳ ಕೊರತೆ
ಬೆಂಗಳೂರು ಈಗಾಗಲೇ 8,000 ಬಸ್‌ಗಳ ಕೊರತೆ ಎದುರಿಸುತ್ತಿದೆ. ಇನ್ನೂ ಮೆಟ್ರೊ ನಿಲ್ದಾಣಗಳನ್ನು ಸಂಪರ್ಕಿಸುವ ಮಾರ್ಗಗಳಿಗೆ ತನ್ನ ಸಾಮಾನ್ಯ ಮಾರ್ಗಗಳಿಂದ ಬಸ್‌ಗಳನ್ನು ನಿಯೋಜಿಸಲು BMTC ಗೆ ಮೇಲೆ ಒತ್ತಡ ಬೀಳಲಿದೆ. ಈ ಉದ್ಘಾಟನೆ ಕಾರ್ಯಕ್ರಮದಿಂದ ವಿವಿಧೆಡೆ ನಡೆಯುತ್ತಿರುವ 57 ಕಾಮಗಾರಿಗಳನ್ನು ಪೂರ್ಣಗೊಳಿಸುವ ಮತ್ತು ಕಾರ್ಯಾರಂಭ ಮಾಡುವ ವಿವಿಧ ಹಂತದ ಯೋಜನೆನ್ನು ಕಡೆಗಣಿಸುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.
ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕುರಿತು ಸರ್ಕಾರದ ಸಲಹೆಗಾರ ಪ್ರೊ. ಎಂ.ಎನ್ ಶ್ರೀಹರಿ ಅವರು, ಸಿದ್ಧವಾಗಿರುವ ಮಾರ್ಗವನ್ನು ಆಯಾ ಭಾಗದಲ್ಲಿ ತೆರೆಯಬಹುದು. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಬಸ್ ವ್ಯವಸ್ಥೆಯೊಂದಿಗೆ ಮೆಟ್ರೋವನ್ನು ಪ್ರಾರಂಭಿಸಲು ಪೂರ್ವ ಯೋಜಿಸಲಾಗಿತ್ತು. ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಈ ವಿಷಯ ಬಳಸಿಕೊಳ್ಳುತ್ತಿದೆ. ಅಲ್ಲದೆ ಇದರಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ವಿಚಾರವನ್ನು ಅವರ ತಳ್ಳಿಹಾಕಿದರು.
ಐಟಿ ಕೇಂದ್ರದತ್ತ 12 ವರ್ಷಗಳ ನಂತರ ವಿಸ್ತರಣೆ
ಐಟಿ ಕೇಂದ್ರವಾಗಿರುವ ಬೆಂಗಳೂರಲ್ಲಿ ಎಲ್ಲ ವಿಧದ ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿ, ಹೊರವರ್ತುಲ ರಸ್ತೆ ಸೇರಿದಂತೆ ವೈಟ್‌ಫಿಲ್ಡ್ ಭಾಗದಲ್ಲಿ ಹೆಚ್ಚು ಐಟಿ-ಬಿಟಿ ಕಂಪನಿಗಳಿವೆ. ನಿತ್ಯ ಇಲ್ಲಿಗೆ ಲಕ್ಷಾಂತರ ಮಂದಿ ಸಂಚರಿಸುತ್ತಾರೆ. ಇಂತಹ ಸ್ಥಳಕ್ಕೆ ಮೆಟ್ರೋ ಅನ್ನು ಸುಮಾರು 12 ವರ್ಷಗಳ ನಂತರ ವಿಸ್ತರಣೆ ಆಗುತ್ತಿದೆ.
ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರಂ ಮೆಟ್ರೊ ನಿಲ್ದಾಣಗಳವರೆಗಿನ ಮೆಟ್ರೊ ಮಾರ್ಗದ ಕಾಮಗಾರಿ ಪೂರ್ಣಗೊಂಡಿಲ್ಲ. ಮುಂದಿನ ಆರು ತಿಂಗಳವರೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಅದು ಪೂರ್ಣಗೊಳ್ಳುವವರೆಗೆ ಮೆಟ್ರೊ ಮಾರ್ಗದ ಸಂಚಾರ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರಿನ ನಾಗರಿಕರ ಅಜೆಂಡಾ ಸಂಘಟನೆ ಸಂಚಾಲಕ ಸಂದೀಪ್ ಅನಿರುಧನ್, ವೈಟ್ ಫೀಲ್ಡ್ ಸ್ಟೇಷನ್ ಪೂರ್ಣಗೊಂಡಿದ್ದು, ಉಳಿದೆಲ್ಲ ನಿಲ್ದಾಣಗಳು ಅಪೂರ್ಣ ಇಲ್ಲವೇ ನಿರ್ಮಾಣ ಹಂತದಲ್ಲಿದೆ. ಪೂರ್ತಿ ಬಣ್ಣ ಬಳಿದಿಲ್ಲ. ಅದೆಲ್ಲವೂ ಪೂರ್ಣಗೊಂಡ ನಂತರವೇ ಎಲ್ಲ ಸಿದ್ಧತೆಗಳ ಸಹಿತ ಉದ್ಘಾಟಿಸಬಹುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications