ಕೆ.ಆರ್ ಪುರಂ ನಮ್ಮ ಮೆಟ್ರೋ ಕಾಮಗಾರಿ ಯಾವಾಗ ಶುರು?

ಬೆಂಗಳೂರು, ಜುಲೈ 14: ಕೊರೊನಾ ಲಾಕ್‌ಡೌನ್‌ನಿಂದಾಗಿ ನಗರದಲ್ಲಿ ನಮ್ಮ ಮೆಟ್ರೋ ಸೇರಿ ಹಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿವೆ.

ಕೆಆರ್‌ ಪುರಂನಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್ ಸಂಪರ್ಕಿಸುವ 2ಎ ಲೇನ್‌ನ ಮೆಟ್ರೋ ಸಿವಿಲ್ ಕಾಮಗಾರಿಗಳು ಅಕ್ಟೋಬರ್ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ.

ಈಗಾಗಲೇ ಮೆಟ್ರೋ ಸಾಗುವ ಹಾದಿಗಳಲ್ಲಿ ಅಗತ್ಯಪೂರ್ವ ಪ್ರಾಥಮಿಕ ಕೆಲಸಗಳು ಆರಂಭಗೊಂಡಿವೆ. ಕಾಮಗಾರಿ ಮುಕ್ತಾಯಗೊಳ್ಳುವ ನಾಲ್ಕು ವರ್ಷಗಳ ಗಡುವನ್ನು ನಿಗದಿಪಡಿಸಲಾಗಿದೆ.

ಬೆಳಿಗ್ಗೆ 7 ರಿಂದ ರಾತ್ರಿ 9 ರ ವರೆಗೆ 'ನಮ್ಮ ಮೆಟ್ರೋ' ಸೇವೆ ಒದಗಿಸಲಾಗುತ್ತಿದೆ. ಆದರೆ ಮೆಟ್ರೋ ಒಳಗೆ ಹಾಗೂ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘನೆ ತಡೆಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮೆಟ್ರೋ ಒಳಗೆ ಮತ್ತು ನಿಲ್ದಾಣಗಳಲ್ಲಿ ಪಾಲಿಸಬೇಕಾಗುತ್ತದೆ.

ವಿಶೇಷ ತಂಡವು ಕಳೆದ ಒಂದು ವಾರದಲ್ಲಿ 1,77,250 ರೂ. ದಂಡವನ್ನು ಸಂಗ್ರಹಿಸಿದ್ದು, ದಿನಕ್ಕೆ ಸರಾಸರಿ 25 ಸಾವಿರದಷ್ಟು ಸಂಗ್ರಹಣೆ ಮಾಡುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆ ಮೊದಲಿಗೆ ಶೇ.50 ಸಾಮರ್ಥ್ಯದೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಜುಲೈ 5 ರಿಂದ ನಂತರ ಸಂಪೂರ್ಣ ಸಾಮರ್ಥ್ಯದೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ದಂಡ ಸಂಗ್ರಹಿಸುವ ವಿಶೇಷ ತಂಡವು ಮೊದಲ ವಾರದಲ್ಲೇ 1.77 ಲಕ್ಷ ದಂಡವನ್ನು ನಿಯಮ ಉಲ್ಲಂಘಿಸಿದ ಪ್ರಯಾಣಿಕರಿಂದ ವಸೂಲಿ ಮಾಡಿದೆ.

 ಎರಡು ಭಾಗಗಳಾಗಿ ವಿಂಗಡಣೆ

ಎರಡು ಭಾಗಗಳಾಗಿ ವಿಂಗಡಣೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕ ಮಾಡುವ ಒಟ್ಟು 58 ಕಿ.ಮೀ ಮೆಟ್ರೋ ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವಾಗಿರುವ 2ಎ ನಲ್ಲಿ ಕೆಆರ್ ಪುರಂ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಧ್ಯ ಹೊರ ವರ್ತುಲ ರಸ್ತೆಯವರೆಗೆ 18.236 ಕಿ.ಮೀ ಮೆಟ್ರೋ ಹಳಿ ಇರಲಿದೆ.

 ಮಣ್ಣಿನ ಪರೀಕ್ಷೆ

ಮಣ್ಣಿನ ಪರೀಕ್ಷೆ

ಸಿವಿಲ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಈಗಾಗಲೇ ಮಣ್ಣಿನ ಪರೀಕ್ಷೆಯನ್ನು ನಡೆಸಲಾಗಿದೆ. ಸಧ್ಯ ಟ್ರಾಫಿಕ್ ನಿರ್ವಹಣೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 ಯಾವ್ಯಾವ ನಿಲ್ದಾಣಗಳು ಇರಲಿವೆ

ಯಾವ್ಯಾವ ನಿಲ್ದಾಣಗಳು ಇರಲಿವೆ

ಮೆಟ್ರೋ ಕಾಮಗಾರಿಗೆ 5,227 ಕೋಟಿ ರೂ. ವೆಚ್ಚ ತಗುಲಲಿದೆ. ಅಫ್ಕೋನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಾಮಗಾರಿ ನಡೆಸಲಿದೆ. ಕೆಆರ್ ಪುರಂ, ಮಹದೇವಪುರ, ಡಿಆರ್‌ಡಿಒ, ಕ್ರೀಡಾ ಸಂಕೀರ್ಣ, ದೊಡ್ಡನೆಕ್ಕುಂದಿ, ಇಸ್ರೋ, ಮಾರತ್‌ಹಳ್ಳಿ, ಕಾಡು ಬೀಸನಹಳ್ಳಿ-ಬೆಳ್ಳಂದೂರು, ಇಬ್ಬಲೂರು, ಆಗರ ಕೆರೆ, ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್‌ಬೋರ್ಡ್ ನಿಲ್ದಾಣಗಳು ಇರಲಿವೆ.

Recommended Video

    ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದ KL Rahul | Oneindia Kannada
     ಸಂಚಾರ ದಟ್ಟಣೆ ಹೆಚ್ಚು

    ಸಂಚಾರ ದಟ್ಟಣೆ ಹೆಚ್ಚು

    ನಮ್ಮ ಮೆಟ್ರೋದ ಸಿವಿಲ್ ಕಾಮಗಾರಿ ಆರಂಭವಾಗುತ್ತಿದ್ದಂತೆ ರಸ್ತೆಯ ಮಧ್ಯ ಭಾಗದಲ್ಲಿನ 9 ಮೀಟರ್ ಜಾಗವನ್ನು ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ. ಸಧ್ಯ ರಸ್ತೆಯ ಇಕ್ಕೆಲಗಳಲ್ಲಿ ಒಟ್ಟು 5.6 ಮೀಟರ್ ಜಾಗ ಬಸ್‌ ಲೇನ್‌ಗೆ ಬಳಕೆ ಆಗುತ್ತಿದೆ. ಉಳಿದಂತೆ ಕೇವಲ 3.14 ಮೀಟರ್ ಮಾತ್ರ ವಾಹನಗಳ ಓಡಾಟಕ್ಕೆ ಲಭ್ಯವಾಗಲಿದೆ.

    ಈಗಾಗಲೇ ವಾಹನ ದಟ್ಟಣೆ ಹೊಂದಿರುವ ಒಆರ್‌ಆರ್‌ನಲ್ಲಿ ಮೆಟ್ರೋ ಕಾಮಗಾರಿಯಿಂದ ಟ್ರಾಫಿಕ್ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆದ್ದರಿಂದ ಟ್ರಾಫಿಕ್ ಸಲೀಸಾಗಿ ಸಾಗಲು ಅನುಕೂಲವಾಗುವ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ಬಸ್‌ ಲೇನ್‌ಅನ್ನು ರದ್ದುಪಡಿಸುವುದು, ಬಸ್‌ ಸ್ಟ್ಯಾಂಡ್ ಗಳನ್ನು ತೆರವುಗೊಳಿಸುವ ಬಗ್ಗೆ ಚರ್ಚೆಗಳು ನಡೆದಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+