KPSC ನೇಮಕಾತಿ ಅಕ್ರಮ ತನಿಖೆ ಚುರುಕು: IAS ಜ್ಞಾನೇಂದ್ರ ಕುಮಾರ್ ಮನೆ ಮೇಲೆ ED ದಾಳಿ, ನಕಲಿ ಕೀ ಬಳಸಿ ಮನೆ ಪ್ರವೇಶ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ಪಶು ವೈದ್ಯಾಧಿಕಾರಿ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಅಕ್ರಮ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ಎಕ್ಸಾಂ ಕಂಟ್ರೋಲರ್ ಆಗಿರುವ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಕೆಪಿಎಸ್ ಸಿ ಮೇಲಿನ ದಾಳಿ ಇದಾಗಿದೆ. ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಭಾರಿ ಅವ್ಯಹವಾರ ನಡೆದ ಆರೋಪ ಕೇಳಿ ಬಂದಿದೆ. ಹೀಗಾಗಿ ಕಳೆದ ವಾರ ಆಯೋಗದ ಅಧ್ಯಕ್ಷ ಶಿವಂಕರಪ್ಪ ಸಾಹುಕಾರ್ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ ಕಚೇರಿ ಇನ್ನಿತರ ಎಂಟು ಸ್ಥಳಗಳ ಮೇಲೆ ಏಕ ಕಾಲಕ್ಕೆ ಇಡಿ ದಾಳಿ ನಡೆದಿತ್ತು. ಇಂದಿಗೂ ಇಡಿ ಅಧಿಕಾರಿಗಳು ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದೀಗ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಮೇಲೆ ದಾಳಿ ನಡೆಯುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ, ನಕಲಿ ಕೀ ಬಳಕೆ
ಜ್ಞಾನೇಂದ್ರ ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಮನೆ ಬೀಗ ಹಾಕಲಾಗಿತ್ತು. ಹೀಗಾಗಿ ಕೀ ಮೇಕರ್ ಕರೆಸಿ ನಕಲಿ ಕೀ ಮೂಲಕ ಮನೆಯನ್ನು ಅಧಿಕಾರಿಗಳು ಪ್ರವೇಶಿಸಿದ್ದಾರೆ. ಕಾನೂನಿನ ಪ್ರಕಾರ ಈ ದಾಳಿ ನಡೆಸಲು ಇಡಿ ಸಿಆರ್ ಪಿ ಎಫ್ ಹಾಗೂ ಇತರ ಅಧಿಕಾರಿಗಳು ಎಲ್ಲ ಅಗತ್ಯ ತಪಾಸಣೆಗೆ ಒಳಗಾಗಿದ್ದರು.
ಕೆಲವು ಗಂಟೆ ಬಳಿಕ ಮನೆ ಪ್ರವೇಶ, ವಿಡಿಯೋ ರೆಕಾರ್ಡ್
ದಾಳಿಗೂ ಮುನ್ನ ಮನೆ ಇದ್ದ ಪರಿಸ್ಥಿತಿ, ಮನೆ ಲಾಕ್, ಬಳಿಕ ನಕಲಿ ಕೀ ಬಳಸಿ ಕೆಲವು ಗಂಟೆಗಳ ಪ್ರಯತ್ನದ ಬಳಿಕ ಮನೆ ಒಳಪ್ರವೇಶಿಸಿರುವುದೆಲ್ಲವನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಐಎಎಸ್ ಅಧಿಕಾರಿ ಮನೆಯಲ್ಲಿ ಅಕ್ರಮ, ಹಣ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಡಕಾಡಿದ್ದಾರೆ.
ಹತ್ತು ವರ್ಷಗಳ ಹಿಂದಿನ (2016) ಬ್ಯಾಚ್ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಆಯೋಗದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಎಕ್ಸಾ ಕಂಟ್ರೋಲರ್ ಆಗಿದ್ದರಿಂದ ಕೆಎಸ್ ಮತ್ತು ಪಶು ವೈದ್ಯಾಧಿಕಾರಿ ಪರೀಕ್ಷೆಯ ಮೇಲ್ವಿಚಾರಣೆ ಮಾಡುತ್ತಿದ್ದರು. ಹೀಗಾಗಿ ಶಿವಶಂಕರಪ್ಪನವರ ಬಳಿಕ ಇಡಿ ಅಧಿಕಾರಿಗಳ ಕಣ್ಣು ಈ ಜ್ಞಾನೇಂದ್ರ ಕುಮಾರ್ ಅವರ ಮೇಲೆ ಬಿದ್ದಿದೆ.
ಇಡಿ ದಾಳಿ ಊಹಿಸಿ ನಾಪತ್ತೆ ಶಂಕೆ?
ಮನೆ ಬೀಗ ಹಾಕಿದ್ದು, ಜ್ಞಾನೇಂದ್ರ ಕುಮಾರ್ ಅವರ ಸುಳಿವು ಇಡಿಗೆ ಸಿಕ್ಕಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ಏರ್‍ಪೋರ್ಟ್ ನಲ್ಲಿ ಅವರು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ, ಎಲ್ಲಿಗೆ ಹೋದವರು ಎಂಬ ಮಾಹಿತಿ ಇಡಿಗೆ ಇನ್ನೂವರೆಗೂ ಸಿಕ್ಕಿಲ್ಲ. ಐಎಎಸ್ ಅಧಿಕಾರಿಯ ತಂದೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಹೀಗಾಗಿ ಅವರು ನೋಡಲು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಮಾಧ್ಯಮದವರ ಮುಂದೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅದರ ನಂತರ ಅಧಿಕಾರಿ ಮನೆ ಮೇಲೆ ರೇಡ್ ಆಗಿದೆ ಎನ್ನಲಾಗಿದೆ. ಶಿವಶಂಕರಪ್ಪ ಅವರ ಮೇಲೆ ದಾಳಿ ನಡೆದ ಬಲಿಕ ತಮ್ಮ ಮೇಲೂ ದಾಳಿ ನಡೆಯಬಹುದೆಂದು ಊಹಿಸಿ ಜ್ಞಾನೇಂದ್ರ ಕುಮಾರ್ ಅವರು ಮನೆ ಬಿಟ್ಟರಾ? ಎಂಬ ಅನುಮಾನಗಳು ಎದ್ದಿವೆ.


Click it and Unblock the Notifications
