KPSC ಅಕ್ರಮ ಸಿಬಿಐಗೆ ವಹಿಸಲು ಆಗ್ರಹಿಸಿ ABVP ಪ್ರತಿಭಟನೆ: ವಿದ್ಯಾರ್ಥಿನಿಯರನ್ನು ಎಳೆದೊಯ್ದ ಪೊಲೀಸರ ನಡೆಗೆ ಆಕ್ರೋಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿಯಲ್ಲಿ ನಡೆಯುತ್ತಿರುವ ನಿರಂತರ ಅಕ್ರಮ ವಿರುದ್ಧ ಇಂದು ಮಂಗಳವಾರ ಬೆಂಗಳೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪೊಲೀಸರು ಕುರಿಗಳನ್ನು ಎಳೆದಾಡಿದಂತೆ ಮಹಿಳಾ ಪ್ರತಿಭಟನಾಕಾರರನ್ನು, ವಿದ್ಯಾರ್ಥಿನಿಯರನ್ನು ಎಳೆದಾಡಿದ್ದು ಕಂಡು ಬಂತು. ಇದನ್ನು ಪ್ರಶ್ನಿಸಿದ ಮಾಧ್ಯಮದವರ ಮೇಲೂ ಸ್ವತಃ ಉನ್ನತ ಸ್ಥಾನದಲ್ಲಿ ಪೊಲೀಸ್ ಅಧಿಕಾರಿಗಳು ದರ್ಪ ಮೆರೆದ ಘಟನೆ ನಡೆಯಿತು.

ಆಯೋಗದ ದುರಾಡಳಿತ, ಪದೇ ಪದೇ ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರೆಲ್ಲ ನಗರದ ರೇಸ್‌ ಕೋರ್ಸ್‌ ರಸ್ತೆ ಕಡೆಗಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಪಿಎಸ್ ಸಿ ಅಕ್ರಮ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿದರು.

KPSC Recruitment

ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಪ್ರತಿಭಟಿಸಲು ಅವಕಾಶ ನೀಡದೇ ಅವರನ್ನು ಬೆನ್ನಟ್ಟಿ ಪೊಲೀಸರು ಹಿಡಿಯಲು ಆರಂಭಿಸಿದರು. ಪ್ರತಿಭಟನೆ ಮಾಡಿಯೇ ತೀರುತ್ತೇವೆ ಎಂದಿದ್ದ ಅವರ ಹಕ್ಕು ಕಸಿಯುವ ಕಾರ್ಯ ಪೊಲೀಸರು ಮಾಡಿದಂತಿತ್ತು.

ಈ ವೇಳೆ ಹತ್ತಾರು ಪ್ರತಿಭಟನಾನಿರತರು, ವಿದ್ಯಾರ್ಥಿನಿಯರು ತಮಗೆ ನ್ಯಾಯ ಕೊಡಿಸುವಂತೆ ರಾಜ್ಯ ಸರ್ಕಾರ ಹಾಗೂ ಆಯೋಗದ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಗೆ ಮತ್ತಷ್ಟು ವಿದ್ಯಾರ್ಥಿಗಳು ಬಂದು ಸೇರಿಕೊಳ್ಳುತ್ತಿದ್ದಂತೆ ಪೊಲೀಸರು ಅವರನ್ನು ತಡೆಯಲು ಮುಂದಾದರು.

ರಸ್ತೆಯಲ್ಲಿ ಬಿದ್ದರೂ ಬಿಡದೇ ಎಳೆದೊಯ್ದ ಪೊಲೀಸರು

ರಸ್ತೆ ಮಧ್ಯದಲ್ಲೇ ಕೂತು ಪ್ರತಿಭಟಿಸಲು ವಿದ್ಯಾರ್ಥಿನಿಯರು ಮುಂದಾದರೆ. ಆಗ ಪೊಲೀಸರು ವಿದ್ಯಾರ್ಥಿನಿಯರ ಕೈ, ಭುಜ ಹಿಡಿದು ಎಳೆದಾಡಿದ್ದಾರೆ. ರಸ್ತೆಯಲ್ಲೇ ಉರುಳಾಡಿದರೂ ಬಿಡದೇ ಕುರಿಗಳಂತೆ ಅವರನ್ನು ಎಳೆದು ವಾಹನಕ್ಕೆ ಹಾಕಿದ್ದಾರೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದರೂ ಎನ್ನಲಾಗಿದ್ದು, ಪುರುಷ ಸಿಬ್ಬಂದಿಯೇ ಮನಬಂದಂತೆ ಎಳೆದಾಡಿದ್ದಾರೆ. ದೈಹಿಕವಾಗಿ ವಿದ್ಯಾರ್ಥಿನಿಯರಿಗೆ ನೋವಾಗುತ್ತದೆ ಎಂಬ ಸಣ್ಣ ಅಳುಕು ಇಲ್ಲದೇ ಜಗ್ಗಾಡಿದ್ದಾರೆ. ಇದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಎಳೆದಾಡಿದ್ದನ್ನು ಪ್ರಶ್ನಿಸಿದ ಮಾಧ್ಯಮದವರ ಮೇಲೆ ಪೊಲೀಸ್ ದರ್ಪ

ಈ ವೇಳೆ ವಿದ್ಯಾರ್ಥಿನಿಯರನ್ನು ಎಳೆದಾಡಿದ್ದನ್ನು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಈ ರೀತಿ ಎಳೆದಾಡುವುದು ತಪ್ಪು. ನಿಯಮಗಳ ಪ್ರಕಾರ, ಮಹಿಳಾ ಸಿಬ್ಬಂದಿ ಅಷ್ಟೇ ಕರೆದೊಯ್ಯಬೇಕು ಎಂದಿದ್ದಕ್ಕೆ ಮಾಧ್ಯಮ ಸಿಬ್ಬಂದಿ ಮೇಲೆ ಪೊಲೀಸರು ದರ್ಪ ಮರೆದಿದ್ದಾರೆ. ಮೈಕ್ ಹಿಡಿದು ಈ ಬಗ್ಗೆ ವಿವರಿಸುವಂತೆ ಕೇಳಿದಾಗ ಮೈಕ್ ಹಿಡಿಯಬೇಡಿ ಎಂದು ಗದರಿಸಿದ್ದಾರೆ. ನಿಮಗೇಕೆ ಪ್ರತಿಕ್ರಿಯಿಸಬೇಕು. ಸರಿಯಾಗಿ ಮಾತನಾಡಿ ಎಂದು ಎಸಿಪಿ ಪರಮೇಶ್ವರನ್, ಡಿಸಿಪಿ ಯತಿಂದ್ರ ಅವರು ಕೂಡಾಗಿದ್ದಾರೆ.

ಕೆಪಿಎಸ್‌ ಪರೀಕ್ಷೆಗಳಲ್ಲಿ ನಿರಂತರವಾಗಿ ಅಕ್ರಮ ನಡೆಯುತ್ತಿವೆ. ಪಶ್ನೆ ಪತ್ರಿಕೆ ಸೋರಿಕೆ, ಅನ್ಯಾಯ ಒಂದೆಡೆಯಾದರೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ಅಧಿಕಾರಿಗಳೇ ಶಾಮೀಲಾಗಿ, ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಇಡಿ ದಾಳಿಯಿಂದ ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+