ಸಮಿತಿ ನೇಮಕದಲ್ಲಿ ಕಾಂಗ್ರೆಸ್ಸಿಗರಿಗೆ ಆದ್ಯತೆ ಕೊಡಿ: ಸಿಎಂಗೆ ದಿನೇಶ್ ಮನವಿ
ಬೆಂಗಳೂರು, ಅಕ್ಟೋಬರ್ 17: ವಿವಿಧ ಸಮಿತಿಗಳಿಗೆ ಸದಸ್ಯರ ನೇಮಕ ಸಂದರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರಿಗೆ ಹೆಚ್ಚಿನ ಅನುಕೂಲ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ದಿನೇಶ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ ಸಮಿತಿ ಸದಸ್ಯರ ನೇಮಕ ವೇಳೆ ಎಲ್ಲರನ್ನೂ ಪರಿಗಣಿಸಿ. ಜೆಡಿಎಸ್ ಸದಸ್ಯರ ಜೊತೆ ಕಾಂಗ್ರೆಸ್ ಸದಸ್ಯರನ್ನೂ ಪರಿಗಣಿಸಿ. ಹೊಸದಾಗಿ ನೇಮಕಮಾಡುವ ವೇಳೆ ಎಲ್ಲರನ್ನೂ ಗಮನಿಸಿ ಎಂದಿದ್ದಾರೆ.

ಅಕ್ರಮ- ಸಕ್ರಮ, ಭೂ ನ್ಯಾಯ ಮಂಡಳಿ, ಜಿಲ್ಲಾ ತಾಲೂಕು ಮಟ್ಟದ ಸಮಿತಿಗಳಿಗೆ ಅವಕಾಶ ನೀಡಿ. ಕಾಂಗ್ರೆಸ್-ಜೆಡಿಎಸ್ ನಡುವೆ 2:1 ರ ಅನುಪಾತದಂತೆ ನೇಮಕಮಾಡಿ. ತಮ್ಮ ಸಂಪುಟ ಸಹೋದ್ಯೋಗಿಗಳಿಗೂ ಇದನ್ನ ತಿಳಿಸಿ. ಇಲಾಖಾವಾರು ನೇಮಕ ವೇಳೆ ಇದನ್ನೇ ಪರಿಗಣಿಸಿ. ಆಗ ಎಲ್ಲರಿಗೂ ನ್ಯಾಯ ಸಿಕ್ಕಂತಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿಗೆ ಬರೆದ ಪತ್ರದಲ್ಲಿ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.












Click it and Unblock the Notifications