'ಡಿಸಿಎಂ ಹುದ್ದೆ ಕೇಳಿಲ್ಲ, ಹೈಕಮಾಂಡ್ ನಿರ್ಧಾರ ಅಂತಿಮ'
ಬೆಂಗಳೂರು, ಮೇ.22:ಸಂಪುಟ ವಿಸ್ತರಣೆ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಡಿಸಿಎಂ ಹುದ್ದೆಗಾಗಿ ಪರಮೇಶ್ವರ್ ಬಿಗಿ ಪಟ್ಟು ಹಾಕಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅಲ್ಲಗೆಳೆದಿದ್ದಾರೆ.
ಕಾಂಗ್ರೆಸ್ ಪಕ್ಷ ಆಚಂದ್ರಾರ್ಕವಾಗಿ ಉಳಿಯಲಿದೆ. ಕಾರ್ಯಕರ್ತರು ಚುನಾವಣೆ ಸೋಲಿಗೆ ಧೃತಿಗೆಡಬಾರದು. ಪಕ್ಷದ ಸಂಘಟನೆ ಮಾಡಬೇಕು. ರಾಜ್ಯ ಸರ್ಕಾರದ ಸಾಧನೆ ನಮ್ಮ ಕೈ ಹಿಡಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಎಂದು ಪರಮೇಶ್ವರ್ ಹೇಳಿದರು.

ಸದ್ಯಕ್ಕೆ ಕಾಂಗ್ರೆಸ್ ಜಯಿಸಿದ 9 ಸ್ಥಾನಗಳಲ್ಲಿ ಪರಿಶಿಷ್ಟ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡು ಕಡೆ ಪರಿಶಿಷ್ಟ ಜಾತಿ ಬಲಗೈ ಮತ್ತು ಪರಿಶಿಷ್ಟ ಜಾತಿ ಎಡಗೈ ಸಮುದಾಯದವರು ಆಯ್ಕೆಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ದಲಿತರು ಕಾಂಗ್ರೆಸ್ ಪರ ಇದ್ದಾರೆ ಎನ್ನುವುದು ವ್ಯಕ್ತವಾಗಿದೆ. ಹೀಗಾಗಿ ಡಿಸಿಎಂ ಹುದ್ದೆ ದಲಿತ ನಾಯಕ ಪರಮೇಶ್ವರ್ ಗೆ ಸಿಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಆದರೆ, ಈ ಹಿಂದೆ ಉಪಮುಖ್ಯಮಂತ್ರಿ ಆಧಿಕಾರ ನಡೆಸಿದ ಅನುಭವವಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಆಡಳಿತದಲ್ಲಿ ಡಿಸಿಎಂ ಹುದ್ದೆ ಅನಾವಶ್ಯಕ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಇದು ಅಭಿವೃದ್ಧಿಗೆ ಮಾರಕ ಎಂದಿದ್ದಾರೆ. ಹೀಗಾಗಿ 'ದೇವರು ಅಸ್ತು ಎಂದರೂ ಪೂಜಾರಿ ಕೊಡ' ಎಂಬ ಮಾತಿನಂತೆ ಹೈಕಮಾಂಡ್ ಓಕೆ ಎಂದರೂ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ, ಸಂಪುಟ ಪುನರ್ ರಚನೆ ಕಾರ್ಯವನ್ನು ಮತ್ತಷ್ಟು ವಿಳಂಬಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications