Breaking: ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಶಾಂತಿನಗರದಲ್ಲಿರುವ ಕೊಳದ ಮಠದ ಶಾಂತವೀರ ಸ್ವಾಮೀಜಿಯವರು (80) ಶನಿವಾರ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.

ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೊಳದ ಮಠದಲ್ಲಿ ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದಂತ ಶಾತವೀರ ಸ್ವಾಮೀಜಿಯವರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.

Kolada Maths Shanthaveera Swamiji Passed Away Due To Heart Attack

ಆದರೆ ಚಿಕಿತ್ಸೆ ಫಲಕಾರಿಯಾಗದೇ, ಇದೀಗ ಶಾಂತವೀರ ಸ್ವಾಮೀಜಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.

ಶಾಂತವೀರ ಸ್ವಾಮೀಜಿಯವರ ಅಣ್ಣನ ಮಗ ಹರ್ಷ ಈ ಬಗ್ಗೆ ಮಾತನಾಡಿ, ಶನಿವಾರ ಬೆಳಗ್ಗೆ ಬಂದು ಅವರ ಕೋಣೆಯಲ್ಲಿ ನೋಡಿದಾಗ ಅವರು ಎಚ್ಚರಿರಲಿಲ್ಲ. ಏನಾಗಿದೆ ಎಂಬುದು ತಿಳಿಯಲಿಲ್ಲ. ಅದಾದ ನಂತರ ಅವರು ಮೃತಪಟ್ಟಿರುವುದು ತಿಳಿಯಿತು ಎಂದು ಹೇಳಿದ್ದಾರೆ.

ಸ್ವಾಮೀಜಿಗಳ ಸಾವಿನಿಂದ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದು, ತಮ್ಮ ನೆಚ್ಚಿನ ಗುರುಗಳ ಅಂತಿಮ ದರ್ಶನ ಪಡೆದಿದ್ದಾರೆ.

ಶಾಂತವೇರಿ ಸ್ವಾಮಿಜಿಗಳ ಆಪ್ತ ಸಹಾಯಕ‌ ವೆಂಕಟಪ್ಪ ಅವರು ಮಾತನಾಡಿದ್ದು, ಕಳೆದ 43 ವರ್ಷಗಳಿಂದ ನಾನು ನನ್ನ ಕುಟುಂಬ ಸ್ವಾಮಿಜಿಗಳ ಜೊತೆಗೆ ಇದ್ದೇವೆ. ನಮಗೆ ಆಸರೆ ನೀಡಿರುವ ದೇವರು ಅವರು. ಈಗ ಸ್ವಾಮಿಜಿಗಳು ಇಲ್ಲದೆ ನಾವು ಬಡವಾಗಿದ್ದೇವೆ. ಸಾವಿರಾರು ಜನರಿಗೆ ಸ್ವಾಮಿಜಿ ಅನ್ನದಾತರಾಗಿದ್ದರು. ಪ್ರತಿನಿತ್ಯ ನಾನು ಅಡುಗೆ ಮಾಡಿ ಬಡಿಸುತ್ತಿದ್ದೆ, ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದೆ. ನಿನ್ನೆ ರಾತ್ರಿಯೂ ತುಂಬಾ ಚೆನ್ನಾಗಿ ಮಾತಾಡಿದ್ದರು. ಇಂದು ಬೆಳಗ್ಗೆ ಬಾಗಿಲು ತೆರೆಯದೆ ಇರುವುದರಿಂದ ಸಂಶಯ ಬಂತು. ವೈದ್ಯರು ಹೃದಯಾಘಾತ ಆಗಿರುವ ಬಗ್ಗೆ ದೃಢಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶನಿವಾರ ಸಂಜೆ ಅಂತ್ಯಕ್ರಿಯೆ:
ಸ್ವಾಮೀಜಿಗಳ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ 7 ಗಂಟೆಗೆ ಮಾಡಲಾಯಿತು. ಮಠದ ಆವರಣದಲ್ಲಿ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ ಆಗಲಿದೆ ಎಂದು ಸ್ವಾಮಿಜಿ ಅಣ್ಣನ ಮಗ ಹರ್ಷ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+