ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಯಾವಾಗ ಹಾಗೂ ಇದರಿಂದ ಕರ್ನಾಟಕ್ಕೆ ಏನು ಲಾಭ?
Bengaluru-Pune Expressway: ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಕೂಡ ಒಂದಾಗಿದೆ. ಈ ಹೆದ್ದಾರಿಯೂ ಎರಡು ರಾಜ್ಯಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸಲಿದೆ. ಹಾಗಾದರೆ ಇನ್ನೂ ಏನೆಲ್ಲ ಪ್ರಯೋನಗಳಿವೆ ಹಾಗೂ ಯಾವಾಗ ಉದ್ಘಟನೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪ್ರಮುಖ ಪಾತ್ರವಹಿಸಲಿದೆ. 700 ಕಿಲೋ ಮೀಟರ್ ಉದ್ದದ ಈ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 15ರಿಂದ 7 ಗಂಟೆವರೆಗೆ ಕಡಿತಗೊಳಿಸಲಿದೆ. ಈ ಮೂಲಕ ದೊಡ್ಡ ಕ್ರಾಂತಿಯನ್ನು ಸೃಷ್ಟಿಸಲಿದೆ.

ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿ ಒಟ್ಟು 9 ಜಿಲ್ಲೆಗಳ ಮೂಕ ಹಾದುಹೋಗಲಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿದಂತೆ 9 ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಸತಾರಾ ಮತ್ತು ಪುಣೆ ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಈ ಎಕ್ಸ್‌ಪ್ರೆಸ್ ವೇ ಸುಧಾರಿತ 8 ಪಥಗಳ ಹೆದ್ದಾರಿ ಆಗಿದ್ದು, ಗರಿಷ್ಠ ವೇಗದ ಮಿತಿ ಗಂಟೆಗೆ 120 ಕೀಲೋ ಮೀಟರ್ ಆಗಿದೆ. ಇದರ ನಿರ್ಮಾಣ ಕಾಮಗಾರಿಯ ಒಟ್ಟು ಯೋಜನಾ ವೆಚ್ಚ 50,000 ಕೋಟಿಗೂ ಹೆಚ್ಚು ಆಗಿದೆ. ಇದು ಉದ್ಘಾನೆಯಾದ್ರೆ, ಪುಣೆ ಮತ್ತು ಬೆಂಗಳೂರಿನ ಪ್ರಯಾಣದ ಸಮಯ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಲಿದೆ. ಪ್ರಸ್ತುತ ಇದೀಗ 15 ಗಂಟೆಯಿದ್ದು, ಇದು 7 ಗಂಟೆಗಳಿಗೆ ಇಳಿಕೆಯಾಗಲಿದೆ. ಇದರಿಂದ ಪ್ರಯಾಣಿಕರು ಮತ್ತು ವ್ಯವಹಾರಗಳಿಗೆ ತುಂಬಾ ಪ್ರಯೋಜನವನ್ನು ಆಗಲಿದೆ.
ಹೆದ್ದಾರಿ ಏನೆಲ್ಲಾ ವಿಶೇಷತೆಗಳನ್ನೊಂಡಿರಲಿದೆ?
* ಸುಗಮ ಸಂಚಾರಕ್ಕಾಗಿ ಫ್ಲೈಓವರ್‌ಗಳು ಮತ್ತು ಮೇಲ್ಸೇತುವೆಗಳು
* ಹಲವು ಪ್ರದೇಶಗಳಲ್ಲಿ ಸುಗಮ ಸಂಪರ್ಕಕ್ಕಾಗಿ ಬಹು ಇಂಟರ್‌ಚೇಂಜ್‌ಗಳ ನಿರ್ಮಾಣ.
* ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುವ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಎಲ್ಲಿಗೆ ಬಂತು ಹೆದ್ದಾರಿ ನಿರ್ಮಾಣ ಕಾಮಗಾರಿ?: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಡಿಪಿಆರ್ ಅನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಡಿಪಿಆರ್ ಪೂರ್ಣಗೊಂಡ ಬಳಿಕ, ಭೂಸ್ವಾಧೀನ ಮತ್ತು ಪೂರ್ವಸಿದ್ಧತಾ ಕೆಲಸಗಳು ಪ್ರಾರಂಭ ಆಗುತ್ತವೆ ಎಂದು ತಿಳಿದುಬಂದಿದೆ.
ಹೆದ್ದಾರಿಯಿಂದಾಗುವ ಉಪಯೋಗಗಳೇನು?
* ರಿಯಲ್ ಎಸ್ಟೇಟ್: ಈ ಹೆದ್ದಾರಿ ನಿರ್ಮಾಣ ಆದ್ರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲೂ ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ನಗರಾಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಕಾಗಿದೆ.
* ಆರ್ಥಿಕ ಬೆಳವಾಣಿಗೆ: ಈ ಎಕ್ಸ್‌ಪ್ರೆಸ್‌ವೇ ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಪ್ರಾದೇಶಿಕ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಸಹಾಯಕವಾಗಲಿದೆ.
* ಉದ್ಯೋಗ ಸೃಷ್ಟಿ: ಈ ಯೋಜನೆಯು ನಿರ್ಮಾಣ ಹಂತದಲ್ಲಿದ್ದು, ಇದು ಪೂರ್ಣಗೊಂಡರೆ ಸಂಬಂಧಿತ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ತೆರೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಈ ಹೆದ್ದಾರಿ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದ್ದು, 2028ರ ವೇಳೆಗೆ ವಾಹನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಜೊತೆಗೆ ಈ ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದಲ್ಲಿ ಸಂಪರ್ಕ ಮತ್ತು ಮೂಲಸೌಕರ್ಯವನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಪ್ರದೇಶದ ಒಟ್ಟಾರೆ ಆರ್ಥಿಕ ಮತ್ತು ನಗರ ಅಭಿವೃದ್ಧಿಗೆ ಗಣನೀಯವಾಗಿ ಉತ್ತಮ ಕೊಡುಗೆಗಳನ್ನು ನೀಡಲಿದೆ.












Click it and Unblock the Notifications