ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ
ಬೆಂಗಳೂರಿನ ಪದ್ಮನಾಭ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ನೂತನ ಮೇಲು ರಸ್ತೆನು ಲೋಕಾರ್ಪಣೆ ಮಾಡಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಕ್ಷಣ.
ಬೆಂಗಳೂರು, ಫೆಬ್ರವರಿ 15: ಪದ್ಮನಾಭ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ನೂತನ ಮೇಲು ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ಲೋಕಾರ್ಪಣೆ ಮಾಡಿದರು. ನಂತರ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಮಾಜಿ ಸಚಿವ ಆರ್ ಅಶೋಕ್ ಮುಂತಾದವರು ಹಾಜರಿದ್ದರು. ಈ ಮುಂಚೆ ಜನವರಿ 31, 2017ಕ್ಕೆ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದೆ ಎಂದು ಮೇಯರ್ ಜಿ ಪದ್ಮಾವತಿ ಘೋಷಿಸಿದ್ದರು.[ಇದು ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈ ಓವರ್ ಕಥೆ...ವ್ಯಥೆ ]

ಎಂ. ವೆಂಕಟರಾವ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಬಿಬಿಎಂಪಿ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಟೆಂಡರ್ ನಲ್ಲಿ ಹಾಕಿದ್ದ ಷರತ್ತಿನ ಅನ್ವಯ 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದರಿಂದ 2016ರ ಡಿಸೆಂಬರ್ ಬಂದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೊನೆಗೂ ಜನವರಿ ತಿಂಗಳೊಳಗೆ ಸಂಚಾರ ಮುಕ್ತಗೊಳಿಸಲು ಸಂಸ್ಥೆ ಸಿದ್ಧವಾಯಿತು.
ಫ್ಲೈ ಓವರ್ ಆರಂಭವಾದ ಮೇಲೆ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯ ವಾಹನ ಸಂಚಾರ ದಟ್ಟಣೆ ಶೇ 65ರಷ್ಟು ಕಡಿಮೆಯಾಗಲಿದೆ. ಈ ನಡುವೆ ಚರ್ಚ್ ಸ್ಟ್ರೀಟ್ ದುರಸ್ತಿ ಸೇರಿದಂತೆ ನಗರದ್ ಮೇಲ್ಸೇತುವೆ ರಸ್ತೆಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಮೇಯರ್ ಪದ್ಮಾವತಿ ಹೇಳಿದರು. (ಒನ್ ಇಂಡಿಯಾ ಸುದ್ದಿ)












Click it and Unblock the Notifications