ನಾನು ಕನ್ನಡತಿ ಎಂದ ಕಿರಣ್ ಮಜುಂದಾರ್ ಶಾ: 100% ಗುಜರಾತಿ ಎಂದಿದ್ದ ಪೋಸ್ಟ್ ವೈರಲ್ ಮಾಡಿದ ಕನ್ನಡಿಗರು!
Kiran Mazumdar Shaw: ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಮೂಲಸೌಕರ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮಾತನಾಡಿದ್ದರು. ಇದೀಗ ಅವರು ಗುಜರಾತಿನವರೇ ಅಥವಾ ಕರ್ನಾಟಕದವರೇ ಎನ್ನುವ ಚರ್ಚೆ ಶುರುವಾಗಿದೆ.
ಈ ರೀತಿ ಇರುವಾಗಲೇ ಕಿರಣ್ ಮಜುಂದಾರ್ ಶಾ ಅವರು, I am a proud ಮಣ್ಣಿನ ಮಗಳು do you understand? I was born in Bengaluru n am proud of my city ಎಂದಿದ್ದಾರೆ. ನಾನು ಹೆಮ್ಮೆಯ ಮಣ್ಣಿನ ಮಗಳು ನಿಮಗೆ ಅರ್ಥವಾಯಿತೇ? ನಾನು ಬೆಂಗಳೂರಿನಲ್ಲಿ ಹುಟ್ಟಿದ್ದೇನೆ ಮತ್ತು ನನ್ನ ನಗರದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಈ ಹಿಂದೆ ನಾನು ಗುಜರಾತಿನವಳು ಎಂದು ಹೇಳಿರುವ ಟ್ವೀಟ್ ಸಹ ಇದೇ ಸಂದರ್ಭದಲ್ಲಿ ವೈರಲ್ ಆಗಿದೆ. ನಾನು ಅರ್ಧ ಬ್ರಿಟಿಷ್ ಅಲ್ಲ, ನಾನು 100% ಗುಜರಾತಿ ಭಾರತೀಯ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಗುಜರಾತಿ ಭಾರತೀಯಳು ನೀವು ಸ್ಟುಪಿಡ್ ಎಂದು ಈ ಹಿಂದೆ ಕಿರಣ್ ಅವರು ಮಾಡಿರುವ ಟ್ವೀಟ್ ಅನ್ನು ಕನ್ನಡಿಗರು ಈಗ ನೆನಪಿಸಿದ್ದಾರೆ.
ಅರುಣ್ ಜಾವಗಲ್ ಅವರು, ಯಾರಾದರೂ ತಮ್ಮನ್ನು ತಾವು ಮಣ್ಣಿನ ಮಗಳು (ಈ ಮಣ್ಣಿನ ಮಗಳು) ಎಂದು ಕರೆದುಕೊಳ್ಳುತ್ತಾ, ಅದೇ ಮಣ್ಣಿನ ಮಕ್ಕಳ ನ್ಯಾಯಯುತ ಹಕ್ಕುಗಳನ್ನು ವಿರೋಧಿಸುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ನೀವು "ಮಣ್ಣಿನ ಮಗಳು" ಎಂದು ಹೇಳುತ್ತಾ ನೀವು ದ್ವಿಭಾಷಾ ನೀತಿಯನ್ನು ಏಕೆ ವಿರೋಧಿಸುತ್ತಿದ್ದೀರಿ ಮೇಡಂ? ತ್ರಿಭಾಷಾ ನೀತಿಯಿಂದ ಕನ್ನಡ ಮಕ್ಕಳ ಭವಿಷ್ಯ ನಾಶವಾಗುತ್ತಿದೆ. ದಯವಿಟ್ಟು ಕನ್ನಡ ಮಕ್ಕಳ ಹಿತದೃಷ್ಟಿಯಿಂದ ದ್ವಿಭಾಷಾ ನೀತಿಯನ್ನು ಬೆಂಬಲಿಸಿ ಎಂದು ಮತ್ತೊಬ್ಬ ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಮಣ್ಣಿನ ಮಗಳು,ಮಣ್ಣಿನ ಮಕ್ಕಳಿಗೆ ( ಕನ್ನಡಿಗರಿಗೆ) ಕೆಲಸಗಳಲ್ಲಿ ಮೀಸಲಾತಿ ವಿರುದ್ಧ ಧ್ವನಿ ಎತ್ತಿದ್ದರಂತೆ ಹೌದೇ ಅಲ್ವಾ ಎಂದು, ಅನೂಪ್ ಎನ್ನುವವರು ಬೆಂಗಳೂರಿನಲ್ಲಿ ಹುಟ್ಟಿದ ಮಾತ್ರಕ್ಕೆ ಮಣ್ಣಿನ ಮಗಳು ಆಗೋಕ್ಕೆ ಸಾಧ್ಯ ಇಲ್ಲ. ಕನ್ನಡದಲ್ಲಿ ನೀವು ಮಾತನಾಡಿರುವುದು ನಾನು ಇಂದಿನ ವರೆಗೂ ನೋಡೂ ಇಲ್ಲ ಕೇಳೂ ಇಲ್ಲ. ಕನ್ನಡ ಓದೋಕ್ಕೆ, ಬರಿಯೋಕ್ಕೆ ಮಾತನಾಡುವುದಕ್ಕೆ ನಿಮಗೆ ಬರೋಲ್ಲ ಅಂದು ಕೊಂಡಿದ್ದೀನಿ. ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡಿಗರ ಉದ್ಯೋಗಾವಕಾಶದ ಬಗ್ಗೆ ನಿಮ್ಮ ಹೇಳಿಕೆ ಖಂಡನೀಯ ಅಷ್ಟೇ ಎಂದಿದ್ದಾರೆ.
ಎರಡು ವರ್ಷಗಳ ಮುಂಚೆ ಗುಜರಾತಿ: ಇನ್ನು ಎರಡು ವರ್ಷಗಳ ಮುಂಚೆ ಕಿರಣ್ ಮಜುಂದಾರ್ ಶಾ ಅವರು ನಾನು ಶೇ.100% ಗುಜರಾತಿ ಎಂದು ಹೇಳಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿದ್ದ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಈ ಟ್ವೀಟ್ ಹಂಚಿಕೊಂಡಿರುವ ಕನ್ನಡಿಗರು, ಗುಜರಾತಿ ಏಕಾಏಕಿ ಕನ್ನಡತಿಯಾಗಿ ಬದಲಾಗೋಕೆ ಹೇಗೆ ಸಾಧ್ಯ ಎಂದೂ ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications