ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಿಮ್ಸ್‌ ನೌಕರರ ಮುಷ್ಕರ ಗುರುವಾರ ಹಿಂಪಡೆಯುವ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಜು.26: ಕಿಮ್ಸ್‌ ಆಡಳಿತ ಮಂಡಳಿಯಿಂದ ಭರವಸೆ ದೊರೆಯ ಪರಿಣಾಮ ಒಕ್ಕಲಿಗರ ಸಂಘದ ಅಧೀನ ನೌಕರರು ಪ್ರತಿಭಟನೆಯನ್ನು ಹಿಂಪಡೆಯುವ ಸಾಧ್ಯತೆ ಇದೆ.

ನೌಕರರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದ ಪರಿಣಾಮ ರೋಗಿಗಳು ಕಂಗಾಲಾಗಿದ್ದರು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಪರದಾಡುವಂತಾಗಿತ್ತು. ಕಿಮ್ಸ್‌ ವೈದ್ಯಕೀಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಬಿ.ವಿ. ರಮೇಶ್‌ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ 360 ಸಿಬ್ಬಂದಿಯನ್ನು ಉಳಿಸಿಕೊಂಡು ಉಳಿದವರನ್ನು ಕೈಬಿಡುವುದಾಗಿ ಭರವಸೆ ನೀಡಿದ್ದಾರೆ ಎಂದು ಒಕ್ಕಲಿಗರ ನೌಕರರ ಅಸೋಸಿಯೇಷನ್‌ ಅಧ್ಯಕ್ಷ ಡಾ. ವಿನೀದ್‌ ತಿಳಿಸಿದ್ದಾರೆ.

ಬೆಂಗಳೂರು: ಕಿಮ್ಸ್‌ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸ್ಥಗಿತಬೆಂಗಳೂರು: ಕಿಮ್ಸ್‌ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಸ್ಥಗಿತ

ಆದರೆ ನಮ್ಮ ಬೇಡಿಕೆ 280 ಸಿಬ್ಬಂದಿಯನ್ನು ಮಾತ್ರ ಉಳಿಸಿಕೊಳ್ಳಬೇಕು. ಈ ವಿಚಾರವಾಗಿ ಸಿಬ್ಬಂದಿ ಜತೆಗೆ ಗುರುವಾರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಿಮ್ಸ್‌ನ ವೈದ್ಯರು, ಸಿಬ್ಬಂದಿ ಬುಧವಾರ ಪ್ರತಿಭಟನೆ ತೀವ್ರಗೊಳಿಸಿದ್ದರ ಪರಿಣಾಮ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಪಡೆಯಲಾಗದೆ ತೊಂದರೆ ಅನುಭವಿಸುವಂತಾಯಿತು.

Kims employees strike may Call off today

ಬುಧವಾರ ಪ್ರತಿಭಟನಾ ಸ್ಥಳದಲ್ಲಿ ನಡೆಸುತ್ತಿದ್ದ ಓಪಿಡಿ ಸೇರಿದಂತೆ ಕಿಮ್ಸ್‌ ಆಸ್ಪತ್ರೆಯಲ್ಲಿ ಹೊರರೋಗಿಗಳ ಸೇವೆಯನ್ನು ಸಂಪೂರ್ಣ ಬಂದ್‌ಗೊಳಿಸಿದ್ದರಿಂದ ನಗರ ಸೇರಿದಂತೆ ವಿವಿಧೆಡೆಯಿಂದ ಚಿಕಿತ್ಸೆಗಾಘಿ ಬಂದ ರೋಗಿಗಳಿಗೆ ಅನನುಕೂಲವಾಯಿತು, ಹಾಗಾಗಿ ಈ ಮುಷ್ಕರವನ್ನು ಹಿಂಪಡೆಯುವಂತೆ ಆಡಳಿತ ಮಂಡಳಿ ಮನವಿ ಮಾಡುತ್ತಿದೆ.

English summary
There is a hope that kims employee may withdrawn their agitation today. Management proposes to hold talk with employees over additional appointment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X