• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೀಕಿ ಚಾಲೆಂಜ್ ವೈರಲ್ ವಿಡಿಯೋ ವಿರುದ್ಧ ಪೊಲೀಸ್ ವಾರ್ನಿಂಗ್!

By Mahesh
|

ಬೆಂಗಳೂರು, ಜುಲೈ 31: ವಿದೇಶಿಯಿಂದ ಆಮದಾಗಿ ಬಂದಿರುವ ಕೀಕಿ ಚಾಲೆಂಜ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕೆನಡಾದ ರ‍್ಯಾಪರ್ ಡ್ರೇಕ್ ರಚಿಸಿ ಹಾಡಿರುವ ಕೀಕಿ- ಇನ್ ಮೈ ಫೀಲಿಂಗ್ಸ್ ಹಾಡು ಈಗ ಸಕತ್ ಸೌಂಡ್ ಮಾಡುತ್ತಿದೆ. ಹಾಡು ಇಷ್ಟಪಟ್ಟು ಎಲ್ಲರೂ ಶೇರ್ ಮಾಡಿ, ಡ್ಯಾನ್ಸ್ ಮಾಡಿದ್ದರೆ ಪರ್ವಾಗಿಲ್ಲ.

ಆದರೆ, ಕೀಕಿ ಚಾಲೆಂಜ್ ಎಂಬ ಹ್ಯಾಶ್ ಟ್ಯಾಗ್ ನಿಂದ ಶುರುವಾಗಿರುವ ರಗಳೆ ಈಗ ಉತ್ತರಪ್ರದೇಶ, ದೆಹಲಿ, ಮುಂಬೈನಿಂದ ಕರ್ನಾಟಕಕ್ಕೂ ಕಾಲಿಟ್ಟಿದೆ. ಈಗಾಗಲೇ ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ಮೀರಿ ಕೀಕಿ ಚಾಲೆಂಜ್ ತೆಗೆದುಕೊಂಡರೆ, ನಿಮಗೆ ತಪ್ಪಿದ್ದಲ್ಲ ತೊಂದರೆ.

ಬೇಡ ಬೇಡ ಅಂದರೂ ತಾರೆಯರೇ ಡೇಂಜರಸ್ ಚಾಲೆಂಜ್ ಒಪ್ಪಿಕೊಳ್ತಾರಲ್ಲ.! ಇದು ಸರೀನಾ.?

ಅಮೆರಿಕದ ನಟ ಶಿಗ್ಗಿಅವರು ಕೀಕಿ ಹಾಡಿಗೆ ಡ್ಯಾನ್ಸ್ ಮಾಡಿ ಕೀಕಿ ಚಾಲೆಂಜ್ ಗೆ ಚಾಲನೆ ನೀಡಿದರು. ನೃತ್ಯಕ್ಕೆ ಕೀಕಿ- ಡು ಯು ಲವ್ ಮೀ ಎಂಬ ಅಡಿ ಬರಹ ಹಾಕಿ, ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದಾದ ಬಳಿಕ ಹಾಲಿವುಡ್, ಬಾಲಿವುಡ್ಡಿನ ಅನೇಕ ಸೆಲೆಬ್ರಿಟಿಗಳು ಈ ಕೀಕಿ ಚಾಲೆಂಜ್ ತೆಗೆದುಕೊಂಡಿದ್ದಾರೆ.

ಸೆಲೆಬ್ರಿಟಿಗಳ ಕುಣಿತ ಕಂಡು ಹುಚ್ಚೆದ್ದು, ಫ್ಯಾನ್ಸ್ ಗಳು ಕೂಡಾ ಚಲಿಸುವ ಕಾರಿನಿಂದ ಕೆಳಗಿಳಿದು ಹಾಡುತ್ತಾ, ಕುಣಿಯುತ್ತಾ ಚಾಲೆಂಜ್ ಸ್ವೀಕರಿಸುವುದರಿಂದ ಟ್ರಾಫಿಕ್ ಸಮಸ್ಯೆ, ಪ್ರಾಣಕ್ಕೆ ಅಪಾಯ ಉಂಟಾಗುವ ಆತಂಕವಿದೆ. ಈ ರೀತಿ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಚಾಲೆಂಜ್ ಸ್ವೀಕರಿಸದಿರುವಂತೆ ಪೊಲೀಸರು ಎಚ್ಚರಿಸಿದ್ದಾರೆ.

ಮುಂಬೈ ಪೊಲೀಸರು ನೀಡಿದ ಎಚ್ಚರಿಕೆ

ಇಂಥ ಚಾಲೆಂಜ್​ ಸ್ವೀಕರಿಸುವ ಮುನ್ನ ಸುರಕ್ಷತೆಯ ಕಡೆ ಗಮನ ಹರಿಸಿ, ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ ಎಂದು ಟ್ವಿಟ್ಟರ್ ಮೂಲಕ ಮುಂಬೈ ಪೊಲೀಸರು ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.

ಕೀಕೀ ಡು ಯು ಲವ್ ಮೀ

ಕೀಕೀ ಡು ಯು ಲವ್ ಮೀ ಎನ್ನುತ್ತಾ ಡ್ರೇಕ್ ತೆಗೆದುಕೊಂಡ ಚಾಲೆಂಜ್.

ಶೂಟಿಂಗ್ ವೇಳೆಯಲ್ಲಿ ನಟಿ ಅದಾ ಶರ್ಮ

ಶೂಟಿಂಗ್ ವೇಳೆಯಲ್ಲಿ ನಟಿ ಅದಾ ಶರ್ಮ ಅವರು ಡ್ಯಾನ್ಸರ್ ದಿರಿಸಿನಲ್ಲೇ ಹಾಡಿ ಕುಣಿದಾಡಿದ್ದು ವೈರಲ್ ಆಗಿದೆ.

ನೋರಾ ಫತೇಹಿ ಸಾಂಪ್ರದಾಯಿಕ ಶೈಲಿ ಚಾಲೆಂಜ್

ನೋರಾ ಫತೇಹಿ ಸಾಂಪ್ರದಾಯಿಕ ಶೈಲಿ ಚಾಲೆಂಜ್ ಸ್ವೀಕರಿಸಿದ್ದು ಹೀಗೆ....ಹಾಲಿವುಡ್ ನಟ ವಿಲ್​ ಸ್ಮಿತ್, ಬಾಲಿವುಡ್ ನಟಿ ಅದಾ ಶರ್ಮಾ, ನೂರಾ ಫತೇಹಿ ಸಹ ತಮ್ಮ ಕೀಕಿ ಚಾಲೆಂಜನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Rapper Drake's hit 'In My Feelings' has had youngsters across the world dubbed as #Kiki Challenge, the dance fad has seen hundreds of youngsters flooding social media with videos of them dancing on the street.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more