ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್ ಪೋರ್ಟ್ ಪ್ರಯಾಣಿಕರ ಸಂಖ್ಯೆ ಶೇ12.9ರಷ್ಟು ಹೆಚ್ಚಳ

|
Google Oneindia Kannada News

ಬೆಂಗಳೂರು, ಜನವರಿ 31: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2017 ನೇ ಸಾಲಿನಲ್ಲಿ ಶೇ.12.9 ರಷ್ಟು ಬೆಳವಣಿಗೆ ಸಾಧಿಸಿದ್ದು, ಒಟ್ಟು ಎರಡೂವರೆ ಕೋಟಿಗೂ ಅಧಿಕ ಪ್ರಯಾಣಿಕರು ವಿಮಾನ ನಿಲ್ದಾಣ ಬಳಕೆ ಮಾಡಿದ್ದಾರೆ.

ಒಟ್ಟಾರೆ ವಿಮಾನಗಳ ಹಾರಾಟದ ಪ್ರಮಾಣದಲ್ಲಿ ಶೇ.4.3 ರಷ್ಟು ಏರಿಕೆಯಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಒಟ್ಟು 62 ಸ್ಥಳಗಳಿಗೆ ಕೆಐಎ ನಿಂದ 43 ವಿಮಾನಯಾನ ಸಂಸ್ಥೆಗಳು ನೇರ ಸಂಪರ್ಕ ಕಲ್ಪಿಸುತ್ತಿವೆ. ಡಿ.23 ರಂದು ಒಂದೇ ದಿನ ಅತಿ ಹೆಚ್ಚು ಅಂದರೆ 87,815 ಪ್ರಯಾಣಿಕರು ಬಳಸಿದ್ದು, ಒಟ್ಟು 603 ವಿಮಾನಗಳು ಹಾರಾಟ ನಡೆಸುವ ಸಾಮರ್ಥ್ಯ ಕೆಐಎ ಹೊಂದಿದೆ.'

ದೇಶೀಯ ಮಾರ್ಗದ ಪ್ರಯಾಣಿಕರ ಸಂಖ್ಯೆ 25.04 ಮಿಲಿಯನ್ ಪ್ರಯಾಣಿಕರೊಂದಿಗೆ ಶೇ.14.5 ರಷ್ಟು ಬೆಳವಣಿಗೆ ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ 3.73 ಮಿಲಿಯನ್ ಪ್ರಯಾಣಿಕರೊಂದಿಗೆ ಶೇ.4.2ರಷ್ಟು ಪ್ರಗತಿ ಸಾಧಿಸಲಾಗಿದೆ ದಕ್ಷಿಣಭಾರತದ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಕೆಐಎ ಮುಂದುವರೆಸಿದೆ.

KIA served 25.04 million passengers in 2017

3,39,461 ಮೆಟ್ರಿಕ್ ಟನ್ ಸರಕು ಸಾಗಣೆ ಮೂಲಕ ಶೇ.8.1 ರಷ್ಟು ಪ್ರಗತಿ ಸಾಧಿಸಲಾಗಿದೆ. ಅಂತಾರಾಷ್ಟ್ರೀಯ ಕಾರ್ಗೋ ಪ್ರಮಾಣ ಕಳೆದ ವರ್ಷಕ್ಕಿಂತ ಶೇ10.4 ರಷ್ಟು ಹಾಗೂ ದೇಶೀಯ ಮಾರ್ಗದಲ್ಲಿ ಶೇ.4.2 ರಷ್ಟು ಹೆಚ್ಚಿದೆ. ವಿಮಾನ ನಿಲ್ದಾಣದಲ್ಲಿನ ಕಾರ್ಗೋ ವ್ಯವಹಾರವೂ ರಾಜ್ಯದ ಜಿಡಿಪಿಯ ಶೇ.10ರಷ್ಟು ಇದೆ. ಜಾಗತಿಕ ಸರಾಸರಿಯ 2 ರಿಂದ 3 ರಷ್ಟಿದೆ.

ಮಾವು ಹಾಗೂ ಗುಲಾಬಿ ಹೂಗಳ ರಫ್ತಿನಲ್ಲಿ ಕೆಐಎ ಮುಂಚೂಣಿಯಲ್ಲಿದೆ.
2021ರ ವೇಳೆ 2ನೇ ಟರ್ಮಿನಲ್ ಪೂರ್ಣ: ಎರಡನೇ ರನ್ ವೇ ಮತ್ತು ಎರಡನೇ ಟರ್ಮಿನಲ್ ವಿನ್ಯಾಸಕ್ಕೆ 2017ರಲ್ಲಿ ಒಪ್ಪಿಗೆ ದೊರೆತಿದೆ. 2018 ರ ಜುಲೈ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭದ ನಿರೀಕ್ಷೆ ಇದೆ. 2019 ರಲ್ಲಿ 2 ನೇ ರನ್ ವೇ ಕಾರ್ಯಾರಂಭ ಮತ್ತು 2021 ರಲ್ಲಿ2 ನೇ ಟಿರ್ಮಿನಲ್ ಕಾರ್ಯಾರಂಭದ ಗುರಿ ಹೊಂದಲಾಗಿದೆ.

English summary
Kempegowda International Airport served 25.04 million passengers in 2017 and recorded a growth of 12.09 percent. The International airport in the city continues to be the busiest in the South India and the third largest airport in the country. After New Delhi and Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X