ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಶಕದಲ್ಲಿ 15ಕೋಟಿ ಪ್ರಯಾಣಿಕರಿಗೆ ಸೇವೆ ನೀಡಿದ ಕೆಂಪೇಗೌಡ ಏರ್‌ಪೋರ್ಟ್

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿರುವ ವಿಮಾನಯಾನ ಪ್ರಯಾಣಿಕರ ಸಂಖ್ಯೆ 15 ಕೋಟಿಗೆ ಏರಿಕೆ ಕಂಡಿದೆ.

2008 ಮೇನಲ್ಲಿ ಆರಂಭವಾದ ನಗರದ ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇ.13ರಷ್ಟು ಹೆಚ್ಚಳ ಕಂಡಿದೆ. ಇದರಿಂದ 2018ರ ಮಾ.25ರ ವೇಳೆಗೆ 15ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಮೊದಲ 5ಕೋಟಿ ಪ್ರಯಾಣಿಕರ ಸಂಖ್ಯೆಯ ಸಾಧನೆ ಮಾಡಲು ವಿಮಾನ ನಿಲ್ದಾಣ 1,671ದಿನ ತೆಗೆದುಕೊಂಡಿತ್ತು.

ಕೆಐಎಎಲ್ ಗೆ 2ನೇ ಬಾರಿ ಸ್ವೀಡನ್‌ನ ಸ್ಕೈಟ್ರ್ಯಾಕ್ಸ್ ಅವಾರ್ಡ್ಕೆಐಎಎಲ್ ಗೆ 2ನೇ ಬಾರಿ ಸ್ವೀಡನ್‌ನ ಸ್ಕೈಟ್ರ್ಯಾಕ್ಸ್ ಅವಾರ್ಡ್

ಎರಡನೇ ಬಾರಿ 1,185ದಿನ ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.40 ಹೆಚ್ಚಳ ಮಾಡಿಕೊಂಡಿತು. ಮೂರನೇ ಬಾರಿ ಕೇವಲ 737ದಿನಗಳಲ್ಲಿ 5ಕೋಟಿ ಗುರಿ ಸಾಧಿಸುವ ಮೂಲಕ ಸಾಧನೆ ಮಾಡಿದೆ.ಸ್ಕೈಟ್ರಾಕ್ಸ್ ಸಂಸ್ಥೆಯು ನೀಡುವ ಭಾರತದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರತಿಷ್ಠಿತ ಪ್ರಶಸ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ತನ್ನದಾಗಿಸಿಕೊಂಡಿದೆ.

KIA served 15 crore passengers in a decade

2017ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಟ್ಟು 25.04 ದಶಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ಎಟಿಎಂಗಳ ಸಂಖ್ಯೆ 1,84,384ಕ್ಕೆ ತಲುಪಿದ್ದು, ಶೇ.4.3ರಷ್ಟು ಹೆಚ್ಚಳ ಸಾಧಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೇಸಿಗೆ ಪ್ರಯಾಣ ಸೇವೆಯನ್ನು ಮಾ.25ರಂದು ಆರಂಭಿಸಿದೆ. ಈ ಪ್ರಯಾಣ ಸೇವೆಗಳು 2018ರ ಅ.27ರವರೆಗೆ ಜಾರಿಯಲ್ಲಿರಲಿದೆ.

ಏರ್ ಪೋರ್ಟ್ ಪ್ರಯಾಣಿಕರ ಸಂಖ್ಯೆ ಶೇ12.9ರಷ್ಟು ಹೆಚ್ಚಳಏರ್ ಪೋರ್ಟ್ ಪ್ರಯಾಣಿಕರ ಸಂಖ್ಯೆ ಶೇ12.9ರಷ್ಟು ಹೆಚ್ಚಳ

English summary
Kempegowda International Airport has served around 15 crore users in a decade. The KIA was resumed service in May 2008 and by march 25, 2018 it has served 15 crore passengers with increasing of 13 percent every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X