ಕನ್ನಡ ಯುವತಿ ಮೇಲೆ ಕೇರಳ ಯುವತಿ ಹಲ್ಲೆ: ಎಫ್‌ಐಆರ್‌ ದಾಖಲು

ಬೆಂಗಳೂರು, ಜನವರಿ 13: ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಉಪಟಳ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಕನ್ನಡಿಗರ ಸೌಮ್ಯಗುಣವನ್ನು ದುರುಪಯೋಗಪಡಿಸಿಕೊಂಡು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಬರುವ ಅನ್ಯ ಭಾಷಿಗರಿಂದ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದೀಗ ಕನ್ನಡಿಗರ ಮೇಲೆ ಹಲ್ಲೆಗಳಂತ ಸುದ್ದಿಗಳು ಕೇಳಿಬರುತ್ತಿವೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಒಂದೇ ಲೇಡಿಸ್‌ ಪಿಜಿಯಲ್ಲಿ ರೂಮ್‌ಮೇಟ್‌ಗಳಾಗಿದ್ದ ಕನ್ನಡ ಹಾಗೂ ಕೇರಳ ಯುವತಿಯರ ಮಧ್ಯೆ ಜಗಳ ಉಂಟಾಗಿ ಕನ್ನಡ ಯುವತಿಯ ಮೇಲೆ ನನಗೆ ಕನ್ನಡ ಅರ್ಥವಾಗುವುದಿಲ್ಲ. ನೀನು ಕನ್ನಡದಲ್ಲಿ ನನ್ನ ಮುಂದೆ ಮಾತನಾಡಬೇಡ ಎಂದು ಕೇರಳದ ಯುವತಿಯೊಬ್ಬಳು ಕನ್ನಡದ ಯುವತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಟಿಎಂ ಲೇಔಟ್‌ನ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ವೈದ್ಯಯಾಗಿರುವ ಕನ್ನಡತಿ ಸೃಷ್ಟಿ ಬಿಟಿಎಂ ಲೇಔಟಿನ ಪಿಜಿಯೊಂದರಲ್ಲಿ ವಾಸವಿದ್ದರು. ಇದೇ ಪಿಜಿಯಲ್ಲಿ ಅವರಿಗೆ ರೂಮ್‌ಮೇಟ್‌ ಆಗಿದ್ದ ಕೇರಳ ಮೂಲದ ಅಸ್ಸೇಲಾ ಎಂಬ ಯುವತಿ ಕನ್ನಡತಿ ಸೃಷ್ಟಿ ಎಂಬಾಕೆಯ ಮೇಲೆ ನೀನು ನನ್ನ ಮುಂದೆ ಪೋನ್‌ನಲ್ಲಿ ಕನ್ನಡದಲ್ಲಿ ಮಾತನಾಡಬೇಡ. ಕನ್ನಡ ನನಗೆ ಅರ್ಥವಾಗದ ಭಾಷೆ ಎಂದು ತಗಾದೆ ತೆಗೆದಳು.

Kerala girl assaults Kannada girl in bengaluru: FIR registered

ನೀನು ನನ್ನ ಮುಂದೆ ಇಂಗ್ಲಿಷ್‌ನಲ್ಲೇ ಮಾತನಾಡು ಎಂದು ಬೈದು ಬೆದರಿಕೆ ಹಾಕಿದ್ದಳು. ಇದಕ್ಕೆ ಕನ್ನಡ ಯುವತಿ ಸೃಷ್ಟಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ತಲೆಗೆ ಬಲವಾಗಿ ಹೊಡೆದಳು. ಇದರ ಪರಿಣಾಮವಾಗಿ ತಲೆಗೆ ಬಲವಾದ ಪೆಟ್ಟು ಬಿದ್ದಿತು. ಇದರಿಂದ ಸೃಷ್ಟಿಯ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿತು. ಬಳಿಕ ಸಿಟಿ ಸ್ಕ್ಯಾನಿಂಗ್‌ ನಿಮಾನ್ಸ್‌ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಲಾಯಿತು ಎಂದು ತಿಳಿದು ಬಂದಿದೆ.

ಕಳೆದ 2 ವರ್ಷಗಳಿಂದಲೂ ಒಂದೇ ಪಿಜಿಯಲ್ಲಿ ರೂಮ್‌ಮೇಟ್‌ಗಳಾಗಿದ್ದ ಅವರಿಬ್ಬರ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ. ಅಲ್ಲದೆ ಆಗಾಗ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗಿ ಜಗಳು ಉಂಟಾಗುತ್ತಿದ್ದವು. ಆದರೆ ಗುರುವಾರ ಕನ್ನಡ ಭಾಷೆ ವಿಷಯಕ್ಕೆ ಕೇರಳ ಯುವತಿ ತಗಾದೆ ತೆಗೆದು ಕನ್ನಡ ಯುವತಿಯನ್ನು ಅವಮಾನಿಸಿದ್ದಲ್ಲದೆ ತೀರಾ ಕಟ್ಟದಾಗಿ ಮಾತನಾಡಿ ಪರಿಸ್ಥಿತಿ ಬಿಗಡಾಯಿಸಿತು. ಕನ್ನಡ ಯುವತಿ ಮೇಲೆ ಆಕೆ ಹಲ್ಲೆ ಮಾಡಿದಳು.

ಇದಾದ ಬಳಿಕ ಪಿಜಿ ಮಾಲೀಕರು ಕೇರಳ ಮೂಲದ ಅಸ್ಸೇಲಾ ಎಂಬ ಯುವತಿಯನ್ನು ಹೊರ ಕಳಿಸಿದರು. ಘಟನೆ ಬಳಿಕ ಕೇರಳ ಯುವತಿ ಮೇಲೆ ಮೈಕೋಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+