KEA Recruitment: ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಕೀ ಉತ್ತರ ಬಿಡುಗಡೆ, ಆಕ್ಷೇಪಣೆಗೆ ಸೆ.9 ಕೊನೆ ದಿನ!
KEA Recruitment: ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (CAR/DAR) ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ನೆನ್ನೆ ಭಾನುವಾರ ಸೆಪ್ಟೆಂಬರ್ 6ರಂದು ಲಿಖಿತ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದೆ. ಇಂದು ಸೋಮವಾರ (ಸೆಪ್ಟಂಬರ್ 7) ಆ ಪರೀಕ್ಷೆಯ ಕೀ ಉತ್ತರಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಬಿಡುಗಡೆ ಮಾಡಿದೆ. ಯಾರೆಲ್ಲ ಪರೀಕ್ಷೆ ಬರೆದಿದ್ದೀರಿ ನೀವು ಕೀ ಉತ್ತರಗಳನ್ನು ಗಮನಿಸಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ( KEA) ಪ್ರಕಟಿಸಿರುವ ಲಿಖಿತ ಪರೀಕ್ಷೆಯ ಕೀ ಉತ್ತರಗಳಿಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಕೆಇಎ ಪೋರ್ಟಲ್ ನಲ್ಲಿನ ಲಿಂಕ್ ಮೂಲಕ ಸಲ್ಲಿಸಬಹುದು. ಇದಕ್ಕೆ ಸೆಪ್ಟೆಂಬರ್ 9ರಂದು ಬೆಳಿಗ್ಗೆ 10.30ರವರೆಗೆ ಅವಕಾಶ ನೀಡಲಾಗಿದೆ.

ಪೂರ್ಣ ಮಾಹಿತಿಯೊಂದಿಗೆ ಆಕ್ಷೇಪಣೆ ಸಲ್ಲಿಸಬೇಕು. ಪ್ರತಿ ಆಕ್ಷೇಪಣೆಗೂ 25 ರೂಪಾಯಿ ಪಾವತಿಸಬೇಕು. ವಿಷಯ ತಜ್ಞರ ಸಮಿತಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಪ್ರಕಟಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ಭಾನುವಾರದ ಯಶಸ್ವಿ ಪರೀಕ್ಷೆ, ಬರೆದವರೆಷ್ಟು ಮಂದಿ?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಗರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಸಿಎಆರ್, ಡಿಎಆರ್) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈ ಸಂಬಂಧ ನೆನ್ನೆ ಭಾನುವಾರ ಯಶಸ್ವಿ ಯಾಗಿ ಪರೀಕ್ಷೆ ನಡೆದಿದೆ. ಅದರಲ್ಲಿ ಒಟ್ಟು ಅರ್ಜಿ ಸಲ್ಲಿಸಿದವರ ಪೈಕಿ ಶೇಕಡಾ 90ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕೆಇಎ ತಿಳಿಸಿದೆ.
ಮಿಕ್ಕುಳಿದ ವೃಂದದಲ್ಲಿ ಅರ್ಜಿ ಸಲ್ಲಿಸಿದ್ದ 1,42,220 ಅಭ್ಯರ್ಥಿಗಳ ಪೈಕಿ 1,14,079 (ಶೇ.80) ಅಭ್ಯರ್ಥಿಗಳು ಹಾಜರಾಗಿದ್ದರು. ಕಲ್ಯಾಣ ಕರ್ನಾಟಕದ ಒಟ್ಟು 32,191 ಅಭ್ಯರ್ಥಿಗಳಲ್ಲಿ 28,849 (ಶೇ.90) ಹಾಜರಾಗಿದ್ದರು. ಬೆಳಗಿನ ಅವಧಿಯಲ್ಲಿ 309 ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 60 ಕೇಂದ್ರಗಳಲ್ಲಿ ಗೊಂದಲ ಇಲ್ಲದೆ ಪರೀಕ್ಷೆಗಳು ಯಶಸ್ವಿಯಾಗಿ ನಡೆಯಿತು.
ಪರೀಕ್ಷೆಯಲ್ಲಿ ಯಾವುದೇ ಅಹಿಕರ ಘಟನೆ ನಡೆಯದಂತೆ ಎಲ್ಲ ವಿಧದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಪೊಲೀಸ್ ಬಿಗಿ ಭದ್ರತೆ ನೀಡಲಾಗಿತ್ತು. ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್‌ನಿಂದಲೇ ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ವಹಿಸಲಾಗಿತ್ತು.
ಅಂತಿಮ ಫಲಿತಾಂಶ ಬಿಡುಗಡೆ ಯಾವಾಗ?
ಇನ್ನೂ ಈ ಪರೀಕ್ಷೆ ಪೂರ್ಣಗೊಂಡ ಬಳಿಕ ಪರೀಕ್ಷಾ ಪ್ರಾಧಿಕಾರದ ಒಎಂಆರ್‌ಉತ್ತರ ಪತ್ರಿಕೆಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಯಿತು. ಈ ಮೂಲಕ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಯಾರು ಬೇಕಾದರೂ ಒಎಂ ಆರ್ ಪ್ರತಿಗಳನ್ನು ನೋಡಲು ಇದೊಂದು ಅತ್ಯಂತ ಮಹತ್ವದ ನಿರ್ಧಾರವಾಗಿದೆ ಎಂದು ಕೆಇಎ ವಿಶ್ವಾಸ ವ್ಯಕ್ತಪಡಿಸಿದೆ. ಪರೀಕ್ಷೆ ಯಶಸ್ವಿ ಬೆನ್ನಲ್ಲೆ ಕೀ ಉತ್ತರಗಳು ಬಿಡುಗಡೆ ಆಗಿದ್ದು, ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಅಂತಿಮ ಫಲಿತಾಂಶ ಬಿಡುಗಡೆ ಆಗಲಿದೆ.


Click it and Unblock the Notifications
