ಕೇಜ್ರಿವಾಲ್ ಊಟ ವಿರೋಧಿಸಿ ವಾಟಾಳ್ ಅಗ್ಗದ ಊಟ!

kcvp-chief-vatal-nagaraj-criticises-aap-kejriwal-fund-raising-dinner
ಬೆಂಗಳೂರು, ಮಾರ್ಚ್ 19: ಕಳೆದ ವಾರ ಬೆಂಗಳೂರಿಗೆ ಬಂದಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಕ್ಷದ ಬೆಂಬಲಿಗರ ಜತೆ ಕುಳಿತು ಊಟ ಮಾಡಿದ್ದರು. ಅದರಿಂದ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಅಂದಾಜು 50 ಲಕ್ಷ ರೂ. ಸಂಗ್ರಹವಾಗಿದೆ ಎಂದು ಎಎಪಿ ನಾಯಕರು ಹೇಳಿದ್ದರು.

ಮೋದಿ ಜತೆ ಊಟ ಇಲ್ಲ:
ಈ ಮಧ್ಯೆ, ಬಿಜೆಪಿಯು ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಜತೆ ಬೆಂಬಲಿಗರಿಗಾಗಿ ನವದೆಹಲಿಯ ಅಶೋಕಾ ಹೋಟೆಲಿನಲ್ಲಿ ಮಾರ್ಚ್ 26 (ಬುಧವಾರ)ರಂದು ಆಯೋಜಿಸಿದೆ ಎಂಬ ವರದಿ ಕೇಳಿಬಂದಿತ್ತು. ಆದರೆ ಬಿಜೆಪಿ ಇದನ್ನು ಅಲ್ಲಗಳೆದಿದೆ. 'ಲಂಚ್ ವಿತ್ ನರೇಂದ್ರ ಮೋದಿ' ಎಂಬ ಕಾರ್ಯಕ್ರಮವನ್ನು ತಮ್ಮ ಪಕ್ಷ ಆಯೋಜಿಸಿಲ್ಲ. ಅದೆಲ್ಲಾ ಗಾಳಿಸುದ್ದಿ. ಮೋದಿ ಜತೆಗೆ ಯಾವುದೇ ಊಟದ ಕಾರ್ಯಕ್ರಮಗಳನ್ನು ಪಕ್ಷ ಆಯೋಜಿಸಿಲ್ಲ' ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.

ಆದರೆ ತಾಜಾ ಸುದ್ದಿ ಏನೆಂದರೆ ಚಾಮರಾಜನಗರದ ಮಾಜಿ ಶಾಸಕ, 65 ವರ್ಷದ ವಾಟಾಳ್ ನಾಗರಾಜ್ ಅವರು ಚುನಾವಣಾ ನಿಧಿ ಸಂಗ್ರಹಕ್ಕಾಗಿ ಆಮ್ ಆದ್ಮಿ ಪಕ್ಷದ ಮುಖಂಡ ಕೇಜ್ರಿವಾಲ್ ಐಷಾರಾಮಿ ಹೋಟೆಲಿನಲ್ಲಿ ಊಟದಲ್ಲಿ ಪಾಲ್ಗೊಂಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.[ಬಿರುಸಿನ ಮತಯಾಚನೆ ಚಿತ್ರಗಳು]

ಕೇಜ್ರಿವಾಲ್ ಊಟ ವಿರೋಧಿಸಿ ಊಟಕ್ಕೆ ಕುಳಿತ ವಾಟಾಳ್:
ಕೇಜ್ರಿವಾಲ್ ಜತೆ ಊಟ ಮಾಡಲು 20 ಸಾವಿರ ರೂ. ನೀಡಬೇಕು. ಆದರೆ, ನನ್ನ ಜತೆ ಮುದ್ದೆ-ಉಪ್ಪಿನ ಕಾಯಿ ಸವಿಯಲು 5 ರೂಪಾಯಿ ಸಾಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಅದಕ್ಕಾಗಿಯೇ ಇಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ವಾಟಾಳ್ ಅವರು ಕೇಜ್ರಿವಾಲರ ಧೋರಣೆಯನ್ನು ಖಂಡಿಸಿ ಜನಸಾಮಾನ್ಯರೊಂದಿಗೆ ಬೆರೆತು ಮುದ್ದೆ-ಉಪ್ಪಿನಕಾಯಿ ಊಟ ಮಾಡಿದರು. ಈ ಊಟದಿಂದ ಸಂಪಾದಿಸುವ 5 ರೂಪಾಯಿಯಲ್ಲಿ 2 ರೂ. ಮುದ್ದೆಗೆ, 3 ರೂ. ಪಕ್ಷದ ನಿಧಿಗೆ ಬಳಸಿಕೊಳ್ಳುವುದಾಗಿಯೂ ವಾಟಾಳ್ ತಿಳಿಸಿದರು.

ಪಂಚತಾರಾ ಹೋಟೆಲಿನಲ್ಲಿ ಊಟ ಮಾಡಿ ದೇಣಿಗೆ ವಸೂಲಿ ಮಾಡುವ ಅರವಿಂದ್ ಕೇಜ್ರಿವಾಲ್ ಅವರ ಕ್ರಮ ನಾಟಕೀಯ ಮತ್ತು ನಾಚಿಕೆಗೇಡು. ಈ ಪಕ್ಷ ಜನಸಾಮಾನ್ಯರಿಗೆ ಸ್ಪಂದಿಸುವಂತೆ ಕಾಣುತ್ತಿಲ್ಲ. ಸಾಮಾನ್ಯರ್‍ಯಾರೂ 20 ಸಾವಿರ ರೂ. ಕೊಟ್ಟು ಊಟ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ನಾನಂತೂ ಶ್ರೀಮಂತರ ಭೋಜನ ಕೂಟವನ್ನು ವಿರೋಧಿಸಿ ನಡು ಬೀದಿಯಲ್ಲಿ ಊಟ ಮಾಡುತ್ತಿದ್ದೇನೆ. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವ ಇವರು, ಇಷ್ಟು ದುಬಾರಿ ಊಟ ಮಾಡುವುದು ಎಷ್ಟು ಸಮಂಜಸ? ಎಂದು ವಾಟಾಳ್ ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+