ತಡರಾತ್ರಿ ರಾಜ್ಯಕ್ಕೆ ಬಂದ ಕೆ.ಸಿ.ವೇಣುಗೋಪಾಲ್, ಕೈ ಮುಖಂಡರ ಜತೆ ಚರ್ಚೆ
ಬೆಂಗಳೂರು, ಜನವರಿ 15: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹಠಾತ್ತನೆ ರಾಜ್ಯಕ್ಕೆ ಬಂದಿದ್ದು, ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸೇರಿ ಮುಂದಿನ ನಡೆಗಳ ಬಗ್ಗೆ ಚರ್ಚೆಯಲ್ಲಿ ನಿರತರಾಗಿದ್ದಾರೆ.
ರಾಹುಲ್ ಗಾಂಧಿ ಅವರ ಜೊತೆ ದುಬೈ ಪ್ರವಾಸದಲ್ಲಿದ್ದ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ವೇಣುಗೋಪಾಲ್ ಅವರ ಹಠಾತ್ ಆಗಮನವೇ ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತಿದೆ.
ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇನ್ನುಳಿದ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ವಿವರ ಪಡೆದಿದ್ದಾರೆ.

ಕಾಣೆಯಾಗಿರುವ ಶಾಸಕರ ಬಗ್ಗೆ ಮಾಹಿತಿ ಪಡೆದಿರುವ ಅವರು, ಅತೃಪ್ತ ಶಾಸಕರ ಜೊತೆ ಸ್ವತಃ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ. ಕಾಣೆಯಾದ ಶಾಸಕರನ್ನು ಸಂಪರ್ಕಿಸಲು ಈಗಾಗಲೇ ಯತ್ನಗಳು ಪ್ರಾರಂಭವಾಗಿವೆ.












Click it and Unblock the Notifications