Get Updates
Get notified of breaking news, exclusive insights, and must-see stories!

ಕಾವೇರಿಪುರ ಕೊಲೆ ಕೇಸ್: ಹೆಂಡತಿಯನ್ನು ಕೊಂದು ಪರಾರಿಯಾಗಿದ್ದ ಪತಿ ಬಂಧನ

ಬೆಂಗಳೂರು, ಏಪ್ರಿಲ್‌ 22: ಪತಿ ತನ್ನ ಪತ್ನಿಯನ್ನು ಕೊಂದು ಮನೆಯ ಬೀಗ ಹಾಕಿ ಮನೆಯಲ್ಲಿಯೇ ಶವವಿಟ್ಟು ಪರಾರಿಯಾಗಿದ್ದ ವೈಕ್ತಿಯನ್ನು ಪೋಲಿಸರು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು ಮೂರು ದಿನದ ನಂತರ ಪತ್ನಿಯ ಶವ ಸಿಕ್ಕಿರುವ ಘಟನೆ ಬೆಂಗಳೂರಿನ ಕಾವೇರಿಪುರದ 13ನೇ ಕ್ರಾಸ್‌ ಬಳಿ ಘಟನೆ ನಡೆದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಅಶೋಕನನ್ನು ಪೋಲಿಸರು ಮಾಗಡಿ ತಾಲೂಕಿನ ಅಗಲಕೋಟೆ ಬಳಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಪಶ್ಚಿಮ ಬೆಂಗಳೂರಿನ ಕಾವೇರಿಪುರ 13 ಕ್ರಾಸ್‌ನಲ್ಲಿ ಈ ಭಯಾನಕ ಘಟನೆ ವರದಿಯಾಗಿದ್ದು, ಕಾರು ಚಾಲಕ ಅಶೋಕ್ (37) ಎಂಬಾತನೇ ತನ್ನ ಹೆಂಡತಿಯನ್ನು ಕೊಂದು ಮನೆಯಲ್ಲಿಟ್ಟು ಪರಾರಿಯಾಗಿದ್ದನು. ಅಶೋಕ್‌ ಕಳೆದ ಭಾನುವಾರ ರಾತ್ರಿ ತನ್ನ ಹೆಂಡತಿ ವನಜಾಕ್ಷಿಯನ್ನುಕೊಲೆ ಮಾಡಿದ್ದು ಇತನು ತನ್ನ ಹೆಂಡತಿಯ ಜೊತೆ ಜಗಳಮಾಡಿಕೊಂಡಿದ್ದನು ತನ್ನ ಹೆಂಡತಿಯ ಬಗ್ಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಡುತ್ತಿದ್ದ ಅಶೋಕ ಅವಳು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟು ಕೊಂದಿದ್ದಾನೆ ಎಂದು ಈ ಕೊಲೆಯ ಕಾರಣವನ್ನು ಪೋಲಿಸರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಕಾರು ಓಡಿಸುತ್ತಿದ್ದ ಅಶೋಕನಿಂದ ಕೊಲೆಯಾದ ಇತನ ಪತ್ನಿ ಗಾರ್ಮೆಂಟ್ಸ್‌ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಆದರೆ ರವಿವಾರ ಅಶೋಕ ತನ್ನ ಹೆಂಡತಿ ಬೇರೆಯವರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿವಾದವೇ ಈ ಕೊಲೆಗೆ ಕಾರಣ ತಿಳಿದು ಬಂದಿದೆ.

Kaveripura murder case: CIty police arrested Man who killed his wife

ಅಶೋಕ ಮತ್ತು ಕೊಲೆಯಾಗಿರುವ ವನಜಾಕ್ಷಿ ಮದುವೆಯಾಗಿ 14 ವರ್ಷಗಳು ಕಳೆದಿದ್ದವು ಆದರೆ ಅವಳಿಗೆ ಅನೈತಿಕ ಸಂಬಂಧವಿದೆ ಎಂದು ದಿನನಿತ್ಯವು ಜಗಳವಾಡುತ್ತಿದ್ದ ಅಶೋಕ ತನ್ನ ಹೆಂಡತಿ ತುಂಬಾ ಸಮಯ ಮೊಬೈಲ್‌ ಫೋನ್‌ನಲ್ಲಿ ನಿರತಳಾಗಿದ್ದಳೆಂದು ಅವಳ ಮೊಬೈಲ್‌ ಫೋನ್‌ನಲ್ಲಿ ರೇಕಾರ್ಡಿಂಗ್‌ ಇಟ್ಟು ತನ್ನ ಹೆಂಡತಿಯು ಯಾರ ಜೊತೆ ಮಾತನಾಡುತ್ತಾಳೆಂದು ತಿಳಿದುಕೊಂಡಿದ್ದನು.

Kaveripura murder case: CIty police arrested Man who killed his wife

ಕಳೆದ ಭಾನುವಾರ ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಕೋಪದ ಭರದಲ್ಲಿ ಅಶೋಕ ತನ್ನ ಹೆಂಡತಿಯ ಕುತ್ತುಗೆಯನ್ನು ಹಿಚುಕಿ ಕೊಂದಿದ್ದಾನೆ ಬಳಿಕ ಕೊಂದ ಶವವನ್ನು ಮನೆಯಲ್ಲಿಯೇ ಇಟ್ಟು ಬೇರೆ ಊರಿಗೆ ಪರಾರಿಯಾಗಿದ್ದನು ಈ ಘಟನೆ ನಡೆದಾಗ ಇವರಿಬ್ಬರ ಮಕ್ಕಳು ವಿಜಯಪುರದಲ್ಲಿದ್ದರು ಎಂದು ಪೋಲಿಸರು ತಿಳಿಸಿದರು. ಇನ್ನು ಪೊಲೀಸರ ವಶದಲ್ಲಿರುವ ಅಶೋಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Recommended Video

      ಥರ್ಡ್ ಅಂಪೈರ್ ಈ ಮೋಸ ಮಾಡದೇ ಇದ್ದಿದ್ರೆ ಮುಂಬೈ ಗ್ಯಾರೆಂಟಿ ಗೆಲ್ತಿತ್ತು | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+